ರೇಷನ್ ಕಾರ್ಡಿನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಗಡುವು ಮತ್ತೊಮ್ಮೆ ವಿಸ್ತರಣೆ

Story Highlights

ಸರ್ಕಾರವು ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಿದೆ. ಈ ಕೆಲಸ ಮಾಡಲು ಈಗ ದಿನಾಂಕವನ್ನು ಸಹ ವಿಸ್ತರಿಸಲಾಗಿದೆ.

linking Aadhar Card with Ration Card : ನಮ್ಮ ದೇಶದಲ್ಲಿ ಹಲವು ವಿಚಾರಗಳಿಗೆ ಸ್ಕ್ಯಾಮ್ ಆಗುತ್ತದೆ. ಸರ್ಕಾರ ಕೊಡುವ ಉಪಯೋಗಗಳನ್ನು ಹೆಚ್ಚಿನ ಜನರು ದುರುಪಯೋಗ ಪಡಿಸಿಕೊಳ್ಳುವುದುಂಟು. ಇದರಿಂದ ಸರ್ಕಾರಕ್ಕೆ ಮೋಸ ಆಗುತ್ತಿದೆ, ಇಂಥ ಸ್ಕ್ಯಾಮ್ ಗಳಲ್ಲಿ ರೇಷನ್ ಕಾರ್ಡ್ ವಿಚಾರ ಪ್ರಮುಖ ಆಗಿದೆ ಎಂದರೆ ತಪ್ಪಲ್ಲ. ಅದಕ್ಕಾಗಿ ಕೇಂದ್ರ ಸರ್ಕಾರ ಈಗ ರೇಷನ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ಮುಖ್ಯವಾದ ಸಂದೇಶ ಒಂದನ್ನು ನೀಡಿದೆ..

ರೇಷನ್ ಕಾರ್ಡ್ ಬಗ್ಗೆ ಗಮನವಿರಲಿ

ರೇಷನ್ ಕಾರ್ಡ್ ಇರುವ ಜನರಿಗೆ ಸರ್ಕಾರದಿಂದ ಬಹಳಷ್ಟು ಸೌಲಭ್ಯಗಳು ಸಿಗುತ್ತದೆ. ಉಚಿತ ಅಥವಾ ಅತ್ಯಂತ ಕಡಿಮೆ ಬೆಲೆಗೆ ರೇಷನ್, ಆರೋಗ್ಯ ಸೇವೆ ಇಂಥ ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳಲಾಗುತ್ತದೆ. ಆದರೆ ಕೆಲವು ವ್ಯಕ್ತಿಗಳು ರೇಷನ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ. ಒಬ್ಬರೇ ವ್ಯಕ್ತಿ ಹೆಚ್ಚು ರೇಷನ್ ಕಾರ್ಡ್ ಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ.

ರಾಜ್ಯದ ರೈತರ ಬ್ಯಾಂಕ್ ಖಾತೆಗೆ ₹3000 ರೂಪಾಯಿ ಡೆಪಾಸಿಟ್! ಕೃಷಿ ಸಚಿವರಿಂದ ಸಿಹಿ ಸುದ್ದಿ

Aadhaar Cardರೇಷನ್ ಕಾರ್ಡ್ ಕುರಿತು ಈ ಕೆಲಸ ಕಡ್ಡಾಯ

ಈ ರೀತಿಯಾಗಿ ಸರ್ಕಾರದ ಪ್ರಯೋಜನಗಳನ್ನು ಪಡೆದು ಮೋಸ ಮಾಡುತ್ತಿದ್ದಾರೆ. ಇಂಥ ಭ್ರಷ್ಟಾಚಾರಗಳು ಹೆಚ್ಚಾಗುತ್ತಿರುವ ಕಾರಣ ಸರ್ಕಾರವು ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ (Aadhaar Card) ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಿದೆ. ಈ ಕೆಲಸ ಮಾಡಲು ಈಗ ದಿನಾಂಕವನ್ನು ಸಹ ವಿಸ್ತರಿಸಲಾಗಿದೆ. ಈ ಮೊದಲು 2024ರ ಜೂನ್ 30ರ ಒಳಗೆ ರೇಶನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲೇಬೇಕು ಎಂದು ತಿಳಿಸಲಾಗಿತ್ತು. ಆದರೆ ಈಗ ದಿನಾಂಕವನ್ನು ಮುಂದೂಡಲಾಗಿದೆ.

ಸ್ವಂತ ಕೃಷಿ ಭೂಮಿ ಇರೋರಿಗೆ ಉಚಿತ ಬೋರ್ ವೆಲ್! ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಿ

ಮೂರು ತಿಂಗಳ ಕಾಲ ಗಡುವು ವಿಸ್ತರಣೆ

ಜನರು ಈ ಪ್ರಮುಖವಾದ ಕೆಲಸವನ್ನು ತಪ್ಪದೇ ಮಾಡಲಿ ಎಂದು ಸರ್ಕಾರವು ಮೂರು ತಿಂಗಳುಗಳ ಕಾಲ ಸಮಯವನ್ನು ವಿಸ್ತರಿಸಿದ್ದು, ಸೆಪ್ಟೆಂಬರ್ 30ನೇ ತಾರೀಕು ಕೊನೆಯ ದಿನಾಂಕ ಆಗಿದೆ. ಈ ದಿನಾಂಕದ ಒಳಗೆ ಎಲ್ಲರೂ ಸಹ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಬೇಕು. ಈ ರೀತಿ ಮಾಡುವುದರಿಂದ ಯಾರೆಲ್ಲಾ ಪ್ರತಿ ತಿಂಗಳು ರೇಷನ್ ಪಡೆಯುತ್ತಿದ್ದಾರೆ ಎನ್ನುವುದರಿಂದ ಹಿಡಿದು, ಇನ್ನಿತರ ಮಾಹಿತಿಗಳು ಸಹ ಸರ್ಕಾರಕ್ಕೆ ಸಿಗುತ್ತದೆ. ಹಾಗಿದ್ದಲ್ಲಿ ಈ ಪ್ರಕ್ರಿಯೆ ಮಾಡೋದು ಹೇಗೆ ಎಂದು ತಿಳಿಯೋಣ..

ರೇಷನ್ ಕಾರ್ಡ್ ಇದ್ದವರಿಗೆ ಬೆಳ್ಳಂಬೆಳ್ಳಗೆ ಸಿಹಿ ಸುದ್ದಿ! ಇನ್ಮುಂದೆ ಸಿಗಲಿದೆ ಇನ್ನಷ್ಟು ಬೆನಿಫಿಟ್

Ration Cardರೇಷನ್ ಕಾರ್ಡ್ ಜೊತೆಗೆ ಆಧಾರ್ ಲಿಂಕ್ ಮಾಡುವ ವಿಧಾನ

*ಮೊದಲಿಗೆ ನಿಮ್ಮ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ

*ಬ್ಯಾಂಕಿಂಗ್ ಪೋರ್ಟಲ್ ನಲ್ಲಿ Login ಆದ ನಂತರ Kyc ಆಪ್ಶನ್ ಸೆಲೆಕ್ಟ್ ಮಾಡಿ

*ಇಲ್ಲಿ ನಿಮ್ಮ ಹೆಸರು, ಅಡ್ರೆಸ್, ಡೇಟ್ ಆಫ್ ಬರ್ತ್ ಹಾಗೂ ಇನ್ನಿತರ ಮಾಹಿತಿಗಳನ್ನು ಕೇಳಲಾಗುತ್ತದೆ, ಅವೆಲ್ಲವನ್ನೂ ಫಿಲ್ ಮಾಡಿ.

*ಇಲ್ಲಿ ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಇನ್ನಿತರ ದಾಖಲೆಗಳು ಬೇಕಾಗುತ್ತದೆ. ಅವೆಲ್ಲವನ್ನೂ ಅಪ್ಲೋಡ್ ಮಾಡಿ.

*ಇಷ್ಟು ಕೆಲಸ ಮಾಡಿದ ಬಳಿಕ Submit ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ.

*ಇದಿಷ್ಟು ಮಾಡಿದ ಬಳಿಕ ನಿಮ್ಮ ಫೋನ್ ಗೆ ಮೆಸೇಜ್ ಬರುತ್ತದೆ ಅಥವಾ ಮೇಲ್ ಬರುತ್ತದೆ.

Deadline for linking Aadhar Card with Ration Card extended again

Related Stories