ರೇಷನ್ ಕಾರ್ಡ್ ಕುರಿತಂತೆ 2 ಕಠಿಣ ನಿರ್ಧಾರ ತೆಗೆದುಕೊಂಡ ಸರ್ಕಾರ! ಕೊಟ್ಟ ಖಡಕ್ ವಾರ್ನಿಂಗ್ ಏನು ಗೊತ್ತಾ?

ಹಲವು ಜನರು ಹೊಸದಾಗಿ ರೇಷನ್ ಕಾರ್ಡ್ ಮಾಡಿಸಲು ಅರ್ಜಿ ಸಲ್ಲಿಕೆ (New Ration Card Application) ಪ್ರಕ್ರಿಯೆ ಶುರುವಾಗೋದು ಯಾವಾಗ ಎಂದು ಕಾಯುತ್ತಿದ್ದಾರೆ. ಅಂಥವರಿಗೆ ಈಗ ಸರ್ಕಾರದಿಂದ ಹೊಸ ಅಪ್ಡೇಟ್ ಸಿಕ್ಕಿದೆ.

Bengaluru, Karnataka, India
Edited By: Satish Raj Goravigere

Ration Card : ಆಹಾರ ಇಲಾಖೆ ಈಗ ರೇಶನ್ ಕಾರ್ಡ್ ಬಗ್ಗೆ ಹೊಸ ನಿರ್ಧಾರ ತೆಗೆದುಕೊಂಡಿದದ್ದು, ನಕಲಿ ರೇಷನ್ ಕಾರ್ಡ್‌ ಗಳನ್ನು ರದ್ದು ಮಾಡಲು ಮುಂದಾಗಿದೆ. ಕೆಲ ಸಮಯದಿಂದ ತಮ್ಮ ಬಗ್ಗೆ ಸುಳ್ಳು ಮಾಹಿತಿ ನೀಡಿ ಮತ್ತು ಸುಳ್ಳು ದಾಖಲೆ ಸೃಷ್ಟಿಸಿ ಅದರಿಂದ ರೇಷನ್ ಕಾರ್ಡ್ ಪಡೆಯುವ ಜನರು ಹೆಚ್ಚಾಗುತ್ತಿದ್ದಾರೆ..

ಇದನ್ನು ತಡೆಯಲು, ಆಹಾರ ಇಲಾಖೆ ಅಗತ್ಯವಿರುಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ರೇಷನ್ ಕಾರ್ಡ್ ಬಳಸಿ ಸರ್ಕಾರದ ಹಲವು ಸೌಲಭ್ಯಗಳನ್ನು ಪಡೆಯಬಹುದು. ರಾಜ್ಯ ಸರ್ಕಾರ ಜಾರಿಗೆ ತಂದಿರುಗ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯುವುದಕ್ಕೆ ರೇಷನ್ ಕಾರ್ಡ್ ಬೇಕಾಗುತ್ತದೆ.

Detection of Fake ration cards and soon distribution of 1.73 lakh new BPL cards

ಈ ಕಾರಣಕ್ಕೆ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ನಿಮಗೆ ಬರಲ್ಲ! ಇಲ್ಲಿದೆ ಡೀಟೇಲ್ಸ್ ತಿಳಿಯಿರಿ

ಹೆಚ್ಚಿನ ಜನರಿಗೆ ಬಿಪಿಎಲ್ ಕಾರ್ಡ್ ಮೇಲೆ ಆಸಕ್ತಿ

ಸರ್ಕಾರದಿಂದ ಸಿಗುವ ಬಿಪಿಎಲ್ ಕಾರ್ಡ್ ಗಳನ್ನು ಹೊಂದಿದ್ದರೆ ಎಲ್ಲಾ ಸೌಕರ್ಯಗಳನ್ನು ಪಡೆಯಬಹುದು ಎನ್ನುವ ಕಾರಣಕ್ಕೆ ಜನರು ಬಿಪಿಎಲ್ ಕಾರ್ಡ್ ಮಾಡಿಸಲು ಹೆಚ್ಚಿನ ಸಂಖೆಯಲ್ಲಿ ಬರುತ್ತಿದ್ದಾರೆ. ಆದರೆ ಅರ್ಹತೆ ಇಲ್ಲದವರ ರೇಷನ್ ಕಾರ್ಡ್ ಗಳನ್ನು ಬಂದ್ ಮಾಡಲು ಸರ್ಕಾರ ಕೂಡ ಕೆಲಸ ಶುರು ಮಾಡಿದೆ.

ಇನ್ನು ಹಲವು ಜನರು ಹೊಸದಾಗಿ ರೇಷನ್ ಕಾರ್ಡ್ ಮಾಡಿಸಲು ಅರ್ಜಿ ಸಲ್ಲಿಕೆ (New Ration Card Application) ಪ್ರಕ್ರಿಯೆ ಶುರುವಾಗೋದು ಯಾವಾಗ ಎಂದು ಕಾಯುತ್ತಿದ್ದಾರೆ. ಅಂಥವರಿಗೆ ಈಗ ಸರ್ಕಾರದಿಂದ ಹೊಸ ಅಪ್ಡೇಟ್ ಸಿಕ್ಕಿದೆ.

Ration Cardರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಪ್ರಕಾರ ನಮ್ಮ ರಾಜ್ಯದಲ್ಲಿ 1.03 ಕೋಟಿ BPL ಕಾರ್ಡ್ ಹೊಂದಿರುವ ಕುಟುಂಬಗಳು ಇದೆ ಹಾಗೆಯೇ 10.83 ಲಕ್ಷ ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬಗಳು ಇದೆ. ನಮ್ಮ ರಾಜ್ಯದಲ್ಲಿ ಈಗಾಗಲೇ ಇರುವ ಮಿತಗಿಂತ 10.33 ಲಕ್ಷ ಹೆಚ್ಚಿನ ಜನರ ಬಳಿ BPL ಕಾರ್ಡ್‌ ಗಳಿವೆ. ಆರ್ಹತೆ ಇಲ್ಲದವರು ಕೂಡ BPL ಕಾರ್ಡ್ ಪಡೆದಿದ್ದಾರೆ. ಹಾಗಾಗಿ ಸರ್ಕಾರವು ಅಂಥವರ ಕಾರ್ಡ್ ಗಳನ್ನು (Ration Card Cancellation) ರದ್ದು ಮಾಡಲು ಮುಂದಾಗಿದೆ.

ರದ್ದಾಗಲಿದೆ ಇಂತಹ ಜನರ ಬಿಪಿಎಲ್ ರೇಷನ್ ಕಾರ್ಡ್! ಮುಲಾಜಿಲ್ಲ ಸರ್ಕಾರದಿಂದ ಖಡಕ್ ವಾರ್ನಿಂಗ್

ಇಂಥವರ ರೇಷನ್ ಕಾರ್ಡ್ ರದ್ದು

ಆದಾಯ ಜಾಸ್ತಿ ಇರುವವರು ಬಿಪಿಎಲ್ ಕಾರ್ಡ್ ಪಡೆದಿದ್ದಾರೆ, ಹೀಗೆ ಆದಾಯ ಜಾಸ್ತಿ ಇದ್ದರು ಸಹ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದರೆ ಅಂಥವರ ರೇಷನ್ ಕಾರ್ಡ್ ಗಳು ರದ್ದಾಗುತ್ತದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಹಾಗೆಯೇ ಒಂದು ವೇಳೆ ಮನೆಯಲ್ಲಿ ಯಾರಾದರೂ ಕೂಡ ನಿಧನ ಆಗಿದ್ದರೆ, ಅಂಥವರ ಹೆಸರನ್ನು ತೆಗೆದು ಹಾಕಿಸಿರಬೇಕು, ಆ ಕೆಲಸವನ್ನು ಕೂಡ ಹಲವಾರು ಜನರು ಮಾಡಿಲ್ಲ. ಅವರ ಹೆಸರುಗಳನ್ನು ತೆಗೆದು ಹಾಕಿದರೆ, ಆಗ ಸರ್ಕಾರಕ್ಕೆ ಒಂದಷ್ಟು ಯೂನಿಟ್ ಉಳಿತಾಯ ಆಗುತ್ತದೆ.

BPL Ration Cardಇನ್ನು ಮತ್ತೊಂದು ಪ್ರಮುಖ ವಿಚಾರ ಏನು ಎಂದರೆ, ನಮ್ಮಲ್ಲಿ 80-83% ಅಷ್ಟು ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಜನರು ಪ್ರತಿ ತಿಂಗಳು ಪಡಿತರ ಪಡೆಯುತ್ತಿದ್ದಾರೆ. 3 ತಿಂಗಳಿನಿಂದ ಹಲವಾರು ಜನರು ಪಡಿತರ ಪಡೆದಿಲ್ಲ, ಇನ್ನು 6 ತಿಂಗಳುಗಳಿಂದ ಯಾರೆಲ್ಲಾ ಪಡಿತರ ಪಡೆದಿಲ್ಲವೋ ಅಂಥವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಏನೇ ಮಾಡಿದ್ರೂ ಗೃಹಲಕ್ಷ್ಮಿ ಯೋಜನೆ ಹಣ ಇನ್ನು ಬಂದಿಲ್ವಾ? ಹಾಗಾದ್ರೆ ಕೂಡಲೇ ಈ ಕೆಲಸ ಮಾಡಿ

ಲೋಕಸಭಾ ಎಲೆಕ್ಷನ್ ಇದ್ದ ಕಾರಣ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅರ್ಧಕ್ಕೆ ನಿಂತಿತ್ತು, ಆದರೆ ಇನ್ನುಮುಂದೆ ಈ ಕೆಲಸ ಕೂಡ ಶುರುವಾಗಲಿದೆ ಎಂದು ಸರ್ಕಾರ ತಿಳಿಸಿದ್ದು, ಶೀಘ್ರದಲ್ಲೇ ದಿನಾಂಕವನ್ನು ತಿಳಿಸಲಾಗುತ್ತದೆ.

The government took 2 tough decisions about the ration card