ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ, ನಿಮ್ಮ ಅಕೌಂಟ್ ಗೆ ಬಂದಿದ್ಯಾ? ಈ ರೀತಿ ಚೆಕ್ ಮಾಡಿಕೊಳ್ಳಿ
ಬಿಪಿಎಲ್ ಕಾರ್ಡ್ (BPL Card) ಇದ್ದು ಇಡೀ ಕುಟುಂಬಕ್ಕೆ ಸಹಾಯ ಅಗುವಂಥ ಯೋಜನೆಗಳಲ್ಲಿ ಪ್ರಮುಖವಾದದ್ದು ಅನ್ನಭಾಗ್ಯ ಯೋಜನೆ.
Annabhagya Yojana : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೆ ಬಂದಿರುವ ಪ್ರಮುಖ ಯೋಜನೆಗಳಲ್ಲಿ ಒಂದು ಅನ್ನಭಾಗ್ಯ ಯೋಜನೆ ಆಗಿದೆ. ಸರ್ಕಾರವು 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಬಿಪಿಎಲ್ ಕಾರ್ಡ್ (BPL Card) ಇದ್ದು ಇಡೀ ಕುಟುಂಬಕ್ಕೆ ಸಹಾಯ ಅಗುವಂಥ ಯೋಜನೆಗಳಲ್ಲಿ ಪ್ರಮುಖವಾದದ್ದು ಅನ್ನಭಾಗ್ಯ ಯೋಜನೆ.
ಇದೀಗ ಈ ಯೋಜನೆಯ ಕುರಿತ ಹಾಗೆ ಪ್ರಮುಖವಾದ ಮಾಹಿತಿ ನಿಮಗಾಗಿ..
ನಕಲಿ ರೇಷನ್ ಕಾರ್ಡುಗಳಿಗೆ ಬ್ರೇಕ್! ಬಿಪಿಎಲ್ ರೇಷನ್ ಕಾರ್ಡ್ ಇರೋರಿಗೆ ಖಡಕ್ ವಾರ್ನಿಂಗ್
ಅನ್ನಭಾಗ್ಯ ಯೋಜನೆಯ ಹಣ ಬಂದಿದ್ಯಾ?
ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದ ಸರ್ಕಾರ ಆರಂಭದಲ್ಲಿ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಹೊಂದಿರುವವರಿಗೆ ಮತ್ತು ಅಂತ್ಯೋದಯ ಕಾರ್ಡ್ ಇರುವವರಿಗೆ ಅವರ ಮನೆಯಲ್ಲಿರುವ ಪ್ರತಿ ಸದಸ್ಯನಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ಕೊಡುವ ಭರವಸೆ ನೀಡಿತು.
ಆದರೆ ಅಷ್ಟು ಅಕ್ಕಿಯನ್ನು ಹೊಂದಿಸಲು ಸಾಧ್ಯ ಆಗದ ಕಾರಣ, 5 ಕೆಜಿ ಅಕ್ಕಿ ಕೊಟ್ಟು, ಇನ್ನು 5 ಕೆಜಿ ಅಕ್ಕಿಯ ಬದಲಾಗಿ ಹಣ ಕೊಡುವುದಾಗಿ ಸೂಚನೆ ನೀಡಿದೆ.
ಇನ್ಮುಂದೆ ಈ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಹಣ ಬರಲ್ಲ! ಸರ್ಕಾರದಿಂದ ಹೊಸ ಅಪ್ಡೇಟ್
ಬಿಡುಗಡೆ ಆಯ್ತು ಮೇ ತಿಂಗಳ ಹಣ:
ಅದೇ ರೀತಿ ಪ್ರತಿ ತಿಂಗಳು ಅನ್ನಭಾಗ್ಯ ಯೋಜನೆಯ ಹಣ ರೇಶನ್ ಕಾರ್ಡ್ ನಲ್ಲಿ ಮನೆಯ ಮುಖ್ಯಸ್ಥರಾಗಿರುವ ವ್ಯಕ್ತಿಯ ಬ್ಯಾಂಕ್ ಅಕೌಂಟ್ ಗೆ (Bank Account) ವರ್ಗಾವಣೆ ಆಗುತ್ತಿದೆ.
ಆದರೆ ಎಲೆಕ್ಷನ್ ಇದ್ದ ಸಮಯದಲ್ಲಿ ಅನ್ನಭಾಗ್ಯ ಯೋಜನೆಯ ಹಣ ಕೂಡ ನಿಮ್ಮನ್ನು ತಲುಪಿಲ್ಲ. ಆದರೆ ಇದೀಗ ಅನ್ನಭಾಗ್ಯ ಯೋಜನೆಯ ಮೇ ತಿಂಗಳ ಹಣ ಬಿಡುಗಡೆ ಆಗಿದೆ ಎಂದು ಮಾಹಿತಿ ಸಿಕ್ಕಿದೆ. ಈ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬಂದಿದ್ಯಾ ಎಂದು ನೀವು ಚೆಕ್ ಮಾಡಬೇಕು.
ರೇಷನ್ ಕಾರ್ಡ್ ಕುರಿತಂತೆ 2 ಕಠಿಣ ನಿರ್ಧಾರ ತೆಗೆದುಕೊಂಡ ಸರ್ಕಾರ! ಕೊಟ್ಟ ಖಡಕ್ ವಾರ್ನಿಂಗ್ ಏನು ಗೊತ್ತಾ?
ಅನ್ನಭಾಗ್ಯ ಯೋಜನೆಯ ಹಣ ಬಿಡುಗಡೆ
ಹೌದು, ಬಹಳಷ್ಟು ಜನರು ತಮಗೆ ಇನ್ನು ಕೂಡ ಅನ್ನಭಾಗ್ಯ ಯೋಜನೆಯ ಹಣ ಇನ್ನು ಬಂದಿಲ್ಲ ಎಂದು ಯೋಚಿಸುತ್ತಿದ್ದರು, ಆದರೆ ಅಂಥವರಿಗೆ ಈಗ ಒಂದು ಗುಡ್ ನ್ಯೂಸ್ ಸಿಕ್ಕಿದ್ದು, ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬಂದಿದ್ಯಾ ಎನ್ನುವುದನ್ನು ನೀವು ಡಿಬಿಟಿ ಸ್ಟೇಟಸ್ ಮೂಲಕ ಚೆಕ್ ಮಾಡಬಹುದು. ಅದು ಹೇಗೆ ಎಂದು ತಿಳಿಸಿಕೊಡುತ್ತೇವೆ ನೋಡಿ..
ಅನ್ನಭಾಗ್ಯ ಯೋಜನೆಯ ಡಿಬಿಟಿ ಸ್ಟೇಟಸ್ ಚೆಕ್ ಮಾಡುವ ಪ್ರಕ್ರಿಯೆ:
*ಮೊದಲಿಗೆ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
ahara.kar.nic.in/lpg/
*ಹೋಮ್ ಪೇಜ್ ನಲ್ಲಿ ನಿಮ್ಮ ಜಿಲ್ಲೆಯ ಹೆಸರನ್ನು ಸೆಲೆಕ್ಟ್ ಮಾಡಿ
*ಇಲ್ಲಿ DBT status ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ
*ಇಲ್ಲಿ ನೀವು ವರ್ಷವನ್ನು 2024 ಎಂದು ಸೆಲೆಕ್ಟ್ ಮಾಡಿ
*ಮೇ ತಿಂಗಳನ್ನು ಸೆಲೆಕ್ಟ್ ಮಾಡಿ
*ಬಳಿಕ ಕ್ಯಾಪ್ಚ ಕೋಡ್ ಎಂಟರ್ ಮಾಡಿ
*ನಂತರ Go ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ
*ಈಗ ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಾರದ್ದೆಲ್ಲ ಹೆಸರಿದೆಯೋ ಅದೆಲ್ಲದರ ಲಿಸ್ಟ್ ತೋರಿಸುತ್ತದೆ, ಜೊತೆಗೆ ಆಧಾರ್ ಕಾರ್ಡ್ ನಂಬರ್ ಕೂಡ ಇರುತ್ತದೆ
*ಈ ಲಿಸ್ಟ್ ನಲ್ಲಿ ಅನ್ನಭಾಗ್ಯ ಯೋಜನೆಯ ಹಣ ಎಲ್ಲರಿಗೂ ಬಂದಿದ್ಯಾ ಎನ್ನುವುದನ್ನು ನೀವು ಚೆಕ್ ಮಾಡಬಹುದು.
Annabhagya Yojana money was released, Check the Status