Bangalore NewsKarnataka News

ಶೌಚಾಲಯ ಕಟ್ಟಿಸಿಕೊಳ್ಳಲು ಈ ಯೋಜನೆಯ ಮೂಲಕ ಸಿಗಲಿದೆ ₹12000! ಇಂದೇ ಅರ್ಜಿ ಸಲ್ಲಿಸಿ

ಕೇಂದ್ರ ಸರ್ಕಾರದ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಚ್ಚ ಭಾರತ್ ಅಭಿಯಾನವನ್ನು ಶುರು ಮಾಡಿದ್ದಾರೆ. ಈಗಲೂ ಕೂಡ ಈ ಯೋಜನೆಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡಲಾಗುತ್ತಿದೆ.

ಸ್ವಚ್ಚ ಭಾರತ್ ಯೋಜನೆಯ ಮೂಲಕ ಮುಖ್ಯವಾಗಿ ಎಲ್ಲಾ ಹಳ್ಳಿಗಳಲ್ಲಿ ಮತ್ತು ಗ್ರಾಮಗಳಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇದೀಗ ಸರ್ಕಾರವು ಮತ್ತೆ ಇದೇ ಯೋಜನೆಯನ್ನು ಶುರು ಮಾಡಿದೆ. ಜನರಿಗೆ ಇದರಿಂದ ಆರ್ಥಿಕವಾಗಿ ಸಹ ಸಹಾಯ ಸಿಗುತ್ತಿದೆ..

Get 12000 to build a toilet through this Scheme, Apply today

ಗ್ರಾಮಗಳಲ್ಲಿ ಅಥವಾ ಹಳ್ಳಿಗಳಲ್ಲಿ ವಾಸ ಮಾಡುತ್ತಿರುವ ಜನರು ತಮ್ಮ ಮನೆಗಳಲ್ಲಿ ಶೌಚಾಲಯ ಕಟ್ಟಿಸಿಕೊಳ್ಳಲು ಸರ್ಕಾರದಿಂದ ಸಹಾಯ ಸಿಗಲಿದೆ. ಸ್ವಚ್ಚ ಭಾರತ್ ಅಭಿಯಾನದ ಅಡಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಒಟ್ಟು ₹12,000 ರೂಪಾಯಿಗಳ ಮೊತ್ತವನ್ನು ನೀಡಲಿದ್ದು, ಈ ಮೊತ್ತವನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ, ₹6000 ರೂಪಾಯಿಗಳನ್ನು ಎರಡು ಸಾರಿ ಮಾಡಿಕೊಡಲಾಗುತ್ತದೆ. ಇನ್ನು ಶೌಚಾಲಯ ಕಟ್ಟಿಸಿಕೊಳ್ಳದೇ ಇರುವವರು ಈ ಯೋಜನೆಯ ಮೂಲಕ ಸೌಲಭ್ಯ ಪಡೆಯಬಹುದು.

ಇನ್ಮುಂದೆ ಬಿಪಿಎಲ್ ಕಾರ್ಡ್ ಪಡೆಯೋಕೆ ಈ 6 ನಿಯಮಗಳನ್ನು ಪಾಲಿಸಲೇಬೇಕು! ಹೊಸ ರೂಲ್ಸ್

ಈ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಪುರಸಭೆ ಕಚೇರಿಗೆ ಭೇಟಿ ನೀಡಿ, ಅರ್ಜಿ ನಮೂನೆಯನ್ನು ಪಡೆದು ಅದನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು. ಗ್ರಾಮ ಪಂಚಾಯಿತಿ ಅಧಿಕಾರಿಗಳು ಅರ್ಜಿಯನ್ನು ಪರಿಶೀಲಿಸಿ ಫಲಾನುಭವಿಗಳನ್ನು ಆಯ್ಕೆ ಮಾಡುತ್ತಾರೆ.

ಮನೆಯಲ್ಲಿ ಶೌಚಾಲಯ ಇಲ್ಲ ಎಂದರೆ ರೋಗಗಳು ಹರಡುತ್ತದೆ, ಅದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಸರ್ಕಾರ ಈ ಸೌಲಭ್ಯವನ್ನು ನೀಡುತ್ತಿದ್ದು, ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆ ಏನೇನು ಹಾಗೂ ಇನ್ನಿತರ ಮಾಹಿತಿಗಳನ್ನು ತಿಳಿದುಕೊಳ್ಳೋಣ..

Swachh Bharat Toilet Schemeಅರ್ಹತೆಗಳು

*ಅರ್ಜಿದಾರರು ನಮ್ಮ ದೇಶದ ಪ್ರಜೆಯೇ ಆಗಿರಬೇಕು
*ಅರ್ಜಿದಾರರ ಮನೆಯಲ್ಲಿ ಈ ಮೊದಲೇ ಶೌಚಾಲಯ ಇರಬಾರದು
*ಬಿಪಿಎಲ್ ಕಾರ್ಡ್ ಹೊಂದಿರುವ ಬಡತನದ ಕುಟುಂಬದಲ್ಲಿರುವ ಜನರು ಅರ್ಜಿ ಸಲ್ಲಿಸಬಹುದು
*ಬಿಪಿಎಲ್ ಕಾರ್ಡ್ ಹೊಂದಿರುವುದು ಕಡ್ಡಾಯ ಆಗಿದೆ.
ಇದಿಷ್ಟು ಅರ್ಹತೆ ಇದ್ದರೆ, ನೀವು ಸ್ವಚ್ಚ್ ಭಾರತ್ ಅಭಿಯಾನಕ್ಕೆ ಅರ್ಜಿ ಸಲ್ಲಿಸಬಹುದು.

ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ, ನಿಮ್ಮ ಅಕೌಂಟ್ ಗೆ ಬಂದಿದ್ಯಾ? ಈ ರೀತಿ ಚೆಕ್ ಮಾಡಿಕೊಳ್ಳಿ

ಬೇಕಾಗುವ ದಾಖಲೆಗಳು:

*ಬಿಪಿಎಲ್ ರೇಷನ್ ಕಾರ್ಡ್
*ಆಧಾರ್ ಕಾರ್ಡ್
*ಕ್ಯಾಸ್ಟ್ ಸರ್ಟಿಫಿಕೇಟ್
*ಇನ್ಕಮ್ ಸರ್ಟಿಫಿಕೇಟ್
*ವಾಸಸ್ಥಳ ಪ್ರಮಾಣ ಪತ್ರ
*ಎಲೆಕ್ಷನ್ ವೋಟರ್ ಐಡಿ
*ಬ್ಯಾಂಕ್ ಪಾಸ್ ಬುಕ್
*ಪಾಸ್ ಪೋರ್ಟ್ ಸೈಜ್ ಫೋಟೋ
*ಫೋನ್ ನಂಬರ್
*ಇಮೇಲ್ ಐಡಿ

ಅರ್ಜಿ ಸಲ್ಲಿಕೆ ಪ್ರಕ್ರಿಯೆ

*ಮೊದಲಿಗೆ ಈ https://swachhbharatmission.gov.in ಲಿಂಕ್ ಓಪನ್ ಮಾಡಿ

*ಹೋಮ್ ಪೇಜ್ ನಲ್ಲಿ ನಾಗರೀಕ ಎನ್ನುವ ಆಪ್ಶನ್ ನಲ್ಲಿರುವ IHHL ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕು.

*ಈಗ ನೀವು ಲಾಗಿನ್ ಮಾಡುವುದಕ್ಕೆ ಅರ್ಜಿ ಫಾರ್ಮ್ ಬರುತ್ತದೆ. ಅದರಲ್ಲಿ ಕೇಳುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, Submit ಮಾಡಿ.

*ಈಗ ಲಾಗಿನ್ ಮಾಡುವುದಕ್ಕೆ ಐಡಿ ಮತ್ತು ಪಾಸ್ ವರ್ಡ್ ಬರುತ್ತದೆ.

*ಇಲ್ಲಿ ಐಡಿ ನಿಮ್ಮ ಫೋನ್ ನಂಬರ್ ಹಾಗೂ ಪಾಸ್ ವರ್ಡ್ ನಿಮ್ಮ ಫೋನ್ ನಂಬರ್ ನ ಕೊನೆಯ 4 ನಂಬರ್ ಗಳೇ ಆಗಿರುತ್ತದೆ.

*ಬಳಿಕ ನೀವು ನಿಮ್ಮ ಫೋನ್ ನಂಬರ್, ಪಾಸ್ವರ್ಡ್ ಮತ್ತು ಸೆಕ್ಯೂರಿಟಿ ಕೋಡ್ ಇದಿಷ್ಟನ್ನು ಎಂಟರ್ ಮಾಡುವ ಮೂಲಕ ಸೈನ್ ಇನ್ ಮಾಡಿ.

*ಈಗ ಡ್ಯಾಶ್ ಬೋರ್ಡ್ ಓಪನ್ ಆಗುತ್ತದೆ, ಇಲ್ಲಿ ನ್ಯೂ ಅಪ್ಲಿಕೇಶನ್ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

*ಇಲ್ಲಿ ಟಾಯ್ಲೆಟ್ ರಿಜಿಸ್ಟ್ರೇಷನ್ ಫಾರ್ಮ್ ಅನ್ನು ಸೆಲೆಕ್ಟ್ ಮಾಡಿ.

*ಇಲ್ಲಿ ಕೇಳುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಫಿಲ್ ಮಾಡಿ.

*ಬಳಿಕ ಅಗತ್ಯವಿರುವ ಡಾಕ್ಯುಮೆಂಟ್ ಗಳನ್ನು ಅಪ್ಲೋಡ್ ಮಾಡಿ, submit ಮಾಡಿ.

ಇನ್ಮುಂದೆ ಈ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಹಣ ಬರಲ್ಲ! ಸರ್ಕಾರದಿಂದ ಹೊಸ ಅಪ್ಡೇಟ್

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯ ಆಗಲಿಲ್ಲ ಎಂದರೆ ನಿಮ್ಮ ಹತ್ತಿರದ ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ ನೀಡಿ, ಅಲ್ಲಿ ಟಾಯ್ಲೆಟ್ ಅಪ್ಲಿಕೇಶನ್ ಫಾರ್ಮ್ ಅನ್ನು ಕೇಳಿ ಪಡೆದು, ಭರ್ತಿ ಮಾಡಿ ಅದನ್ನು ಗ್ರಾಮದ ಮುಖ್ಯಸ್ಥರಿಗೆ ನೀಡಿ. ಇದರಿಂದ ನಿಮಗೆ ಮನೆಯಲ್ಲಿ ಶೌಚಾಲಯ ಕಟ್ಟಿಸಲು ಸಹಾಯ ಆಗುತ್ತದೆ.

Get 12000 to build a toilet through this Scheme, Apply today

English Summary : People living in villages or villages will get government help to build a toilet in their homes. A total sum of ₹12,000 rupees was provided to the toilet construction under the Swachh Bharat Abhiyan, this amount is given in two installments, ₹6000 rupees are paid twice.

Our Whatsapp Channel is Live Now 👇

Whatsapp Channel

Related Stories