ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಒಟ್ಟಿಗೆ ಸಿಗಲಿದೆ ₹4000, ಮಹಿಳೆಯರಿಗೆ ಭರ್ಜರಿ ನ್ಯೂಸ್!
ಎರಡು ಕಂತುಗಳ ಗೃಹಲಕ್ಷ್ಮಿ ಯೋಜನೆ ಹಣ ಒಟ್ಟಿಗೆ, ಅಂದರೆ 4000 ರೂಪಾಯಿಗಳು ಮಹಿಳೆಯರ ಬ್ಯಾಂಕ್ ಖಾತೆಗೆ (Bank Account) ಬಂದು ತಲುಪುತ್ತದೆ
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು 11ನೇ ಕಂತಿನ ಹಣ ಯಾವಾಗ ಬರುತ್ತದೆ ಎಂದು ಕಾದು ಕುಳಿತಿದ್ದರು, ಅವರಿಗೆಲ್ಲಾ ಈಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಡೆಯಿಂದ ಒಂದು ಗುಡ್ ನ್ಯೂಸ್ ಸಿಕ್ಕಿದೆ.
ಇಷ್ಟು ತಿಂಗಳುಗಳ ಕಾಲ ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಮೂಲಕ ಪ್ರತಿ ತಿಂಗಳು ₹2000 ಬರುತ್ತಿತ್ತು, ಆದರೆ ಈಗ ₹4000 ಅಂದರೆ ಡಬಲ್ ಹಣ ಮಹಿಳೆಯರ ಖಾತೆಗೆ ಬರಲಿದೆ. ಈ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರೇ ತಿಳಿಸಿದ್ದು, ಮಹಿಳೆಯರಿಗೆ ಇದು ಭರ್ಜರಿ ನ್ಯೂಸ್ ಆಗಿದೆ..
ರೇಷನ್ ಕಾರ್ಡಿನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಗಡುವು ಮತ್ತೊಮ್ಮೆ ವಿಸ್ತರಣೆ
ಗೃಹಲಕ್ಷ್ಮಿ ಯೋಜನೆ ಶುರುವಾಗಿ 10 ತಿಂಗಳು ಕಳೆದಿದ್ದು, ಮಹಿಳೆಯರಿಗೆ 10 ತಿಂಗಳು ಸಹ ಸರಿಯಾಗಿ ಹಣ ವರ್ಗಾವಣೆ ಆಗಿದೆ. ಆದರೆ 11 ನೇ ತಿಂಗಳ ಹಣ ವರ್ಗಾವಣೆ ಆಗಿರಲಿಲ್ಲ ಎಂದು ಮಹಿಳೆಯರು ಆತಂಕಕ್ಕೆ ಒಳಗಾಗಿದ್ದರು, ಆದರೆ ಚುನಾವಣೆ, ಅದರ ಫಲಿತಾಂಶ ಇದೆಲ್ಲವೂ ಇದ್ದ ಕಾರಣ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಬಿಡುಗರೆ ಆಗುವುದಕ್ಕೆ, ತಡ ಆಗಿದೆ. ಇದೀಗ ಸರ್ಕಾರದ ಕಡೆಯಿಂದ ಎಲ್ಲಾ ಮಹಿಳೆಯರಿಗೆ ಒಂದು ಭರ್ಜರಿಯಾದ ಗುಡ್ ನ್ಯೂಸ್ ಸಿಕ್ಕಿದೆ.
ತೃತೀಯಲಿಂಗಿಗಳಿಗೆ ಗುಡ್ ನ್ಯೂಸ್
ಇಷ್ಟು ದಿನಗಳ ಕಾಲ ಗೃಹಲಕ್ಷ್ಮೀ ಯೋಜನೆಯ ಸೌಲಭ್ಯವನ್ನು ಎಲ್ಲಾ ಮಹಿಳೆಯರು ಪಡೆಯುತ್ತಿದ್ದರು, ನಮ್ಮ ರಾಜ್ಯದಲ್ಲಿ ಮದುವೆಯಾಗಿ ಮನೆಯ ಮುಖ್ಯಸ್ಥೆ ಆಗಿರುವ 1 ಕೋಟಿಗಿಂತ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ, ಸೌಲಭ್ಯ ಪಡೆಯುತ್ತಿದ್ದಾರೆ. ಆದರೆ ಇದೀಗ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಒಂದು ಗುಡ್ ನ್ಯೂಸ್ ನೀಡಿದ್ದು, ತೃತೀಯ ಲಿಂಗಿಗಳು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅವರುಗಳು ಅರ್ಜಿ ಸಲ್ಲಿಸುವುದಕ್ಕೆ ಜುಲೈ ತಿಂಗಳ ವರೆಗು ಅವಕಾಶ ನೀಡಲಾಗಿದೆ.
ರಾಜ್ಯದ ರೈತರ ಬ್ಯಾಂಕ್ ಖಾತೆಗೆ ₹3000 ರೂಪಾಯಿ ಡೆಪಾಸಿಟ್! ಕೃಷಿ ಸಚಿವರಿಂದ ಸಿಹಿ ಸುದ್ದಿ
11 ಮತ್ತು 12ನೇ ಕಂತಿನ ಹಣ ಬರೋದು ಯಾವಾಗ?
ಗೃಹಲಕ್ಷ್ಮೀ ಯೋಜನೆಯ 11 ಮತ್ತು 12ನೇ ಕಂತಿನ ಹಣ ಬರೋದು ಯಾವಾಗ ಎನ್ನುವ ಪ್ರಶ್ನೆ ಈಗ ಮಹಿಳೆಯರಲ್ಲಿ ಆತಂಕ ಮೂಡಿಸಿತ್ತು, ಆದರೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅದಕ್ಕೆ ಉತ್ತರ ನೀಡಿದ್ದು, ಜೂನ್ ತಿಂಗಳ 3ನೇ ವಾರದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. 11 ಮತ್ತು 12ನೇ ಕಂತಿನ ಹಣ ಬಿಡುಗಡೆಯಾಗುತ್ತದೆ, ಪೆಂಡಿಂಗ್ ಇರುವುದೆಲ್ಲವು ಕ್ಲಿಯರ್ ಆಗುತ್ತದೆ ಎಂದು ತಿಳಿಸಿದ್ದಾರೆ..
ರೇಷನ್ ಕಾರ್ಡ್ ಇದ್ದವರಿಗೆ ಬೆಳ್ಳಂಬೆಳ್ಳಗೆ ಸಿಹಿ ಸುದ್ದಿ! ಇನ್ಮುಂದೆ ಸಿಗಲಿದೆ ಇನ್ನಷ್ಟು ಬೆನಿಫಿಟ್
ಈ ಮೂಲಕ ಎರಡು ಕಂತುಗಳ ಹಣ ಒಟ್ಟಿಗೆ, ಅಂದರೆ 4000 ರೂಪಾಯಿಗಳು ಮಹಿಳೆಯರ ಬ್ಯಾಂಕ್ ಖಾತೆಗೆ (Bank Account) ಬಂದು ತಲುಪುತ್ತದೆ ಎಂದು ತಿಳಿಸಿದ್ದಾರೆ. ಹಾಗೆಯೇ ಮತ್ತೊಂದು ವಿಚಾರ ಸಹ ಇದ್ದು, ಒಂದು ವೇಳೆ ಯಾರಾದರು ಇನ್ನು ಕೂಡ ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಿಲ್ಲ ಎಂದರೆ, ಅಂಥವರು ಈಗಲೂ ಅರ್ಜಿ ಸಲ್ಲಿಸಿ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯವನ್ನು ಪಡೆಯುವುದಕ್ಕೆ ಶುರು ಮಾಡಿಕೊಳ್ಳಬಹುದು.
Gruha Lakshmi Yojana beneficiaries will get 4000 together, Know the details