ಅನ್ನಭಾಗ್ಯ ಯೋಜನೆಯ 3 ತಿಂಗಳ ಪೆಂಡಿಂಗ್ ಹಣ ಒಟ್ಟಿಗೆ ಜಮಾ! ತಡವಾದ್ರೂ ಒಟ್ಟಿಗೆ ಡೆಪಾಸಿಟ್
ಏಪ್ರಿಲ್, ಮೇ, ಹಾಗೂ ಜೂನ್ ತಿಂಗಳಿನ ಅನ್ನಭಾಗ್ಯ ಯೋಜನೆಯ ಹಣ ಇನ್ನು ಫಲಾನುಭವಿಗಳ ಖಾತೆಗೆ ಜಮಾ ಆಗದೇ ಇರುವುದು ಅನೇಕರಿಗೆ ಬೇಸರ ಉಂಟು ಮಾಡಿದೆ
ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಯ (Annabhagya Scheme) ಅಡಿಯಲ್ಲಿ ಫಲಾನುಭವಿಗಳು ಪ್ರತಿ ತಿಂಗಳು 10 ಕೆಜಿ ಅಕ್ಕಿಯನ್ನು ಪಡೆದುಕೊಳ್ಳುವುದಾಗಿ ರಾಜ್ಯ ಸರ್ಕಾರವು ಭರವಸೆ ನೀಡಿತ್ತು. ಆದರೆ ಕಾರಣಾಂತರಗಳಿಂದ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿಯನ್ನು ಹಾಗೆ ರಾಜ್ಯ ಸರ್ಕಾರದ ಕಡೆಯಿಂದ 5 ಕೆಜಿ ಅಕ್ಕಿಯ ಬದಲಿಗೆ ಹಣವನ್ನು ನೇರವಾಗಿ ತಮ್ಮ ಖಾತೆಗೆ (Bank Account) ಪಡೆದುಕೊಳ್ಳುತ್ತಿದ್ದಾರೆ ಎನ್ನುವ ವಿಷಯ ನಿಮ್ಮೆಲ್ಲರಿಗೂ ಸಹ ಗೊತ್ತೇ ಇದೆ.
ಆದರೆ ಕಳೆದ ಮೂರು ತಿಂಗಳು ಅಂದರೆ ಏಪ್ರಿಲ್, ಮೇ, ಹಾಗೂ ಜೂನ್ ತಿಂಗಳಿನ ಅನ್ನಭಾಗ್ಯ ಯೋಜನೆಯ ಹಣ ಇನ್ನು ಫಲಾನುಭವಿಗಳ ಖಾತೆಗೆ ಜಮಾ ಆಗದೇ ಇರುವುದು ಅನೇಕರಿಗೆ ಬೇಸರ ಉಂಟು ಮಾಡಿದೆ.
ಇನ್ಮುಂದೆ ಬಿಪಿಎಲ್ ರೇಷನ್ ಕಾರ್ಡ್ ಈ ಉದ್ಯೋಗದಲ್ಲಿದ್ದವರಿಗೆ ಸಿಗೋಲ್ಲ! ಪಟ್ಟಿ ಇಲ್ಲಿದೆ
ಇನ್ನು ಇಂದಿನ ಪುಟದಲ್ಲಿ ಅನ್ನಭಾಗ್ಯ ಯೋಜನೆಯ ಹಣ ಬಿಡುಗಡೆ ಆಗದೆ ಇರುವುದಕ್ಕೆ ಮುಖ್ಯ ಕಾರಣವೇನು ಹಾಗೆ ಮೂರು ತಿಂಗಳಿನ ಉಳಿದ ಹಣ ಯಾವಾಗ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಬನ್ನಿ..
ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಇದೀಗ ಫಲಾನುಭವಿಗಳು ಕೇಂದ್ರ ಸರ್ಕಾರದ ಅಡಿಯಲ್ಲಿ 5 ಕೆಜಿ ಅಕ್ಕಿಯನ್ನು ಹಾಗೆ ರಾಜ್ಯ ಸರ್ಕಾರವು ಪ್ರತಿ ಒಂದು ಕೆಜಿ ಅಕ್ಕಿಗೆ 34 ರೂಗಳಂತೆ, 5 ಕೆಜಿ ಅಕ್ಕಿಗೆ ಸುಮಾರು 170 ಹಣವನ್ನು ಪ್ರತಿ ತಿಂಗಳು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಖಾತೆಗೆ (Bank Account) ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ. ಆದರೆ ಕಳೆದ ಮೂರು ತಿಂಗಳಿಂದ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಹಣವನ್ನು ಪಡೆದುಕೊಂಡಿಲ್ಲ.
ಗೃಹಲಕ್ಷ್ಮಿ 11ನೇ ಕಂತಿನ ಹಣ ಬಿಡುಗಡೆ ಆಗೋದು ಯಾವಾಗ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ!
ರಾಜ್ಯ ಸರ್ಕಾರದ ಅನುದಾನದ ಕೊರತೆಯ ಕಾರಣದಿಂದ ಜನರು ಅನ್ನಭಾಗ್ಯ ಯೋಜನೆಯ ಹಣವನ್ನು ಕಳೆದ ಮೂರು ತಿಂಗಳಿಂದ ಪಡೆದುಕೊಂಡಿಲ್ಲ. ಇನ್ನು ಶೀಘ್ರದಲ್ಲೇ ಅನ್ನಭಾಗ್ಯ ಯೋಜನೆಯ ಮೂರು ತಿಂಗಳ ಹಣವನ್ನು ಒಟ್ಟಿಗೆ ವರ್ಗಾವಣೆ ಮಾಡುವುದಾಗಿ ಇದೀಗ ಆಹಾರ ಇಲಾಖೆ ಮಾಹಿತಿ ನೀಡಿದೆ. ಏಪ್ರಿಲ್, ಮೇ ಹಾಗೂ ಜೂನ್ ತಿಂಗಳ ಒಟ್ಟು ಹಣವನ್ನು ಇದೆ ಜುಲೈ 20 ಅಥವಾ 30 ರ ಒಳಗೆ ವರ್ಗಾವಣೆ ಮಾಡುವುದಾಗಿ ಇದೀಗ ಆಹಾರ ಇಲಾಖೆ ಮಾಹಿತಿ ನೀಡಿದೆ.
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ದಿನಾಂಕ ಫಿಕ್ಸ್! ಕೊನೆಗೂ ಸರ್ಕಾರದಿಂದ ಸಿಕ್ಕಿದೆ ಗುಡ್ ನ್ಯೂಸ್
ಅನ್ನಭಾಗ್ಯ ಯೋಜನೆಯ ಪೆಂಡಿಂಗ್ ಹಣ ಪಡೆಯುವುದು ಹೇಗೆ?
1. ಅನ್ನಭಾಗ್ಯ ಯೋಜನೆಯ ಪೆಂಡಿಂಗ್ ಹಣ ಪಡೆದುಕೊಳ್ಳಲು, ನಿಮ್ಮ ಬ್ಯಾಂಕ್ ಖಾತೆಗೆ ಕೇವೈಸಿ ಮತ್ತು ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎನ್ನುವುದನ್ನು ಮರೆಯಬೇಡಿ. ಆಗ ಮಾತ್ರ ನೀವು ಈ ಯೋಜನೆಯ ಲಾಭ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.
2. ನೀವು ಪ್ರತಿ ತಿಂಗಳು ಅನ್ನಭಾಗ್ಯ ಯೋಜನೆಯ ಲಾಭ ಪಡೆದುಕೊಳ್ಳಲು, ನೀವು ನ್ಯಾಯ ಬೆಲೆ ಅಂಗಡಿಯನ್ನು ಕಡ್ಡಾಯವಾಗಿ ಪಡಿತರವನ್ನು ಪಡೆಯಬೇಕು.
3. ನಿಮ್ಮ ಪಡಿತರ ಚೀಟಿಯಲ್ಲಿನ (Ration Card) ನಿಮ್ಮ ಕುಟುಂಬಸ್ಥರ ಕೇವೈಸಿ ಮತ್ತು ಆಧಾರ್ ಲಿಂಕ್ ಮಾಡಿಸಿರುವುದು ಕಡ್ಡಾಯ, ಆಗ ಮಾತ್ರ ನಿಮ್ಮ ಖಾತೆಗೆ ಹಣ ಬರುತ್ತದೆ.
ಈ ನಿಯಮಗಳನ್ನು ನೀವು ಪಾಲಿಸಿದರೆ ಮಾತ್ರ ನೀವು ಈ ಯೋಜನೆಯ ಲಾಭವನ್ನು ಪಡೆಯಬಹುದು. ಒಂದು ವೇಳೆ ನೀವು ಈ ನಿಯಮಗಳನ್ನು ಪಾಲಿಸುತ್ತಿದ್ದು, ನಿಮ್ಮ ಖಾತೆಗೆ ಹಣ ಜಮಾ ಆಗುತ್ತಿಲ್ಲ ಎಂದಲ್ಲಿ, ನಿಮ್ಮ ಹತ್ತಿರದ ಆಹಾರ ಇಲಾಖೆಗೆ ಭೇಟಿ ನೀಡುವ ಮೂಲಕ ನಿಮ್ಮ ಖಾತೆಗೆ ಹಣ ಜಮಾ ಆಗದೇ ಇರಲು ಕಾರಣ ಏನು ಎನ್ನುವುದನ್ನು ತಿಳಿದುಕೊಳ್ಳಿ..
Annabhagya Yojana 3 months pending money deposit together