ದಿನ ಭವಿಷ್ಯ 23 ನವೆಂಬರ್ 2026, ಸೋಮವಾರ
Today Horoscope: ಇಂದು ಮೇಷದಿಂದ ಮೀನ ರಾಶಿವರೆಗಿನವರಿಗೆ ಉದ್ಯೋಗ, ಹಣಕಾಸು, ಆರೋಗ್ಯ ಮತ್ತು ಕುಟುಂಬ ಜೀವನದಲ್ಲಿ ವಿಭಿನ್ನ ಫಲಗಳಿವೆ. ಕೆಲವರಿಗೆ ಶುಭಸುದ್ದಿ, ಹಣದ ಲಾಭ ಸಿಕ್ಕರೆ, ಇನ್ನು ಕೆಲವರು ಎಚ್ಚರಿಕೆಯಿಂದ ಇರಬೇಕು.

ಈ ದಿನ ಕೆಲವು ರಾಶಿಗಳಿಗೆ ಅದೃಷ್ಟ, ಇಲ್ಲಿದೆ ಸಂಪೂರ್ಣ ಭವಿಷ್ಯ: ದಿನ ಭವಿಷ್ಯ 23-11-2026: ಇಂದು ಗ್ರಹಗಳ ಸೂಚನೆ ಏನು? 12 ರಾಶಿಗಳ ಪಾಲಿಗೆ ಹೇಗಿದೆ ಈ ದಿನ
ಮೇಷ ರಾಶಿ: ಕುಟುಂಬದಲ್ಲಿ ಸಂತೋಷ ಮತ್ತು ಬೆಂಬಲ ಸಿಗಲಿದೆ. ಆರೋಗ್ಯ, ಹಣಕಾಸಿನ ವಿಚಾರದಲ್ಲಿ ಎಚ್ಚರವಿರಲಿ; ಹೊಸ ಕೆಲಸ ಆರಂಭಿಸುವುದನ್ನು ಮುಂದೂಡಿ.
ವೃಷಭ ರಾಶಿ: ಕೈಗೊಂಡ ಕೆಲಸಗಳಲ್ಲಿ ಯಶಸ್ಸು ಸಿಗಲಿದ್ದು, ಶುಭಸುದ್ದಿ ಸಂತಸ ತರಲಿದೆ. ಗೌರವ ಹೆಚ್ಚುವುದರ ಜೊತೆಗೆ ಅನಿರೀಕ್ಷಿತ ಹಣದ ಲಾಭವಾಗುವ ಸಾಧ್ಯತೆ ಇದೆ.
ಮಿಥುನ ರಾಶಿ: ಅಡೆತಡೆಗಳ ನಡುವೆಯೂ ಪ್ರಯತ್ನದಿಂದ ಪ್ರಮುಖ ಕೆಲಸಗಳು ಪೂರ್ಣಗೊಳ್ಳಲಿವೆ. ಉದ್ಯೋಗದಲ್ಲಿ ಮೆಚ್ಚುಗೆ ಸಿಗಲಿದ್ದು, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಕರ್ಕಾಟಕ ರಾಶಿ: ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ, ಅನಗತ್ಯ ವಾದಗಳಿಂದ ದೂರವಿರಿ. ವಿದ್ಯಾರ್ಥಿಗಳು ಓದಿನತ್ತ ಗಮನಹರಿಸಲಿ, ವ್ಯಾಪಾರಸ್ಥರು ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಲಿ.
ಸಿಂಹ ರಾಶಿ: ಕೆಲಸಗಳಲ್ಲಿ ಅಡೆತಡೆ ಎದುರಾಗಬಹುದು, ಆಸ್ತಿ ಮತ್ತು ಹಣಕಾಸಿನ ವ್ಯವಹಾರದಲ್ಲಿ ಜಾಗರೂಕರಾಗಿರಿ. ಹೊಸ ಕೆಲಸಗಳನ್ನು ಮುಂದೂಡಿ, ಪ್ರಯಾಣ ಹೆಚ್ಚಾಗುವ ಸಾಧ್ಯತೆ ಇದೆ.
ಕನ್ಯಾ ರಾಶಿ: ಉದ್ಯೋಗದಲ್ಲಿ ಅನುಕೂಲಕರ ಬದಲಾವಣೆಗಳಾಗಲಿದ್ದು, ಆರ್ಥಿಕ ಸವಾಲು ಎದುರಾಗಬಹುದು. ಆರೋಗ್ಯ ಮತ್ತು ಆಸ್ತಿ ವ್ಯವಹಾರಗಳಲ್ಲಿ ಎಚ್ಚರವಿರಲಿ, ಜಗಳಗಳಿಂದ ದೂರವಿರಿ.
ತುಲಾ ರಾಶಿ: ಕೆಲಸದ ನಿಮಿತ್ತ ಸ್ಥಳ ಬದಲಾವಣೆಯಾಗುವ ಸಾಧ್ಯತೆಯಿದ್ದು, ಹೊಸ ಪರಿಚಯಗಳು ಉಪಯುಕ್ತವಾಗಲಿವೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಆರ್ಥಿಕ ಸಮಸ್ಯೆಗಳು ಕ್ರಮೇಣ ಕಡಿಮೆಯಾಗಲಿವೆ.
ವೃಶ್ಚಿಕ ರಾಶಿ: ಕುಟುಂಬದಲ್ಲಿ ಸಂತೋಷ ನೆಲೆಸಲಿದ್ದು, ಕೆಲಸದ ಸ್ಥಳದಲ್ಲಿ ಪ್ರಶಂಸೆ ದೊರೆಯಲಿದೆ. ಶುಭಸುದ್ದಿ, ಹಣದ ಲಾಭ ಹಾಗೂ ಸ್ನೇಹಿತರೊಂದಿಗೆ ಸಂಭ್ರಮಿಸುವ ಅವಕಾಶ ಸಿಗಲಿದೆ.
ಧನು ರಾಶಿ: ಉದ್ಯೋಗದಲ್ಲಿ ಪ್ರಗತಿ ಕಂಡುಬಂದರೂ ಅನಿರೀಕ್ಷಿತ ಜವಾಬ್ದಾರಿಗಳು ಎದುರಾಗಲಿವೆ. ಅನಗತ್ಯ ಖರ್ಚು ಮತ್ತು ಪ್ರಯಾಣದಿಂದ ತೊಂದರೆಯಾಗಬಹುದು, ಮಹಿಳೆಯರಿಂದ ಆರ್ಥಿಕ ನೆರವು ಸಿಗಲಿದೆ.
ಮಕರ ರಾಶಿ: ಪ್ರಯತ್ನಗಳಿಗೆ ಉತ್ತಮ ಫಲ ಸಿಗಲಿದ್ದು, ಕುಟುಂಬದ ಶುಭಕಾರ್ಯಗಳು ಸುಗಮವಾಗಿ ನೆರವೇರಲಿವೆ. ಆಪ್ತರ ಸಹಕಾರ, ಅನಿರೀಕ್ಷಿತ ಹಣದ ಲಾಭ ಹಾಗೂ ಖರೀದಿಯ ಯೋಗವಿದೆ.
ಕುಂಭ ರಾಶಿ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಿ, ಕುಟುಂಬದಲ್ಲಿ ನೆಮ್ಮದಿ ನೆಲೆಸಲಿದೆ. ಸಮಾಜದಲ್ಲಿ ಗೌರವ ಹೆಚ್ಚುವುದರ ಜೊತೆಗೆ ಹಣದ ಲಾಭ ಮತ್ತು ಶುಭಕಾರ್ಯಗಳ ಯೋಗವಿದೆ.
ಮೀನ ರಾಶಿ: ಮನಸ್ಸಿನ ಆತಂಕಗಳು ದೂರವಾಗಿ ನೆಮ್ಮದಿ ಸಿಗಲಿದ್ದು, ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಉದ್ಯೋಗದಲ್ಲಿ ಸ್ಥಳ ಬದಲಾವಣೆಯಾಗಬಹುದು, ಹಣಕಾಸಿನ ವಿಚಾರದಲ್ಲಿ ಏರಿಳಿತಗಳಿರಲಿವೆ.



