ಏನೇ ಮಾಡಿದ್ರೂ ಗೃಹಲಕ್ಷ್ಮಿ ಯೋಜನೆ ಹಣ ಇನ್ನು ಬಂದಿಲ್ವಾ? ಹಾಗಾದ್ರೆ ಕೂಡಲೇ ಈ ಕೆಲಸ ಮಾಡಿ
ರಾಜ್ಯ ಸರ್ಕಾರವು ನಮ್ಮ ರಾಜ್ಯದ ಮಹಿಳೆಯರಿಗೆ ಅರ್ಥಿಕವಾಗಿ ಸಹಾಯ ಆಗಲಿ ಎನ್ನುವ ಕಾರಣಕ್ಕೆ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದ ಹಾಗೆ ಜಾರಿಗೆ ತಂದಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ ಆಗಿದೆ. ಈ ಒಂದು ಯೋಜನೆಯ ಮೂಲಕ ಪ್ರತಿ ತಿಂಗಳು ಮನೆಯ ಹಿರಿಯ ಹೆಣ್ಣುಮಗಳಿಗೆ ಪ್ರತಿ ತಿಂಗಳು ₹2000 ರೂಪಾಯಿ ಜಮೆ ಆಗುತ್ತಿದೆ. 10 ತಿಂಗಳುಗಳ ಕಾಲ ಗೃಹಲಕ್ಷ್ಮಿ ಯೋಜನೆಯ ಮೊತ್ತ ಜಮೆ (Money Deposit) ಆಗಿದೆ.
ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಒಟ್ಟಿಗೆ ಸಿಗಲಿದೆ ₹4000, ಮಹಿಳೆಯರಿಗೆ ಭರ್ಜರಿ ನ್ಯೂಸ್!
11 ಮತ್ತು 11ನೇ ಕಂತಿನ ಹಣ ಬರೋದು ಯಾವಾಗ?
11 ಮತ್ತು 12ನೇ ಕಂತಿನ ಹಣ ಬಿಡುಗಡೆ ಆಗಲು ತಡ ಆಗಿರುವುದು ಎಲೆಕ್ಷನ್ ಇದ್ದ ಕಾರಣದಿಂದ. ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಆಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದು, ಜೂನ್ ತಿಂಗಳ 20ನೇ ತಾರೀಕಿನ ಒಳಗೆ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಬಿಡುಗಡೆ ಆಗಲಿದೆ. ಆದರೆ ಇನ್ನೂ ಕೂಡ ಹಲವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ.
ಗೃಹಲಕ್ಷ್ಮಿ ಹಣ ಬರದೇ ಇದ್ದರೆ ಏನು ಮಾಡಬೇಕು?
ಗೃಹಲಕ್ಷ್ಮಿ ಯೋಜನೆ ಶುರುವಾಗಿ ಬಹಳ ಸಮಯ ಆಗಿದ್ದರು ಸಹ ಇನ್ನು ಕೂಡ ಕೆಲವು ಮಹಿಳೆಯರಿಗೆ ಯೋಜನೆಯ ಹಣ ತಲುಪಿಲ್ಲ. ಅಂಥವರಿಗೆ ಹಣ ಯಾಕೆ ಬಂದಿಲ್ಲ, ಹಣ ಬಂದಿಲ್ಲ ಎಂದರೆ ಏನು ಮಾಡಬೇಕು ಎಂದು ಕೂಡ ಲಕ್ಷ್ಮೀ ಹೆಬ್ಬಾಳ್ಕರ್ ಅವರೇ ತಿಳಿಸಿದ್ದಾರೆ. ನಮಗೆಲ್ಲ ಗೊತ್ತಿರುವ ಹಾಗೆ ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಈಗ ಕಡ್ಡಾಯ ಆಗಿದೆ. ಈ ಕೆಲಸ ಆಗಿಲ್ಲ ಎಂದರೆ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ (Bank Account) ಬರುವುದಿಲ್ಲ.
ರೇಷನ್ ಕಾರ್ಡಿನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಗಡುವು ಮತ್ತೊಮ್ಮೆ ವಿಸ್ತರಣೆ
ಈ ಕೆಲಸ ತಪ್ಪದೇ ಮಾಡಿ!
11ನೇ ಕಂತಿನ ಹಣ ನಿಮ್ಮ ಅಕೌಂಟ್ ಗೆ ಬರಬೇಕು ಎಂದರೆ ತಪ್ಪದೇ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಿ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಹಾಗೆ ಈ ಒಂದು ಕೆಲಸ ಮಾಡುವುದು ಕಡ್ಡಾಯ ಆಗಿದೆ. ನೀವಿನ್ನು ಮಾಡಿಲ್ಲ ಎಂದರೆ ಲಿಂಕ್ ಮಾಡಿ.
ಹಾಗೆಯೇ ಮತ್ತೊಂದು ಪ್ರಮುಖ ವಿಚಾರ ನಿಮ್ಮ ಬ್ಯಾಂಕ್ ಅಕೌಂಟ್ ಆಕ್ಟಿವ್ ಆಗಿದ್ಯಾ ಎನ್ನುವುದನ್ನು ಕೂಡ ಚೆಕ್ ಮಾಡಿಕೊಳ್ಳಿ. ಒಬ್ಬ ವ್ಯಕ್ತಿಯ ಬಳಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದರೆ ಅಂಥವರಿಗೂ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿರುವುದಿಲ್ಲ, ಅದನ್ನು ಸಹ ಚೆಕ್ ಮಾಡಿ, ಆಕ್ಟಿವ್ ಆಗಿರುವ ಅಕೌಂಟ್ ಅನ್ನು ಗೃಹಲಕ್ಷ್ಮಿ ಯೋಜನೆಗೆ ಲಿಂಕ್ ಮಾಡಿ..
ಹಾಗೆಯೇ ನಿಮ್ಮ ಬಗ್ಗೆ ಆಧಾರ್ ಕಾರ್ಡ್, ರೇಶನ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಇದೆಲ್ಲದರಲ್ಲೂ ಇರುವ ಮಾಹಿತಿ ಒಂದೇ ರೀತಿ ಇದೆಯಾ ಎಂದು ಪರೀಕ್ಷಿಸಿ, ಒಂದು ವೇಳೆ ಬೇರೆ ಬೇರೆ ಮಾಹಿತಿ ಇದ್ದರೆ ಆಗಲು ಕೂಡ ಹಣ ಬರುವ ಸಾಧ್ಯತೆ ಕಡಿಮೆ ಇರುತ್ತದೆ. ಜೊತೆಗೆ ಆಧಾರ್ ಕಾರ್ಡ್ ಗೆ NCPI Mapping ಕೂಡ ಮಾಡಿಸಿರಬೇಕು. ಇದಿಷ್ಟು ಕಡ್ಡಾಯ ಆಗಿದ್ದು, ಈ ಎಲ್ಲಾ ಕೆಲಸಗಳು ಆಗಿದ್ದರೆ ನಿಮ್ಮ ಅಕೌಂಟ್ ಗೆ ಹಣ ಖಂಡಿತವಾಗಿ ಬರುತ್ತದೆ.
ಸ್ವಂತ ಕೃಷಿ ಭೂಮಿ ಇರೋರಿಗೆ ಉಚಿತ ಬೋರ್ ವೆಲ್! ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಿ
Do this immediately if Gruha Lakshmi Yojana money has not yet arrived