ಗೃಹಲಕ್ಷ್ಮಿ 11ನೇ ಕಂತಿನ ಹಣ ಮೊದಲು ಈ ಜಿಲ್ಲೆಗಳಿಗೆ ಬಿಡುಗಡೆ; ಪಟ್ಟಿಯಲ್ಲಿ ನಿಮ್ಮ ಜಿಲ್ಲೆ ಇದ್ಯಾ ನೋಡಿ!
ಗೃಹಲಕ್ಷ್ಮಿ ಯೋಜನೆಯ 11 ನೇ ಕಂತಿನ ಹಣ ವರ್ಗಾವಣೆಯನ್ನು ಕೊಂಚ ಮುಂದೂಡಲಾಗಿತ್ತು. ಇನ್ನು ಇದೆ ತಿಂಗಳು 20 ನೇ ತಾರೀಖಿನ ಒಳಗೆ ಹಣ ಬರುವುದಾಗಿ ತಿಳಿದು ಬಂದಿತ್ತು.
ಕೇಂದ್ರ ಹಾಗೂ ರಾಜ್ಯ ಸರ್ಕಾರವು ಆಗಾಗ ಮಹಿಳೆಯರಿಗಾಗಿ ವಿಶೇಷವಾದ ಯೋಚನೆಗಳನ್ನು ಜಾರಿಗೆ ತರುವ ಮೂಲಕ ಮಹಿಳೆಯರ ಬೆನ್ನೆಲುಬಾಗಿ ನಿಂತಿದೆ ಎಂದರೆ ತಪ್ಪಾಗುವುದಿಲ್ಲ. ಮಹಿಳೆಯರು ಯಾರ ಮೇಲೆ ಅವಲಂಬಿತರಾಗದೆ ಸಬಲರಾಗಬೇಕು ಎನ್ನುವ ನಿಟ್ಟಿನಲ್ಲಿ ಈಗಾಗಲೇ ಅನೇಕ ಯೋಜನೆಗಳನ್ನು ಕೇವಲ ಮಹಿಳೆಯರಿಗಾಗಿ ಜಾರಿಗೆ ತರಲಾಗಿದೆ.
ಇನ್ನು ಇತ್ತೀಚೆಗೆ ರಾಜ್ಯ ಸರ್ಕಾರವು ತಮ್ಮ ಐದು ಗ್ಯಾರಂಟಿ ಯೋಜನೆಗಳ ಪೈಕಿ, ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಗಳನ್ನು (Gruha Lakshmi Yojana) ಜಾರಿಗೆ ತಂದಿತ್ತು.
ಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳೆಯರು ರಾಜ್ಯದ ಯಾವುದೇ ಮೂಲೆಗೆ ಉಚಿತವಾಗಿ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸುವ ಅವಕಾಶವನ್ನು ಸರ್ಕಾರವು ಕಲ್ಪಿಸಿಕೊಟ್ಟಿದೆ. ಇನ್ನು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮನೆಯ ಮಹಿಳಾ ಯಜಮಾನಿಯ ಖಾತೆಗೆ (Bank Account) ಪ್ರತಿ ತಿಂಗಳು 2000 ಹಣವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡುವ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿಸಲು ಒಂದು ಸಣ್ಣ ಪ್ರಯತ್ನ ಮಾಡುತ್ತಿದೆ ಎಂದರೆ ತಪ್ಪಾಗುವುದಿಲ್ಲ.
ಅನ್ನಭಾಗ್ಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಇನ್ನೂ ವರ್ಗಾವಣೆ ಆಗದೇ ಇದ್ರೆ! ಏನು ಮಾಡಬೇಕು?
ಈಗಾಗಲೇ ಕಾಂಗ್ರೆಸ್ ಸರ್ಕಾರವೂ ತಮ್ಮ ಐದು ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾಗಿರುವ ಈ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದು ಒಂದು ವರ್ಷ ಕಳೆದಿದೆ. ಹೌದು, ಇಲ್ಲಿಯವರೆಗೂ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ರಾಜ್ಯದ ಮಹಿಳೆಯರು 10 ಕಂತಿನ ಹಣವನ್ನು ಪಡೆದುಕೊಂಡಿದ್ದಾರೆ.
ಇನ್ನು ಅದೆಷ್ಟೋ ಮಹಿಳೆಯರು ಮನೆಯಲ್ಲಿ ಕಡು ಬಡತನವಿದ್ದರೂ ಸಹ ಇಂದಿಗೂ ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾಗಿದ್ದಾರೆ. ಹೌದು, ಅವರ ಅರ್ಜಿಗಳಲ್ಲಿ ಕೆಲವು ತಪ್ಪುಗಳು ಕಂಡು ಬಂದಿದ್ದು, ಅಂತವರ ಅರ್ಜಿಗಳನ್ನು ಸರ್ಕಾರ ರದ್ದು ಗೊಳಿಸಿದೆ.
ಹೊಸ ರೇಷನ್ ಕಾರ್ಡ್ ವಿತರಣೆಗೆ ಸಿದ್ಧತೆ! ಜೊತೆಗೆ ಇಂತವರ ರೇಷನ್ ಕಾರ್ಡ್ ರದ್ದುಗೊಳಿಸುವ ನಿರ್ಧಾರ
ಇನ್ನೇನು ಕೆಲವೇ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಲಿದೆ. ಆದರೆ ಇನ್ನೂ ಅನೇಕ ಮಹಿಳೆಯರ ಖಾತೆಗೆ 9 ಹಾಗೂ 10 ನೇ ಕಂತಿನ ಹಣ ಜಮಾ ಆಗದೇ ಇರುವುದು ಕಂಡು ಬಂದಿದೆ.
ಇನ್ನು ನೀವು ಸಹ ಹಿಂದಿನ ಕಂತಿನ ಹಣ ಪಡೆಯದೆ ಇದ್ದಲ್ಲಿ, ನಿಮ್ಮ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅಪ್ಡೇಟ್ (Aadhaar Card Update) ಆಗಿದೆಯಾ ಎನ್ನುವುದನ್ನು ಪರಿಶೀಲಿಸಿ. ಹಾಗೆ ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಸೀಡಿಂಗ್ ಬಗ್ಗೆ ಮಾಹಿತಿ ಪಡೆದುಕೊಳ್ಳಿ.
ಚುನಾವಣೆ ಕಾರಣದಿಂದಾಗಿ ಗೃಹಲಕ್ಷ್ಮಿ ಯೋಜನೆಯ 11 ನೇ ಕಂತಿನ ಹಣ ವರ್ಗಾವಣೆಯನ್ನು ಕೊಂಚ ಮುಂದೂಡಲಾಗಿತ್ತು. ಇನ್ನು ಇದೆ ತಿಂಗಳು 20 ನೇ ತಾರೀಖಿನ ಒಳಗೆ ಹಣ ಬರುವುದಾಗಿ ತಿಳಿದು ಬಂದಿತ್ತು.
ಅನ್ನಭಾಗ್ಯ ಯೋಜನೆಯ 3 ತಿಂಗಳ ಪೆಂಡಿಂಗ್ ಹಣ ಒಟ್ಟಿಗೆ ಜಮಾ! ತಡವಾದ್ರೂ ಒಟ್ಟಿಗೆ ಡೆಪಾಸಿಟ್
ಆದರೆ ಇದೀಗ ಈ ಬಗ್ಗೆ ಯಾವುದೇ ಸುದ್ದಿ ಕೇಳಿ ಬರುತ್ತಿಲ್ಲ. ಇದೀಗ ತಿಳಿದು ಬಂದಿರುವ ಹೊಸ ಸುದ್ದಿಯ ಪ್ರಕಾರ ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ವಿಜಯಪುರ, ಕಲಬುರ್ಗಿ, ಬಳ್ಳಾರಿ, ಬಾಗಲಕೋಟೆ, ಗದಗ, ಹಾವೇರಿ, ಈ 11 ಜಿಲ್ಲೆಗಳಿಗೆ 11ನೇ ಕಂತಿನ ಹಣವನ್ನು ಮೊದಲು ವರ್ಗಾವಣೆ ಮಾಡಲಾಗುತ್ತದೆ. ಇನ್ನು ಮಿಕ್ಕ ಜಿಲ್ಲೆಗಳಿಗೆ ನಂತರ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
Gruha lakshmi Yojana 11th Installment funds released to these districts