ಅನ್ನಭಾಗ್ಯ ಯೋಜನೆ ಹಣ 3 ತಿಂಗಳಿಂದ ಬಾರದವರಿಗೆ ಮಹತ್ವದ ಸೂಚನೆ! ಈ ಕೆಲಸ ಮಾಡಿ

Story Highlights

5kg ಅಕ್ಕಿಯ ಬದಲು ಹಣ ನೀಡಲು ಮುಂದಾಗಿರುವ ಸರ್ಕಾರದ ಪ್ರಮುಖ ಅನ್ನಭಾಗ್ಯ ಯೋಜನೆಯ ಬಗ್ಗೆ ಇಲಾಖೆ ಹೊಸ ಸುದ್ದಿ ಹೊರಡಿಸಿದೆ.

Annabhagya Yojana : ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳು ಈಗಾಗಲೇ ಜನರ ಕೈಗೆ ತಲುಪಿದೆ. ಇದರ ನಡುವೆಯೂ ಕೂಡ ಕೆಲ ತಾಂತ್ರಿಕ ಸಮಸ್ಯೆ ಹಾಗೂ ಸರ್ವರ್ ಸಮಸ್ಯೆಗಳ ನಡುವೆ ಅನೇಕರಿಗೆ ಹಣ ಬರುವದು ತಪ್ಪಿದೆ. ಈಗಾಗಲೇ ಅನ್ನಭಾಗ್ಯ ಹಣ ಕೂಡ ನಿಧಾನವಾಗಿ ಪ್ರತಿಯೊಬ್ಬರಿಗೆ ಜಮೆ ಆಗುತ್ತಿದೆ.

ಮಹತ್ವದ ಸೂಚನೆ ಕೊಟ್ಟ ಇಲಾಖೆ

5kg ಅಕ್ಕಿಯ ಬದಲು ಹಣ ನೀಡಲು ಮುಂದಾಗಿರುವ ಸರ್ಕಾರದ ಪ್ರಮುಖ ಅನ್ನಭಾಗ್ಯ ಯೋಜನೆಯ ಬಗ್ಗೆ ಇಲಾಖೆ ಹೊಸ ಸುದ್ದಿ ಹೊರಡಿಸಿದೆ. ಹೌದು ಈಗಾಗಲೇ ಹಣ ಬಾರದವರಿಗೆ ಸಂದೇಶವೊಂದನ್ನು ನೀಡಿದೆ.

ಮೊದಲನೇಯದಾಗಿ ಅನ್ನಭಾಗ್ಯ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ಸಮಸ್ಯೆ ಇದ್ದರೆ ಹತ್ತಿರದ ನ್ಯಾಯಬೆಲೆ ಅಂಗಡಿಯಲ್ಲಿ ಹೋಗಿ ವಿಚಾರಿಸಬೇಕು ಅಲ್ಲಿ ನಿಮಗೆ ಎಲ್ಲಾ ಪರಿಹಾರ ಸಿಗಲಿದೆ.

ರೈತರೇ ಗಮನಿಸಿ, ಬೆಳೆ ಪರಿಹಾರ ಮೊತ್ತ ಜಮೆಯಾಗಬೇಕಿದ್ದಲ್ಲಿ ನೋಂದಣಿ ಮಾಡಲು ಇದು ಸಕಾಲ

Annabhagya Schemeಹಾಗೆಯೇ ಎರಡನೆಯದಾಗಿ ರೇಷನ್ ಕಾರ್ಡ್ EKYC ಕಡ್ಡಾಯವಾಗಿ ಮಾಡಲೇಬೇಕು. ಹಣ ಬರುವ ಮುಖ್ಯಸ್ಥೆಯ ಬ್ಯಾಂಕ್ ಖಾತೆಗೆ (Bank Account) ಆಧಾರ್ ಲಿಂಕ್ ಆಗಿರಬೇಕು ಹಾಗೂ ಬ್ಯಾಂಕ್ E KYC ತಪ್ಪದೆ ಮಾಡಿ ಎಂದು ಸೂಚಿಸಿದೆ.

ಈ ಮೇಲಿನ ಎಲ್ಲಾ ಕೆಲಸ ಮಾಡುತ್ತಿರುವ ಜನರಿಗೆ ಹಣ ಕೂಡ ತಕ್ಷಣವೇ ಬರುತ್ತಿದೆ ಎಂದು ಸರ್ಕಾರದ ಅಧಿಕಾರಿಗಳು ಈಗಾಗಲೇ ತಿಳಿಸಿರುತ್ತಾರೆ. ಕೂಡಲೇ ಈ ಎಲ್ಲಾ ಕೆಲಸಗಳನ್ನು ಮುಗಿಸಿ ಎಂದು ಇಲಾಖೆ ಮಾಹಿತಿ ನೀಡಿದೆ.

ಗೃಹಲಕ್ಷ್ಮಿ 11ನೇ ಕಂತಿನ ಹಣ ಒಟ್ಟಾರೆ ಈ 28 ಜಿಲ್ಲೆಗಳಿಗೆ ಬಿಡುಗಡೆ! ಜಿಲ್ಲೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ

ಈ ಪ್ರಮುಖ ಕೆಲಸಗಳನ್ನು ಮಾಡಿದ ಬಳಿಕವೂ ನಿಮಗೆ ಹಣ ಜಮೆ ಆಗಲಿಲ್ಲ ಎಂದರೆ ಇದು ಟೆಕ್ನಿಕಲ್ ಸಮಸ್ಯೆ ಎಂದು ಪರಿಗಣಿಸಿ ಅಂತಹವರು ಹಣ ಜಮೆ ಆಗುವ ತನಕ ಸ್ವಲ್ಪ ಕಾಯಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Update for those who have not received Annabhagya Yojana money for 3 months

Related Stories