ಇನ್ಮುಂದೆ 200 ಯೂನಿಟ್ ಗಿಂತ ಜಾಸ್ತಿ ವಿದ್ಯುತ್ ಬಳಕೆ ಮಾಡಿದ್ರೆ ಸಿಗೋಲ್ಲ ಗೃಹಜ್ಯೋತಿ ಯೋಜನೆ ಸೌಲಭ್ಯ!
ಗೃಹಜ್ಯೋತಿ ಯೋಜನೆ ಬಳಸುವವರು ಅವರ ಮನೆಗೆ ಇರುವ ಲಿಮಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ, ಅವರಿಗೆ ಗೃಹಜ್ಯೋತಿ ಯೋಜನೆಯ ಸೌಲಭ್ಯ ಸಿಗುವುದಿಲ್ಲ. ಸಂಪೂರ್ಣವಾಗಿ ಈ ಸೌಲಭ್ಯದಿಂದ ವಂಚಿತರಾಗುತ್ತಾರೆ.
ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಸರ್ಕಾರ ನಮ್ಮ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಜನರಿಗೆ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ತಿಳಿಸಿದ್ದ ಸರ್ಕಾರ ಅದೇ ರೀತಿ ನಡೆದುಕೊಂಡಿದ್ದು, ಚುನಾವಣೆ ಗೆದ್ದು ಸ್ವಲ್ಪ ದಿನ ಆಗುತ್ತಿದ್ದ ಹಾಗೆಯೇ ಒಂದೊಂದಾಗಿ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಶುರು ಮಾಡಿತು. ಕೆಲವರು ಗ್ಯಾರೆಂಟಿ ಯೋಜನೆಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದರು ಸಹ, ಎಲ್ಲಾ ಯೋಜನೆಗಳು ಕೂಡ ಕಾರ್ಯರೂಪಕ್ಕೆ ಬಂದಿದೆ..
ಮೊದಲಿಗೆ ಶಕ್ತಿ ಯೋಜನೆಯನ್ನು ಜಾರಿಗೆ ತಂದ ಸರ್ಕಾರ ನಂತರ ಗೃಹಲಕ್ಷ್ಮಿ ಯೋಜನೆ, ಗೃಹಜ್ಯೋತಿ ಯೋಜನೆ (Gruha Jyothi Scheme), ಅನ್ನಭಾಗ್ಯ ಯೋಜನೆ ಜಾರಿಗೆ ತಂದಿತು. ಇನ್ನೇನು ಯುವನಿಧಿ ಯೋಜನೆ ಕೂಡ ಶುರುವಾಗಿದೆ.
ಫ್ರೀ ಬಸ್ ಯೋಜನೆ! ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಇನ್ಮುಂದೆ ಹೊಸ ರೂಲ್ಸ್
ಇತ್ತೀಚೆಗೆ ಲೋಕಸಭಾ ಎಲೆಕ್ಷನ್ ನಡೆದು, ಎಲೆಕ್ಷನ್ ಫಲಿತಾಂಶ ಹೊರಬಂದ ಬಳಿಕ ಗ್ಯಾರೆಂಟಿ ಯೋಜನೆಗಳೆಲ್ಲವು ನಿಲ್ಲುತ್ತದೆ ಎಂದೇ ಹೇಳಲಾಗಿತ್ತು. ಆದರೆ ಸರ್ಕಾರ ಆ ರೀತಿ ಏನನ್ನು ಕೂಡ ಮಾಡಿಲ್ಲ, ಗ್ಯಾರೆಂಟಿ ಯೋಜನೆಗಳನ್ನು ಮುಂದುವರೆಸಿಕೊಂಡೇ ಬಂದಿದೆ.
ಇನ್ಮುಂದೆ ಹೊಸ ರೂಲ್ಸ್!
ನಮಗೆಲ್ಲ ಗೊತ್ತಿರುವ ಹಾಗೆ ಗ್ಯಾರೆಂಟಿ ಯೋಜನೆಗಳನ್ನು ನಡೆಸಿಕೊಂಡು ಹೋಗುವ ಸಲುವಾಗಿ ಸರ್ಕಾರವು ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಇದೆಲ್ಲವೂ ಸರ್ಕಾರಕ್ಕೆ ದೊಡ್ಡ ಹೊಣೆ ಇದ್ದ ಹಾಗೆ ಎಂದು ಹೇಳಿದರು ಸಹ ತಪ್ಪಾಗುವುದಿಲ್ಲ.
ಸರ್ಕಾರಕ್ಕೆ ಈ ಥರದ ಹೊಡೆತ ಇರುವುದರಿಂದ ಅದರ ಪರಿಣಾಮ ಕೂಡ ಜನರ ಮೇಲೆಯೇ ಬೀಳುತ್ತಿದೆ. ಒಂದು ಕಡೆ ಬೆಲೆ ಏರಿಕೆ ಜಾಸ್ತಿಯಾಗುತ್ತಿದೆ. ಮತ್ತೊಂದು ಕಡೆ ಸರ್ಕಾರ ಈಗ ಹೊಸ ರೂಲ್ಸ್ ಗಳನ್ನು ಜಾರಿಗೆ ತರುತ್ತಿದೆ.
ಹಿರಿಯ ನಾಗರಿಕರ ಕಾರ್ಡ್ ಮಾಡಿಸಲು ಪೋರ್ಟಲ್ ಮತ್ತೆ ಪ್ರಾರಂಭ! ಸಿಗಲಿದೆ ಇನ್ನಷ್ಟು ಬೆನಿಫಿಟ್
ಗೃಹಜ್ಯೋತಿ ಯೋಜನೆಗೆ ಹೊಸ ರೂಲ್ಸ್!
ಗೃಹಜ್ಯೋತಿ ಯೋಜನೆಯ ಮೂಲಕ ಪ್ರತಿ ಮನೆಗೆ ಉಚಿತ ವಿದ್ಯುತ್ (Free Electricity) ನೀಡಲಾಗುತ್ತಿದೆ. ಒಂದು ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಎಂದು ಹೇಳಿದರು ಸಹ, ಪ್ರತಿ ಮನೆಗು ಅವರು ಪ್ರತಿ ತಿಂಗಳು ಎಷ್ಟು ವಿದ್ಯುತ್ ಬಳಸುತ್ತಿದ್ದರು ಎನ್ನುವುದರ ಮೇಲೆ ಲೆಕ್ಕ ಹಾಕಿ ಇಷ್ಟು ವಿದ್ಯುತ್ ಬಳಸಬಹುದು, ಹೆಚ್ಚುವರಿಯಾಗಿ 10% ಯೂನಿಟ್ ನಷ್ಟು ವಿದ್ಯುತ್ ಬಳಸಬಹುದು ಎಂದು ಹೇಳಲಾಯಿತು. ಇಷ್ಟು ದಿವಸ ಜನರು ಹೆಚ್ಚಾಗಿ ವಿದ್ಯುತ್ ಬಳಕೆ ಮಾಡಿದರೆ ಅದರ ಹಣವನ್ನು ಪಾವತಿ ಮಾಡಬೇಕು ಎಂದು ಸರ್ಕಾರ ತಿಳಿಸಿತು…
ಶೌಚಾಲಯ ಕಟ್ಟಿಸಿಕೊಳ್ಳಲು ಈ ಯೋಜನೆಯ ಮೂಲಕ ಸಿಗಲಿದೆ ₹12000! ಇಂದೇ ಅರ್ಜಿ ಸಲ್ಲಿಸಿ
ಆದರೆ ಇದೀಗ ಸರ್ಕಾರಕ್ಕೆ ಆಗುತ್ತಿರುವ ಹೊಣೆಯ ಕಾರಣ ಹೊಸ ನಿರ್ಧಾರ ಒಂದನ್ನು ತೆಗೆದುಕೊಳ್ಳುಲಾಗಿದೆ. ಅದೇನು ಎಂದರೆ ಇನ್ನುಮುಂದೆ ಗೃಹಜ್ಯೋತಿ ಯೋಜನೆ ಬಳಸುವವರು ಅವರ ಮನೆಗೆ ಇರುವ ಲಿಮಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ, ಅವರಿಗೆ ಗೃಹಜ್ಯೋತಿ ಯೋಜನೆಯ ಸೌಲಭ್ಯ ಸಿಗುವುದಿಲ್ಲ. ಸಂಪೂರ್ಣವಾಗಿ ಈ ಸೌಲಭ್ಯದಿಂದ ವಂಚಿತರಾಗುತ್ತಾರೆ. ಇದು ಸರ್ಕಾರದ ಹೊಸ ರೂಲ್ಸ್ ಆಗಿದ್ದು, ಜನರು ಇನ್ನುಮುಂದೆ ಎಚ್ಚರಿಕೆ ಇಂದ ವಿದ್ಯುತ್ ಬಳಕೆ ಮಾಡಿ.
if you use more than 200 units of electricity, you will not get the Gruha Jyoti Yojana facility
English Summary : If the user of Gruha Jyothi Yojana uses more electricity than the limit for his house, he will not get the benefit of Gruha Jyothi Yojana. will be completely deprived of this facility.