ಇನ್ಮುಂದೆ ಬಿಪಿಎಲ್ ರೇಷನ್ ಕಾರ್ಡ್ ಈ ಉದ್ಯೋಗದಲ್ಲಿದ್ದವರಿಗೆ ಸಿಗೋಲ್ಲ! ಪಟ್ಟಿ ಇಲ್ಲಿದೆ
ಇಂತಹ ಉದ್ಯೋಗಿಗಳನ್ನು BPL ಕಾರ್ಡ್ ಲಿಸ್ಟ್ ನಿಂದ ತೆಗೆದು ಹಾಕಿದ ರಾಜ್ಯ ಸರ್ಕಾರ; ಇಲ್ಲಿದೆ ನೋಡಿ ಲಿಸ್ಟ್!
ದೇಶದ ಜನರ ಹಸಿವನ್ನು ನೀಗಿಸುವ ಸಲುವಾಗಿ ಸರ್ಕಾರವು ಬಿಪಿಎಲ್ BPL ಕಾರ್ಡ್ ನೀಡುವ ಮೂಲಕ ಜನರು ಉಚಿತವಾಗಿ ಪಡಿತರವನ್ನು ಪಡೆಯಬಹುದಾದ ಅವಕಾಶವನ್ನು ಮಾಡಿಕೊಟ್ಟಿದೆ.
ಇನ್ನು ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ (BPL Card) ಹೊಂದಿರುವ ಪ್ರತಿಯೊಬ್ಬರೂ ಸಹ ಸರ್ಕಾರದಿಂದ ಉಚಿತ ಪಡಿತರವನ್ನು ಪಡೆದುಕೊಳ್ಳುವುದರ ಜೊತೆಗೆ, ಇನ್ನು ಸರ್ಕಾರದಿಂದ ಸಿಗುವ ಹಲವಾರು ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ರಾಜ್ಯ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳ ಲಾಭವನ್ನು ಪಡೆದುಕೊಳ್ಳುವುದಕ್ಕೂ ಸಹ ಬಿಪಿಎಲ್ ಕಾರ್ಡ್ (BPL Card) ಬಹಳ ಪ್ರಮುಖ ದಾಖಲೆಯಾಗಿದೆ.
ಗೃಹಲಕ್ಷ್ಮಿ 11ನೇ ಕಂತಿನ ಹಣ ಬಿಡುಗಡೆ ಆಗೋದು ಯಾವಾಗ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ!
ಬಡತನ ರೇಖೆಗಿಂತ ಕಡಿಮೆ ಇರುವ ಜನರು ಹಾಗೆ, ಆರ್ಥಿಕವಾಗಿ ಹಿಂದುಳಿದ ಜನರು ಈ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ರಾಜ್ಯ ಸರ್ಕಾರ ನೀಡುವ ಕೆಲವು ಯೋಜನೆಗಳ ಲಾಭವನ್ನು ಪಡೆದುಕೊಳ್ಳಲು ಬಿಪಿಎಲ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ.
ಇನ್ನು ಇತ್ತೀಚೆಗೆ ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಅದೆಷ್ಟೋ ಬಡ ಕುಟುಂಬಗಳು ಸಬ್ಸಿಡಿಯನ್ನು ಪಡೆದುಕೊಳ್ಳುತ್ತಿದೆ.
ಬಡವರ ಪಾಲಿಗೆ ಬಿಪಿಎಲ್ ಕಾರ್ಡ್ ಒಂದು ರೀತಿಯಲ್ಲಿ ಗೋಲ್ಡನ್ ಕಾರ್ಡ್ ಎಂದು ನಾವು ಕರೆಯಬಹುದು. ಸರ್ಕಾರವು ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ವಿತರಿಸುವ ಮೊದಲು ಕೆಲವು ಮಾನದಂಡಗಳನ್ನು ಅಳೆದು ನಂತರ ಬಿಪಿಎಲ್ ಕಾರ್ಡ್ ಅನ್ನು ನೀಡಲಾಗುತ್ತದೆ.
ಒಂದು ಕುಟುಂಬಕ್ಕೆ ಬಿಪಿಎಲ್ ಕಾರ್ಡ್ ನೀಡುವ ಮೊದಲು ಆ ಕುಟುಂಬದ ಒಟ್ಟು ಸದಸ್ಯರ ಸಂಖ್ಯೆ ಎಷ್ಟು? ಕುಟುಂಬದ ವಾರ್ಷಿಕ ಆದಾಯ? ಕುಟುಂಬಸ್ಥರು ಯಾವ ಯಾವ ಉಪಕರಣಗಳನ್ನು ಹೊಂದಿದ್ದಾರೆ, ಹೀಗೆ ಕೆಲವು ವಿಷಯಗಳ ಬಗ್ಗೆ ಸಂಪೂರ್ಣವಾಗಿ ಪರಿಶೀಲಿಸಿ ನಂತರ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುತ್ತದೆ.
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ದಿನಾಂಕ ಫಿಕ್ಸ್! ಕೊನೆಗೂ ಸರ್ಕಾರದಿಂದ ಸಿಕ್ಕಿದೆ ಗುಡ್ ನ್ಯೂಸ್
ಇನ್ನು ಸರ್ಕಾರದ ಈ ಬಿಪಿಎಲ್ ಕಾರ್ಡ್ ಸೌಲಭ್ಯವನ್ನು ಕೆಲವು ಉದ್ಯೋಗದಲ್ಲಿ ಇರುವವರು ಪಡೆದುಕೊಳ್ಳಲು ಸಾಧ್ಯವಿಲ್ಲ. ಹೌದು, ಹಾಗಾದರೆ ಯಾವ ಉದ್ಯೋಗದವರು ಈ ಬಿಪಿಎಲ್ ಕಾರ್ಡ್ ಲಾಭಗಳಿಂದ ವಂಚಿತರಾಗಿರುತ್ತಾರೆ ಎನ್ನುವುದನ್ನು ತಿಳಿಸುತ್ತೇವೆ ಬನ್ನಿ..
ಕುಟುಂಬ ಸದಸ್ಯರಲ್ಲಿ ಯಾರಾದರೂ ಒಬ್ಬರು ಸರ್ಕಾರಿ ನೌಕರರಾಗಿದ್ದರೆ, ಅಥವಾ ಸಾಮಾಜಿಕ ವಲಯದ ಉದ್ಯಮಿಗಳು, ಹಾಗೆ ಸರ್ಕಾರಿ ನಿಗಮಗಳಲ್ಲಿ ಕೆಲಸ ಮಾಡುತ್ತಿರುವವರು ಈ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಅರ್ಹರಾಗಿರುವುದಿಲ್ಲ.
ಅಲ್ಲದೆ ಸರ್ಕಾರಿ ಉದ್ಯಮಗಳಲ್ಲಿ ಖಾಯಂ ಕೆಲಸ ಮಾಡುವವರು, ಮತ್ತು ವೈದ್ಯರು ಹಾಗೆ ವಕೀಲರು ಸಹ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಈ ಕೆಲಸ ಮಾಡುವವರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ ಎಂದು ಸರ್ಕಾರ ಭಾವಿಸುತ್ತದೆ.
ಇನ್ಮುಂದೆ 200 ಯೂನಿಟ್ ಗಿಂತ ಜಾಸ್ತಿ ವಿದ್ಯುತ್ ಬಳಕೆ ಮಾಡಿದ್ರೆ ಸಿಗೋಲ್ಲ ಗೃಹಜ್ಯೋತಿ ಯೋಜನೆ ಸೌಲಭ್ಯ!
Henceforth BPL ration card will not be available to those who were in this job