ಫ್ರೀ ಬಸ್ ಗೆ ಹತ್ತುವ ಮುನ್ನ ಈ ವಿಚಾರಕ್ಕೆ ಗಮನಕೊಡಿ! ಶಕ್ತಿಯೋಜನೆಯಲ್ಲಿ ಹೊಸ ನಿಯಮ ಜಾರಿ
ಇನ್ನು ಮುಂದೆ ಸರಕಾರಿ ಬಸ್ ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಕೆಲವು ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಪಾಲನೆ ಮಾಡದೆ ಇದ್ದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಚುನಾವಣೆಗೂ ಮುನ್ನ ಘೋಷಣೆ ಮಾಡಲ್ಪಟ್ಟ ಪಂಚ ಯೋಜನೆಗಳಲ್ಲಿ ಶಕ್ತಿ ಯೋಜನೆ (Shakti Scheme) ಮೊದಲು ಜಾರಿಗೆ ಬಂದಿದ್ದು, ಇದರಿಂದಾಗಿ ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿ ಸರಕಾರಿ ಬಸ್ ನಲ್ಲಿ ಪ್ರಯಾಣ ಮಾಡಬಹುದಾಗಿದೆ.
ಈ ಯೋಜನೆ ಅನೇಕ ಮಹಿಳೆಯರ ನಿತ್ಯ ಓಡಾಟಕ್ಕೆ ಬಹಳ ಅನುಕೂಲತೆ ಒದಗಿಸಿದ್ದು ಸರಕಾರಿ ಬಸ್ ಗೆ ನೀಡುವ ಪ್ರಾತಿನಿಧ್ಯತೆ ಕೂಡ ಹೆಚ್ಚಾಗಿದೆ. ಮಹಿಳಾ ಪ್ರಯಾಣಿಕರ ಸಂಖ್ಯೆ ಅಧಿಕವಾದ ಹಿನ್ನೆಲೆ ಅನೇಕ ಧಾರ್ಮಿಕ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿಯೂ ಆದಾಯ ಹೆಚ್ಚಾಗುತ್ತಿರುವ ಬಗ್ಗೆ ಇತ್ತೀಚೆಗಷ್ಟೇ ವರದಿಯಾಗಿತ್ತು.
ರೈತರ ಜಮೀನಿನಲ್ಲಿ ಕರೆಂಟ್ ಕಂಬ ಇದ್ರೆ ಹಣ ಸಿಗುತ್ತಾ! ಯೋಜನೆ ಬಗ್ಗೆ ಸರ್ಕಾರ ಕೊಟ್ಟ ಸ್ಪಷ್ಟನೆ
ಕಾಂಗ್ರೆಸ್ ನ ಸರಕಾರದಿಂದ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜಾರಿಗೆ ಬಂದ ಈ ಶಕ್ತಿ ಯೋಜನೆಯೂ ರಾಜ್ಯದ ಮಹಿಳೆಯರು ರಾಜ್ಯದ ಒಳಗೆ ಮಾತ್ರವೇ ಪ್ರಯಾಣ ಮಾಡಬಹುದಾಗಿದೆ. ಅನ್ಯ ರಾಜ್ಯಕ್ಕೆ ಇಲ್ಲಿಂದ ತೆರಳುವ ಸರಕಾರಿ ಬಸ್ ಗಳಿಗೆ ಈ ಸೇವೆ (Free Bus) ಇರಲಾರದು ಎನ್ನಬಹುದು.
ಅದೇ ರೀತಿ ಎಸಿ, ಸ್ಲೀಪರ್ ಕೋಚ್ , ಲಕ್ಶೂರಿ ಬಸ್ ಗಳಿಗೆ ಉಚಿತ ಸೇವೆ ಇರಲಾರದು ಹಾಗಾಗಿ ಸಾರಿಗೆ ಇಲಾಖೆಯ ಸಾಮಾನ್ಯ ನಾಲ್ಕು ನಿಗಮದಲ್ಲಿ ಈ ಒಂದು ಉಚಿತ ಸೇವೆ ಇದೆ ಎಂದು ಹೇಳಬಹುದು.
ಷರತ್ತು ಅನ್ವಯ ಪಾಲನೆ ಕಡ್ಡಾಯ
ಇನ್ನು ಮುಂದೆ ಸರಕಾರಿ ಬಸ್ ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಕೆಲವು ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಪಾಲನೆ ಮಾಡದೆ ಇದ್ದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
*KSRTC ನಲ್ಲಿ ಈಗ ಮಹಿಳೆಯರದ್ದೇ ದರ್ಬಾರ್ ಆದ ಕಾರಣ ಪುರುಷರು ಟಿಕೇಟ್ ಗೆ (Bus Ticket) ಹಣ ನೀಡಿ ಕೂಡ ಸೀಟ್ ಇಲ್ಲದೆ ನಿಂತು ಕೊಂಡು ಪ್ರಯಾಣಿಸುವ ಸ್ಥಿತಿ ಎದುರಾಗಿದೆ ಹಾಗಾಗಿ ಇನ್ನು ಮುಂದೆ ಪುರುಷರಿಗೆ ಸರಕಾರಿ ಬಸ್ ನಲ್ಲಿ 50% ಮೀಸಲಾತಿ ಇರಲಿದ್ದು ಅವರಿಗೆ ಸೀಟ್ ಬಿಟ್ಟುಕೊಡಬೇಕಾಗಲುಬಹುದು. ಈ ನಿಯಮವನ್ನು ಮಹಿಳೆಯರು ಪಾಲಿಸಲೇ ಬೇಕು.
ಅನ್ನಭಾಗ್ಯ ಯೋಜನೆ ಹಣ 3 ತಿಂಗಳಿಂದ ಬಾರದವರಿಗೆ ಮಹತ್ವದ ಸೂಚನೆ! ಈ ಕೆಲಸ ಮಾಡಿ
*ಇನ್ನು ಮುಂದೆ KSRTC ಬಸ್ ನಲ್ಲಿ ಉಚಿತ ಪ್ರಯಾಣ ಮಾಡುವಾಗ ನಿಮ್ಮೊಂದಿಗೆ ಲಗೇಜ್ ಕ್ಯಾರಿ ಮಾಡುವಂತಿದ್ದರೆ ಅದಕ್ಕೆ ಟಿಕೆಟ್ ಕೊಳ್ಳುವುದು ಕಡ್ಡಾಯವಾಗಿದೆ. ನಿಮ್ಮ ಲಗೇಜ್ ಭಾರೀ ಗಾತ್ರದ್ದಾಗಿದ್ದಯ ತುಂಬಾ ಭಾರ ಆಗಿದ್ದರೆ ಅದಕ್ಕೆ ಟಿಕೆಟ್ ಮಾಡಿಸಬೇಕು. ಕೋಳಿ, ನಾಯಿ, ಬೆಕ್ಕು ಪ್ರಾಣಿಗಳನ್ನು ಸಾಗಿಸುವಾಗ ಅದಕ್ಕೆ ಪ್ರತ್ಯೇಕ ಟಿಕೇಟ್ ಖರೀದಿ ಮಾಡಲೇಬೇಕು.
*ಮಹಿಳೆಯರು ಪುರುಷರ ಸೀಟ್ ನಲ್ಲಿ ಕೂತರೆ ದಂಡ ವಿಧಿಸುವ ಯಾವ ನಿಯಮ ಇಲ್ಲ. ಪುರುಷರ ಸೀಟ್ ಖಾಲಿ ಇದ್ದು ಯಾರು ಪುರುಷ ಪ್ರಯಾಣಿಕರು ಕೂತಿರದಿದ್ದರೆ ಅಂತಹ ಸೀಟ್ ನಲ್ಲಿ ಕೂರಬಹುದು. ಒಂದು ವೇಳೆ ಪುರುಷ ತನಗೆ ಸೀಟ್ ಬಿಟ್ಟು ಕೊಡುವಂತೆ ಕೇಳಿಕೊಂಡರೆ ಬಸ್ ನ ನಿರ್ವಾಹಕರು (conductor) ಸೂಚಿಸಿದಂತೆ ನಡೆದುಕೊಳ್ಳಬೇಕು ಎಂಬ ನಿಯಮ ಇದೆ.
Implementation of new rule in Shakti Yojana, Free Bus Facility