ರೈತರ ಜಮೀನಿನಲ್ಲಿ ಕರೆಂಟ್ ಕಂಬ ಇದ್ರೆ ಹಣ ಸಿಗುತ್ತಾ! ಯೋಜನೆ ಬಗ್ಗೆ ಸರ್ಕಾರ ಕೊಟ್ಟ ಸ್ಪಷ್ಟನೆ

Story Highlights

ಕೃಷಿ ಜಮೀನಿನಲ್ಲಿ ಕರೆಂಟ್ ಕಂಬ (Electric Poll) ಅಥವಾ ಟ್ರಾನ್ಸ್ಫರ್ಮರ್ ಇರುವ ರೈತರಿಗೆ ತಿಂಗಳಿಗೆ ಅಷ್ಟು ಹಣ ಸಿಗುತ್ತೆ ಇಷ್ಟು ಹಣ ಸಿಗುತ್ತೆ ಎನ್ನುವ ವೈರಲ್ ಸುದ್ದಿ ಎಲ್ಲಾ ಕಡೆ ವೈರಲ್ ಆಗಿದೆ.

ಈ ಸಾಮಾಜಿಕ ಜಾಲತಾಣವೇ ಹಾಗೆ ಇಲ್ಲಿ ಯಾವಾಗ ಯಾವಾ ಸುದ್ದಿ ಬಹಳ ಬೇಗ ವೈರಲ್ (Viral) ಆಗುತ್ತದೆ ಎನ್ನುವುದನ್ನು ಊಹಿಸುವುದು ಅಸಾಧ್ಯ. ಅದರಲ್ಲೂ ಸಾಮಾನ್ಯವಾಗಿ ಲೈಕ್ ಹಾಗು ಶೇರ್ ಗಳಿಗಾಗಿ ಅನೇಕ ಮಂದಿ ಸುಳ್ಳು ಸುದ್ದಿಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ

ಸಾಮಾನ್ಯವಾಗಿ ಕೃಷಿ ಭೂಮಿ ಅಥವಾ ರೈತರ ಜಮೀನಿನಲ್ಲಿ ನೀವು ವಿದ್ಯುತ್ ಸಂಪರ್ಕಗಳ (Electricity) ವ್ಯವಸ್ಥೆ ನೋಡಿರಬಹುದು, ರೈತರಿಗೆ ನಿರಂತರವಾಗಿ ವಿದ್ಯುತ್ ಅವಶ್ಯಕತೆ ಇರುತ್ತದೆ ಹೀಗಾಗಿ ಸರ್ಕಾರಗಳು ಸಾಕಷ್ಟು ಉತ್ತೇಜನ ನೀಡಿವೆ. ವಿದ್ಯುತ್ ಕಂಬಗಳು ಹಾಗು Transformer ಗಳು ಸಾಮಾನ್ಯವಾಗಿ ಕೃಷಿ ಜಮೀನನಲ್ಲಿ ತೊಡಕಾದರು ಸಹ ಇವುಗಳ ಅಗತ್ಯತೆ ಇದೆ.

ಅನ್ನಭಾಗ್ಯ ಯೋಜನೆ ಹಣ 3 ತಿಂಗಳಿಂದ ಬಾರದವರಿಗೆ ಮಹತ್ವದ ಸೂಚನೆ! ಈ ಕೆಲಸ ಮಾಡಿ

ಆದರೆ ಇದೀಗ ಕೃಷಿ ಜಮೀನಿನಲ್ಲಿ ಕರೆಂಟ್ ಕಂಬ (Electric Poll) ಅಥವಾ ಟ್ರಾನ್ಸ್ಫರ್ಮರ್ ಇರುವ ರೈತರಿಗೆ ತಿಂಗಳಿಗೆ ಅಷ್ಟು ಹಣ ಸಿಗುತ್ತೆ ಇಷ್ಟು ಹಣ ಸಿಗುತ್ತೆ ಎನ್ನುವ ವೈರಲ್ ಸುದ್ದಿ ಎಲ್ಲಾ ಕಡೆ ವೈರಲ್ ಆಗಿದೆ. ಸರ್ಕಾರವೇ ಇಂತಹ ರೈತರಿಗೆ ಹಣ ನೀಡುತ್ತದೆ ಎಂದು ಸುಳ್ಳುಸುದ್ದಿ ವರದಿಯಾಗಿತ್ತು

ಆದರೆ ಇದೀಗ ವಿದ್ಯುತ್ ಇಲಾಖೆ ಇದೊಂದು ಸುಳ್ಳು ಸುದ್ದಿ ಎಂದು ವರದಿ ಮಾಡಿದೆ. ಹೌದು ಇಲಾಖೆ ಯಾವುದೇ ಆ ರೀತಿಯ ಹಣವನ್ನು ರೈತರಿಗೆ ನೀಡುತ್ತಿಲ್ಲ ಆ ಪ್ರಸ್ತಾಪ ಕೂಡ ಬಂದಿಲ್ಲವೆಂದು ಹೇಳಿದೆ.

ಗೃಹಲಕ್ಷ್ಮಿ 11ನೇ ಕಂತಿನ ಹಣ ಒಟ್ಟಾರೆ ಈ 28 ಜಿಲ್ಲೆಗಳಿಗೆ ಬಿಡುಗಡೆ! ಜಿಲ್ಲೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ

Electricity transformers subsidyಈ ಬಗ್ಗೆ ಬಹಳ ಸ್ಪಷ್ಟವಾಗಿ ಹೇಳಿಕೊಂಡಿರುವ ರಾಜ್ಯ ಸರ್ಕಾರ ನಮ್ಮ ಯಾವುದೇ ಸಂಸ್ಥೆ ಆಗಲಿ ರಾಜ್ಯ ಸರಕಾರ ಅಥವಾ ಇಂಧನ ಇಲಾಖೆ, ಕೆಪಿಟಿಸಿಎಲ್ ಅಥವಾ ಬೆಸ್ಕಾಂ ಸೇರಿದಂತೆ ಯಾವುದೇ ಎಸ್ಕಾಂಗಳು ಈ ರೀತಿಯ ಪ್ರಕಟಣೆ ಹೊರಡಿಸಿಲ್ಲ. ಇದೊಂದು ಶುದ್ಧ ಸುಳ್ಳು ಎಂದು ತಿಳಿಸಿದೆ.

ಒಂದು ವೇಳೆ ಈ ರೀತಿಯ ಯೋಜನೆಗಳಿದ್ದರೆ ಸರ್ಕಾರವೇ ಸ್ಪಷ್ಟ ಪಡಿಸಲಿದೆ ಅದಕ್ಕೂ ಮೊದಲೇ ಈ ರೀತಿಯ ಸುದ್ದಿಗಳಿಗೆ ಕಿವಿಗೊಡದೆ ಹಾಗು ಈ ರೀತಿಯ ಸ್ಕಾಮ್ ಗಳಿಗೆ ಹಣ ನೀಡಬೇಡಿ ಎಂದು ಟ್ವಿಟರ್ ಪ್ರಕಟಣೆ ನೀಡಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ 1912 ಕರೆ ಮಾಡಬಹುದು ಎಂದು ತಿಳಿಸಲಾಗಿದೆ.

ಹೊಸ ಬಿಪಿಎಲ್ ರೇಷನ್ ಕಾರ್ಡ್ ಗಳ ಅರ್ಜಿ ಸಲ್ಲಿಕೆ ಕುರಿತು ಸಿಕ್ತು ದೊಡ್ಡ ಅಪ್ಡೇಟ್! ಇಲ್ಲಿದೆ ಮಾಹಿತಿ

ಇನ್ನು ಈ ರೀತಿಯ ವದಂತಿ ಜೊತೆಗೆ ವಾಟ್ಸಪ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ (Social Media) ಯಾವುದೇ ಲಿಂಕ್ ಗಳನ್ನು ಕ್ಲಿಕ್ಕಿಸಬೇಡಿ, ಈ ಮೂಲಕ ನೀವು ಮೋಸ ಹೋಗಬಹುದು ಎಂಬ ಎಚ್ಚರಿಕೆಯನ್ನು ಸಹ ನೀಡಿದೆ. ಆ ರೀತಿಯ ಯಾವುದೇ ಯೋಜನೆ ಇದ್ದರೆ ಸರ್ಕಾರ ಅಥವಾ ವಿದ್ಯುತ್ ಇಲಾಖೆಯೇ ಪ್ರಚಾರ ಮಾಡಲಿದೆ.

Clarification given by the government about the Scheme

Related Stories