ಹಿರಿಯ ನಾಗರಿಕರ ಕಾರ್ಡ್ ಮಾಡಿಸಲು ಪೋರ್ಟಲ್ ಮತ್ತೆ ಪ್ರಾರಂಭ! ಸಿಗಲಿದೆ ಇನ್ನಷ್ಟು ಬೆನಿಫಿಟ್

ವಯಸ್ಸಾದವರಿಗೆ ಸೀನಿಯರ್ ಸಿಟಿಜನ್ ಕಾರ್ಡ್ ಗಳನ್ನು (senior citizens card) ಕೊಡಲಾಗುತ್ತದೆ ಎಂದು ನಮಗೆ ಗೊತ್ತಿದೆ. ಇದನ್ನು ಒಂದು ಪೋರ್ಟಲ್ (Portal) ಮೂಲಕ ಹಿರಿಯರು ಮಾಡಿಸಿಕೊಳ್ಳಬೇಕು.

Bengaluru, Karnataka, India
Edited By: Satish Raj Goravigere

ನಮ್ಮ ರಾಜ್ಯದಲ್ಲಿ ಮತ್ತು ದೇಶದಲ್ಲಿ ಎರಡು ಕಡೆ ಹಿರಿಯ ನಾಗರೀಕರಿಗೆ (senior citizens) ಅನುಕೂಲ ಆಗುವ ಅನೇಕ ಯೋಜನೆಗಳು, ಸೌಲಭ್ಯಗಳನ್ನು ಜಾರಿಗೆ ತರಲಾಗುತ್ತಿದೆ. ವಯಸ್ಸಾದ ಕಾಲಕ್ಕೆ ಅವರಿಗೆ ಅನುಕೂಲ ಆಗುವ ಹಾಗೆ ಪೆನ್ಶನ್ ಯೋಜನೆಗಳು (Pension Scheme) ಹಾಗು ಇನ್ನಿತರ ಯೋಜನೆಗಳನ್ನು ಜಾರಿಗೆ ತರಲಾಗಿದೆ.

ವಯಸ್ಸಾದವರಿಗೆ ಸೀನಿಯರ್ ಸಿಟಿಜನ್ ಕಾರ್ಡ್ ಗಳನ್ನು (senior citizens card) ಕೊಡಲಾಗುತ್ತದೆ ಎಂದು ನಮಗೆ ಗೊತ್ತಿದೆ. ಇದನ್ನು ಒಂದು ಪೋರ್ಟಲ್ (Portal) ಮೂಲಕ ಹಿರಿಯರು ಮಾಡಿಸಿಕೊಳ್ಳಬೇಕು. ಆದರೆ ಎಲೆಕ್ಷನ್ ಕಾರಣದಿಂದ ಸೀನಿಯರ್ ಸಿಟಿಜನ್ ಪೋರ್ಟಲ್ ತಾತ್ಕಾಲಿಕವಾಗಿ ನಿಂತಿತ್ತು. ಆದರೆ ಈಗ ಹಿರಿಯರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ.

Portal to make senior citizens card again started

ಶೌಚಾಲಯ ಕಟ್ಟಿಸಿಕೊಳ್ಳಲು ಈ ಯೋಜನೆಯ ಮೂಲಕ ಸಿಗಲಿದೆ ₹12000! ಇಂದೇ ಅರ್ಜಿ ಸಲ್ಲಿಸಿ

ಹಿರಿಯರಿಗೆ ಗುಡ್ ನ್ಯೂಸ್

ಇದೀಗ ರಾಜ್ಯದ ಹಿರಿಯ ನಾಗರೀಕರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದ್ದು, ಸೀನಿಯರ್ ಸಿಟಿಜನ್ ಕಾರ್ಡ್ ಮಾಡಿಸುವ ಪೋರ್ಟಲ್ ಅನ್ನು ಶೀಘ್ರದಲ್ಲೇ ಮತ್ತೆ ತೆರೆಯಲಾಗುತ್ತದೆ ಎಂದು ತಿಳಿದುಬಂದಿದೆ. ಈ ಪೋರ್ಟಲ್ ಬಂದ್ ಆಗಿದ್ದಕ್ಕೆ ಹಿರಿಯರಿಗೆ ಬಹಳ ತೊಂದರೆ ಆಗಿತ್ತು, ಮತ್ತೆ ಆರಂಭಿಸಿ ಎಂದು ಸರ್ಕಾರಕ್ಕೆ ಎಷ್ಟೇ ಕೇಳಿಕೊಂಡರು ಸಹ ಯಾವುದೇ ಪ್ರಯೋಜನ ಆಗಿರಲಿಲ್ಲ.

ಆದರೆ ಈಗ ಪೋರ್ಟಲ್ ಓಪನ್ ಮಾಡುವುದಾಗಿ ಸರ್ಕಾರದಿಂದಲೇ ಮಾಹಿತಿ ಸಿಕ್ಕಿದೆ. ಇದರ ಜೊತೆಗೆ ವಿಕಲಚೇತನ ಸಬಲೀಕರಣ ಪೋರ್ಟಲ್ ಅನ್ನು ಕೂಡ ತೆರೆಯಲಾಗುತ್ತದೆ.

ನಮಗೆಲ್ಲ ಗೊತ್ತಿರುವ ಹಾಗೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳು ಪೂರ್ತಿ ಲೋಕಸಭಾ ಎಲೆಕ್ಷನ್ ಹಂತ ಹಂತವಾಗಿ ಇಡೀ ದೇಶದಲ್ಲಿ ನಡೆಯಿತು. ಆ ವೇಳೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ, ಹಿರಿಯರಿಗೆ ಹೊಸದಾಗಿ ಸೀನಿಯರ್ ಸಿಟಿಜನ್ ಕಾರ್ಡ್ ಗಳನ್ನು ಮಾಡಿಸಿಕೊಳ್ಳಲು ಸಾಧ್ಯವಾಗಲಿಲ್ಲ ಜೊತೆಗೆ ಅದಕ್ಕೆ ಸಂಬಂಧಿಸಿದ ಸೇವೆಗಳನ್ನು ಸಹ ಪಡೆಯಲು ಸಾಧ್ಯ ಆಗಲಿಲ್ಲ. ಇದೀಗ 54 ದಿನಗಳ ನಂತರ ಈ ಪೋರ್ಟಲ್ ಮತ್ತೆ ಓಪನ್ ಆಗುತ್ತದೆ ಎಂದು ತಿಳಿದುಬಂದಿರುವುದು ಹಿರಿಯ ನಾಗರೀಕರಿಗೆ ಸಂತೋಷದ ವಿಚಾರ ಆಗಿದೆ..

ಇನ್ಮುಂದೆ ಬಿಪಿಎಲ್ ಕಾರ್ಡ್ ಪಡೆಯೋಕೆ ಈ 6 ನಿಯಮಗಳನ್ನು ಪಾಲಿಸಲೇಬೇಕು! ಹೊಸ ರೂಲ್ಸ್

senior citizens cardಸೀನಿಯರ್ ಸಿಟಿಜನ್ ಕಾರ್ಡ್ ನ ಉಪಯೋಗಗಳು

ಈ ಒಂದು ಸೀನಿಯರ್ ಸಿಟಿಜನ್ ಕಾರ್ಡ್ ಇದ್ದರೆ ಹಿರಿಯ ನಾಗರೀಕರಿಗೆ ಅನೇಕ ವಿಚಾರಗಳಲ್ಲಿ ವಿನಾಯಿತಿ ಸಿಗುತ್ತದೆ. ಬಸ್ ಟಿಕೆಟ್ (Bus Ticket) ಕಡಿಮೆ ಇರುತ್ತದೆ, ಪ್ರವಾಸಕ್ಕೆ ಹೋಗುವಾಗ ರೈಲ್ವೆ ಟಿಕೆಟ್ ಕಡಿಮೆ ಇರುತ್ತದೆ, ನಿವೃತ್ತಿ ಬಳಿಕ ಪೆನ್ಶನ್ ಪಡೆಯಲು ಹಿರಿಯ ನಾಗರೀಕರು ಎಂದು ತೋರಿಸುವುದಕ್ಕೆ ಈ ಕಾರ್ಡ್ ಬೇಕಾಗುತ್ತದೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಮೊತ್ತ ಕಡಿಮೆ ಆಗುತ್ತದೆ, ಬ್ಯಾಂಕ್ ಡೆಪಾಸಿಟ್ ಗಳಲ್ಲಿ (Bank Deposit) ಬಡ್ಡಿ ಜಾಸ್ತಿ ಸಿಗುತ್ತದೆ. ಒಂದು ಸೀನಿಯರ್ ಸಿಟಿಜನ್ ಕಾರ್ಡ್ ಇಂದ ಇಷ್ಟೆಲ್ಲಾ ಉಪಯೋಗಳು ಸಿಗುತ್ತದೆ.

ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ, ನಿಮ್ಮ ಅಕೌಂಟ್ ಗೆ ಬಂದಿದ್ಯಾ? ಈ ರೀತಿ ಚೆಕ್ ಮಾಡಿಕೊಳ್ಳಿ

ಆಸ್ಪತ್ರೆ ಸೌಲಭ್ಯ

ಸರ್ಕಾರದಿಂದ ಸಿಗುವ ಸೀನಿಯರ್ ಸಿಟಿಜನ್ ಕಾರ್ಡ್ ಇದ್ದರೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಿರಿಯ ನಾಗರೀಕರಿಗೆ ಉಚಿತವಾಗಿ ಚಿಕಿತ್ಸೆ ಸಿಗುತ್ತದೆ, ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಬಿಲ್ ಮೇಲೆ ವಿನಾಯಿತಿ ಸಿಗುತ್ತದೆ. ಅಷ್ಟೇ ಅಲ್ಲದೇ ಸರ್ಕಾರದ ಹಲವು ಯೋಜನೆಗಳ ಸೌಲಭ್ಯಗಳನ್ನು ಪಡೆಯಬಹುದು.

ಇಷ್ಟೆಲ್ಲಾ ಸೇವೆಗಳು ಸೀನಿಯರ್ ಸಿಟಿಜನ್ ಕಾರ್ಡ್ ಇಂದ ಸಿಗುತ್ತದೆ. ಒಂದು ಜಿಲ್ಲೆಯಲ್ಲಿ ಪ್ರತಿ ವರ್ಷ ಸುಮಾರು 600 ಜನರು ಸೀನಿಯರ್ ಸಿಟಿಜನ್ ಕಾರ್ಡ್ ಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ.

Portal to make senior citizens card again started