ಕಬ್ಬು ಬೆಳೆಗಾರರ ಪರ ನಿಲ್ಲಲು ಮನವಿ; ಇಂದು ಸ್ವಯಂಪ್ರೇರಿತ ಕರ್ನಾಟಕ ಬಂದ್‌ಗೆ ಕರೆ
Karnataka Bandh: ಕಬ್ಬು ಬೆಳೆಗಾರರ ಹೋರಾಟಕ್ಕೆ ರಾಜ್ಯಾದ್ಯಂತ ಬೆಂಬಲ ಕ್ರೋಡೀಕರಿಸಲು ರೈತ ಸಂಘ ಮುಂದಾಗಿದ್ದು, ಶನಿವಾರ ಹಳ್ಳಿಯಿಂದ ನಗರಗಳವರೆಗೆ ಸ್ವಯಂಪ್ರೇರಿತ ಬಂದ್ ಆಚರಿಸುವಂತೆ ಶಶಿಕಾಂತ ಗುರೂಜಿ ಮನವಿ ಮಾಡಿದ್ದಾರೆ.

Karnataka Bandh: ಕಬ್ಬು ಬೆಳೆಗಾರರ (Sugarcane Farmers) ಸಮಸ್ಯೆಗೆ ಪರಿಹಾರ ಸಿಗಬೇಕು ಎಂಬ ಒತ್ತಾಯಕ್ಕೆ ಮತ್ತಷ್ಟು ಬಲ ತುಂಬಲು ರೈತ ಸಂಘಟನೆಗಳು ಮುಂದಾಗಿವೆ. ಇದರ ಭಾಗವಾಗಿ ಶನಿವಾರ ರಾಜ್ಯಾದ್ಯಂತ ಸ್ವಯಂಪ್ರೇರಿತ ಕರ್ನಾಟಕ ಬಂದ್ (Karnataka Bandh) ಆಚರಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಕರೆ ನೀಡಿದ್ದಾರೆ.
ಗುರ್ಲಾಪೂರ ಕ್ರಾಸ್‌ನಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಹೋರಾಟಕ್ಕೆ ಕೇವಲ ರೈತರು ಮಾತ್ರವಲ್ಲ, ಸಮಾಜದ ಎಲ್ಲ ವರ್ಗದ ಜನರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ಕರ್ನಾಟಕ ಕಬ್ಬು ಬೆಳೆಗಾರರ ಆಕ್ರೋಶಕ್ಕೆ ಬಿಗ್ ಟ್ವಿಸ್ಟ್! ನೇರವಾಗಿ ಪ್ರಧಾನಿ ಮೋದಿಗೆ ಡಿಕೆಶಿ ಪತ್ರ
ರೈತರ ಪ್ರತಿಭಟನೆಗೆ ಚಿತ್ರರಂಗದ ಬೆಂಬಲವೂ ಅಗತ್ಯ ಎಂದು ಅಭಿಪ್ರಾಯಪಟ್ಟ ಅವರು, ನಟ-ನಟಿಯರು ಬಹಿರಂಗವಾಗಿ ರೈತರ ಪರ ನಿಲ್ಲಬೇಕು ಎಂದು ಒತ್ತಾಯಿಸಿದರು. ಚಿತ್ರರಂಗದಿಂದ ಸೂಕ್ತ ಬೆಂಬಲ ಸಿಗದಿದ್ದರೆ ರೈತರು ಚಿತ್ರಮಂದಿರಗಳಿಗೆ ತೆರಳಿ ಸಿನಿಮಾ ವೀಕ್ಷಿಸುವುದನ್ನು ನಿಲ್ಲಿಸಬೇಕು ಎಂಬ ಮನವಿಯನ್ನೂ ಮಾಡಿದರು.
ಇದೇ ವೇಳೆ ಬಂದ್‌ಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಹಾಲು, ತರಕಾರಿ ಸೇರಿದಂತೆ ಪ್ರತಿದಿನ ಮಾರಾಟ ಮಾಡುವ ಅಗತ್ಯ ವಸ್ತುಗಳ ವ್ಯಾಪಾರವನ್ನು ಸ್ವಯಂಪ್ರೇರಿತವಾಗಿ ಸ್ಥಗಿತಗೊಳಿಸುವಂತೆ ರೈತರಿಗೆ ಕರೆ ನೀಡಿದರು. ಹಳ್ಳಿಗಳು, ಪಟ್ಟಣಗಳು ಹಾಗೂ ನಗರಗಳಲ್ಲೂ ಜನರು ಸ್ವಯಂಪ್ರೇರಣೆಯಿಂದ ಬಂದ್‌ನಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ಕಬ್ಬು ಬೆಳೆಗಾರರ ಪಟ್ಟು; ಏನೇ ಆಗಲಿ ನಾಳೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡೇ ಮಾಡ್ತೀವಿ..
ಮತ್ತೊಂದೆಡೆ, ಬೆಳಗಾವಿ ಜಿಲ್ಲಾಧಿಕಾರಿಗಳು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ತಡೆ ನಡೆಸುವುದು, ವಾಹನ ಸಂಚಾರಕ್ಕೆ ಅಡ್ಡಿಪಡಿಸುವುದು ಹಾಗೂ ಟೋಲ್ ಪ್ಲಾಜಾಗಳ ಕಾರ್ಯಾಚರಣೆಗೆ ತೊಂದರೆ ಉಂಟುಮಾಡುವುದನ್ನು ನಿಷೇಧಿಸಿದ್ದಾರೆ. ಹೀಗಾಗಿ ರೈತರು ಕಾನೂನಿನ ಮಿತಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮುಂದುವರಿಸಬೇಕು ಎಂದು ಶಶಿಕಾಂತ ಗುರೂಜಿ ಸೂಚಿಸಿದ್ದಾರೆ.
ಕಬ್ಬಿನ ಬೆಲೆ ನಿಗದಿ ಹಾಗೂ ರೈತರ ಬೇಡಿಕೆಗಳ ವಿಚಾರವಾಗಿ ನಡೆಯುತ್ತಿರುವ ಹೋರಾಟಕ್ಕೆ ಬಂದ್ ಮೂಲಕ ರಾಜ್ಯಮಟ್ಟದ ಬೆಂಬಲ ಪಡೆಯುವುದು ಸಂಘಟನೆಯ ಉದ್ದೇಶವಾಗಿದೆ. ಶನಿವಾರದ ಬಂದ್‌ಗೆ ಯಾವೆಲ್ಲ ಜಿಲ್ಲೆಗಳಲ್ಲಿ ಜನರು ಸ್ಪಂದಿಸುತ್ತಾರೆ ಎಂಬುದು ಈಗ ಕುತೂಹಲ ಮೂಡಿಸಿದೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.






