ರೈತರೇ ಗಮನಿಸಿ, ಬೆಳೆ ಪರಿಹಾರ ಮೊತ್ತ ಜಮೆಯಾಗಬೇಕಿದ್ದಲ್ಲಿ ನೋಂದಣಿ ಮಾಡಲು ಇದು ಸಕಾಲ
ಇದೀಗ 2024 ರ ಮುಂಗಾರು ಹಂಗಾಮಿನ ಫಸಲ್ ಬಿಮಾ ಯೋಜನೆಯಡಿ ನೊಂದಾಯಿಸಲು ಅವಕಾಶ ಮಾಡಿ ಕೊಟ್ಟಿದೆ. ಈ ವಿಮೆ (Insurance) ಮಾಡಿದ್ದಲ್ಲಿ ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಸಂಭವಿಸಿದ ರೈತರಿಗೆ ಪರಿಹಾರ ಸಿಗಲಿದೆ.
ಈ ಭಾರಿ ಬರಗಾಲದಿಂದ ರೈತರಿಗೆ ಬಹಳಷ್ಟು ನಷ್ಟ ಉಂಟಾಗಿತ್ತು. ಒಂದೆಡೆ ಬೆಳೆಸಿದ ಕೃಷಿ ಹಾನಿ, ಇನ್ನೊಂದೆಡೆ ಕೃಷಿಗಾಗಿ ಮಾಡಿದಂತಹ ಸಾಲ (Agriculture Loan), ಜೊತೆಗೆ ಸರಿಯಾದ ಇಳುವರಿಯು ಇಲ್ಲ, ಸಾಲ ಪಾವತಿ (Loan Re Payment) ಮಾಡಲು ಹಣವೂ ಇಲ್ಲ.
ಅಷ್ಟರ ಮಟ್ಟಿಗೆ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಾಗಾಗಿ ನಷ್ಟ ಉಂಟಾದ ರೈತರಿಗೆ ಬೆಳೆ ಪರಿಹಾರ ನೀಡಲು ಸರಕಾರ ಮುಂದಾಗಿದ್ದು ಬೆಳೆ ವಿಮೆ (crop compensation) ಮಾಡಿಸಿದಂತಹ ರೈತರಿಗೆ ಬಹಳಷ್ಟು ಸಹಕಾರಿ ಯಾಗಿದೆ.
ಇದೀಗ ಹೆಚ್ಚಿನ ಕಡೆ ಕೃಷಿ ಚಟುವಟಿಕೆಗಳು (Agriculture) ಚುರುಕು ಪಡೆದುಕೊಂಡಿದ್ದು ರೈತರು ಬಿತ್ತನೆ ಮಾಡಲು ಮುಂದಾಗಿದ್ದಾರೆ. ಅದೇ ರೀತಿ ಸರಕಾರ ಕೂಡ ನಾನಾ ಯೋಜನೆಗಳನ್ನು ರೈತರಿಗೆ ನೀಡಲು ಮುಂದಾಗಿದೆ.
ಗೃಹಲಕ್ಷ್ಮಿ 11ನೇ ಕಂತಿನ ಹಣ ಒಟ್ಟಾರೆ ಈ 28 ಜಿಲ್ಲೆಗಳಿಗೆ ಬಿಡುಗಡೆ! ಜಿಲ್ಲೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ
ಇದೀಗ 2024 ರ ಮುಂಗಾರು ಹಂಗಾಮಿನ ಫಸಲ್ ಬಿಮಾ ಯೋಜನೆಯಡಿ ನೊಂದಾಯಿಸಲು ಅವಕಾಶ ಮಾಡಿ ಕೊಟ್ಟಿದೆ. ಈ ವಿಮೆ (Insurance) ಮಾಡಿದ್ದಲ್ಲಿ ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಸಂಭವಿಸಿದ ರೈತರಿಗೆ ಪರಿಹಾರ ಸಿಗಲಿದೆ. ಹಾಗಾಗಿ ರೈತರು ನೋಂದಾಯಿಸಿ ಕೊಳ್ಳಬೇಕಿದ್ದು, ವಿಮೆ ನೋಂದಣಿಗೆ ಇದೀಗ ಉತ್ತಮ ಸಮಯ ಎಂದೇ ಹೇಳಬಹುದು
ಏನಿದು ವಿಮೆ ನೋಂದಣಿ?
ರೈತರು ಫಸಲ್ ಬೀಮಾ ಯೋಜನೆಯ ಮೂಲಕ ಬೆಳೆ ವಿಮೆ ಮಾಡಿಸಿದ್ದಲ್ಲಿ ನೈಸರ್ಗಿಕ ವಿಪತ್ತು ಹಾನಿಗೊಳಗಾದ ಬೆಳೆ ನಷ್ಟಕ್ಕೆ ರೈತನು ವಿಮಾ ಸೌಲಭ್ಯ ಪಡೆಯಬಹುದು. ಅಂದರೆ ಪ್ರಾಕೃತಿಕ ವಿಕೋಪಗಳಾದ ನೈಸರ್ಗಿಕ ಬೆಂಕಿ, ಬರ ಪರಿಸ್ಥಿತಿ, ಬಿರುಗಾಳಿ, ನೀರಿನಿಂದುಂಟಾಗುವ ಹಾನಿ, ಪ್ರವಾಹ, ಇತ್ಯಾದಿ ಸಂಭವಿಸುವ ಹಾನಿಗಳಿಗೆ ಪರಿಹಾರ ಪಡೆಯಬಹುದು.
ಹೊಸ ಬಿಪಿಎಲ್ ರೇಷನ್ ಕಾರ್ಡ್ ಗಳ ಅರ್ಜಿ ಸಲ್ಲಿಕೆ ಕುರಿತು ಸಿಕ್ತು ದೊಡ್ಡ ಅಪ್ಡೇಟ್! ಇಲ್ಲಿದೆ ಮಾಹಿತಿ
ನೋಂದಣಿ ಮಾಡಿ
ಈ ಭಾರಿ ಮಳೆ ಅಭಾವದಿಂದ ಬಿತ್ತನೆಗೆ ಹಾನಿಯಾದರೆ ನೆರೆ, ಪ್ರವಾಹಗಳಿಂದ ಬೆಳೆ ನಷ್ಟ ಆದರೆ ಹಾನಿ ಉಂಟಾದ ರೈತರಿಗೆ ವಿಮೆ ನೆರವಿಗೆ ಬರುತ್ತದೆ. ಇದೀಗ ಕೆಲವು ಜಿಲ್ಲೆಯಲ್ಲಿ ಟೊಮೆಟೊ ಮತ್ತು ತೊಗರಿ ಬೆಳೆಗೆ ಜುಲೈ 15, ನೆಲಗಡಲೆ ಬೆಳೆಗೆ ಜುಲೈ 31 ಮತ್ತು ಉಳಿದಂತೆ ರಾಗಿ, ಭತ್ತ, ಮುಸುಕಿನ ಜೋಳ ಮತ್ತು ಹುರುಳಿ ಬೆಳೆಗಳಿಗೆ ಆ.16 ರವರೆಗೆ ವಿಮೆಗೆ ನೋಂದಾಯಿಸಿಕೊಳ್ಳಲು ಸಮಯ ನೀಡಲಾಗಿದೆ.
ಬೇರೆ ಬೇರೆ ಜಿಲ್ಲೆಯ ವಿವಿಧ ಬೆಳೆಗಳಿಗೆ ಕೊನೆಯ ದಿನಾಂಕವನ್ನು ನಿಗದಿ ಮಾಡಿದ್ದು ಈ ಬಗ್ಗೆ ತಿಳಿಯಲು ಸಂರಕ್ಷಣೆ ವೆಬ್ https://samrakshane.karnataka.gov.in ಇಲ್ಲಿ ನೋಡಬಹುದು.
ಇನ್ಮುಂದೆ ಬೇಕಾಬಿಟ್ಟಿ ವಿದ್ಯುತ್ ಬಳಸುವ ಮುನ್ನ ಎಚ್ಚರ! ಗೃಹಜ್ಯೋತಿ ಯೋಜನೆ ಸೌಲಭ್ಯ ಕಟ್
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ರೈತರು ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಹತ್ತಿರದ ಬ್ಯಾಂಕುಗಳನ್ನು (Bank) ಸಂಪರ್ಕಿಸಿ ಮಾಹಿತಿ ಪಡೆದು ವಿಮೆಗೆ ನೋಂದಾಯಿಸಬಹುದು.
ನೊಂದಣಿಗೆ ರೈತರು ಅರ್ಜಿಯೊಂದಿಗೆ ಪಹಣಿ ದಾಖಲೆ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಇತ್ಯಾದಿ ಮಾಹಿತಿಯನ್ನು ಸಂರಕ್ಷಣೆ ತಂತ್ರಾಂಶದಲ್ಲಿ ನೀಡಬೇಕು
This is the Right time to register for crop compensation amount to be deposit