ಇನ್ಮುಂದೆ ಬೇಕಾಬಿಟ್ಟಿ ವಿದ್ಯುತ್ ಬಳಸುವ ಮುನ್ನ ಎಚ್ಚರ! ಗೃಹಜ್ಯೋತಿ ಯೋಜನೆ ಸೌಲಭ್ಯ ಕಟ್
200 ಯುನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದ್ದಲ್ಲಿ, ಅಂತವರನ್ನು ಗೃಹಜ್ಯೋತಿ ಸೌಲಭ್ಯದಿಂದ ವಂಚಿತರಾಗಿಸಲು ಇದೀಗ ರಾಜ್ಯ ಸರ್ಕಾರ ನಿರ್ಧರಿಸಿದೆ.
Gruha Jyothi Scheme : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ತಾವು ಐದು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಚುನಾವಣೆಯ ವೇಳೆ ಭರವಸೆ ನೀಡಿದ್ದರು. ಇನ್ನು ಕೊಟ್ಟ ಮಾತಂತೆ ಅಧಿಕಾರಕ್ಕೆ ಬಂದ ನಂತರ ಗೃಹ ಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆ, ಹಾಗೂ ಯುವನಿಧಿ ಯೋಜನೆಗಳನ್ನು ಜಾರಿಗೆ ತಂದಿದೆ.
ಇನ್ನು ಇದೀಗ ರಾಜ್ಯದ ಜನರು ಈ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನು ಅನೇಕರು ತಮ್ಮ ಬಳಿ ಇರುವ ದಾಖಲೆಗಳಲ್ಲಿ ಕೆಲವು ತಪ್ಪುಗಳು ಇರುವ ಕಾರಣ ಈ ಯೋಜನೆಗಳಿಂದ ವಂಚಿತರಾಗಿದ್ದಾರೆ.
ಗೃಹಲಕ್ಷ್ಮಿ 11ನೇ ಕಂತಿನ ಹಣ ಮೊದಲು ಈ ಜಿಲ್ಲೆಗಳಿಗೆ ಬಿಡುಗಡೆ; ಪಟ್ಟಿಯಲ್ಲಿ ನಿಮ್ಮ ಜಿಲ್ಲೆ ಇದ್ಯಾ ನೋಡಿ!
ಇನ್ನು ಲೋಕಸಭಾ ಚುನಾವಣೆಯ ನಂತರ ಈ ಯೋಜನೆಗಳನ್ನು ರದ್ದು ಗೊಳಿಸಲಾಗುವುದು ಎನ್ನುವು ಮಾತುಗಳು ಕೇಳಿ ಬರುತ್ತಿತ್ತು. ಆದರೆ ಚುನಾವಣೆ ಮುಗಿದ ನಂತರವೂ ಈ ಯೋಜನೆಗಳ ಲಾಭವನ್ನು ಜನರು ಇಂದಿಗೂ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಇದೀಗ ಇದೇ ವೇಳೆ ರಾಜ್ಯ ಸರ್ಕಾರದ ಇದೀಗ ಹೊಸ ನಿಯಮವನ್ನು ಜಾರಿ ಗೊಳಿಸುವ ಮೂಲಕ ಎಲ್ಲರಲ್ಲೂ ಆತಂಕ ಸೃಷ್ಟಿಸಿದೆ.
ರಾಜ್ಯ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆಯ ಬಗ್ಗೆ ಇದೀಗ ಹೊಸ ಸುದ್ದಿಯೊಂದು ಕೇಳಿ ಬರುತ್ತಿದೆ. ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ರಾಜ್ಯದ ಪ್ರತಿ ಮನೆಗೂ ಉಚಿತ ವಿದ್ಯುತ್ (Free Electricity) ನೀಡಲಾಗುತ್ತಿದೆ.
ಅನ್ನಭಾಗ್ಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಇನ್ನೂ ವರ್ಗಾವಣೆ ಆಗದೇ ಇದ್ರೆ! ಏನು ಮಾಡಬೇಕು?
ಹೌದು, ಸುಮಾರು 200 ಯುನಿಟ್ ಗಳ ವರೆಗೂ ಉಚಿತ ವಿದ್ಯುತ್ ನೀಡಲು ಸರ್ಕಾರ ನಿರ್ಧರಿಸಿದ್ದು, ಇನ್ನು ಅದರಂತೆ ಕಳೆದ ಕೆಲವು ತಿಂಗಳುಗಳಿಂದ ರಾಜ್ಯದ ಜನರು ತಮ್ಮ ಮನೆಗಳಿಗೆ ಉಚಿತ ವಿದ್ಯುತ್ ಸೌಲಭ್ಯವನ್ನು ಅನುಭವಿಸುತ್ತಿದ್ದಾರೆ. ಇನ್ನು 200 ಯುನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದ್ದಲ್ಲಿ, ಅದರ ಹಣವನ್ನು ಪಾವತಿಸಬೇಕಾಗುತ್ತದೆ (Electricity Bill) ಎಂದು ಸಹ ತಿಳಿಸಿದೆ.
ಇಷ್ಟು ದಿನ ಉಚಿತ ವಿದ್ಯುತ್ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಇದೀಗ ರಾಜ್ಯ ಸರ್ಕಾರ ರಾಜ್ಯದ ಜನರಿಗೆ ದೊಡ್ಡ ಶಾಕಿಂಗ್ ವಿಚಾರವನ್ನು ತಿಳಿಸಿದೆ. ಇದೀಗ ಗೃಹಜ್ಯೋತಿ ಯೋಜನೆ ಕುರಿತು ಹೊಸ ನಿಯಮಗಳನ್ನು ಸರ್ಕಾರ ಜಾರಿಗೆ ತರಲಿದೆ ಎನ್ನಲಾಗುತ್ತಿದೆ. ಹೌದು, 200 ಯುನಿಟ್ ಗಳಿಗಿಂತ ಹೆಚ್ಚುವರಿ ಯುನಿಟ್ ವಿದ್ಯುತ್ ಬಳಕೆ ಮಾಡಿದರೆ, ಅದರ ಹಣವನ್ನು ಪಾವತಿ ಮಾಡಬೇಕಾಗುತ್ತದೆ ಎನ್ನಲಾಗುತ್ತಿತ್ತು.
ಹೊಸ ರೇಷನ್ ಕಾರ್ಡ್ ವಿತರಣೆಗೆ ಸಿದ್ಧತೆ! ಜೊತೆಗೆ ಇಂತವರ ರೇಷನ್ ಕಾರ್ಡ್ ರದ್ದುಗೊಳಿಸುವ ನಿರ್ಧಾರ
ಆದರೆ ಇದೀಗ ರಾಜ್ಯ ಸರ್ಕಾರದ ಹೊಸ ನಿಯಮದ ಪ್ರಕಾರ ಯಾರಾದರೂ 200 ಯುನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದ್ದಲ್ಲಿ, ಅಂತವರನ್ನು ಗೃಹಜ್ಯೋತಿ ಸೌಲಭ್ಯದಿಂದ ವಂಚಿತರಾಗಿಸಲು ಇದೀಗ ರಾಜ್ಯ ಸರ್ಕಾರ ನಿರ್ಧರಿಸಿದೆ.
ಇನ್ನು ಮುಂದೆ ಜನರು ತಮ್ಮ ಮನೆಗಳಲ್ಲಿ ಆದಷ್ಟು ಎಚ್ಚರಿಕೆಯಿಂದ ವಿದ್ಯುತ್ ಬಳಸಬೇಕು. ಇಲ್ಲವಾದಲ್ಲಿ ಅವರು ಗೃಹಜ್ಯೋತಿ ಯೋಜನೆಯ ಸೌಲಭ್ಯವನ್ನು ಕಳೆದುಕೊಳ್ಳುತ್ತಾರೆ.
No Gruha Jyothi Scheme Benefit if more than 200 units of electricity Used