ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ದಿನಾಂಕ ಫಿಕ್ಸ್! ಕೊನೆಗೂ ಸರ್ಕಾರದಿಂದ ಸಿಕ್ಕಿದೆ ಗುಡ್ ನ್ಯೂಸ್
ಈಗಾಗಲೇ ಅರ್ಜಿ ಸಲ್ಲಿಸಿರುವವರಿಗೆ ಶೀಘ್ರದಲ್ಲೇ ರೇಷನ್ ಕಾರ್ಡ್ ವಿತರಣೆ ಮಾಡಲಿದ್ದು, ಜೂನ್ 21ರಿಂದ ಅಥವಾ ಜೂನ್ ತಿಂಗಳು ಮುಗಿಯುವುದರ ಒಳಗೆ ಮತ್ತೊಮ್ಮೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಸಿಗುತ್ತಿದೆ
New Ration Card : ಈಗ ನಮ್ಮ ರಾಜ್ಯದ ಜನರಿಗೆ ಅತ್ಯಂತ ಮುಖ್ಯವಾಗಿ ಬೇಕಾಗಿರುವ ದಾಖಲೆ ರೇಷನ್ ಕಾರ್ಡ್ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಸರ್ಕಾರದಿಂದ ಜಾರಿಗೆ ಬಂದಿರುವ ಗ್ಯಾರೆಂಟಿ ಯೋಜನೆಗಳ ಸೌಲಭ್ಯ ಪಡೆಯಬೇಕು ಎಂದರೆ, ಅಥವಾ ಸರ್ಕಾರಕ್ಕೆ ಸಂಬಂಧಿಸಿದ ಇನ್ಯಾವುದೇ ವಿಶೇಷವನ್ನು ಪಡೆಯಬೇಕು ಎಂದರೆ ಅದಕ್ಕಾಗಿ ನಿಮ್ಮ ಬಳಿ ರೇಷನ್ ಕಾರ್ಡ್ (Ration Card) ಇರಲೇಬೇಕು.
ಆದರೆ ಸರ್ಕಾರದ ಸೌಲಭ್ಯ ಪಡೆಯಲು ಹಲವರ ಬಳಿ ರೇಷನ್ ಕಾರ್ಡ್ ಇಲ್ಲ. ಇದೀಗ ಅಂಥ ಜನರಿಗೆ ಸಿಹಿ ಸುದ್ದಿ ಸಿಕ್ಕಿದೆ.
ಇನ್ಮುಂದೆ 200 ಯೂನಿಟ್ ಗಿಂತ ಜಾಸ್ತಿ ವಿದ್ಯುತ್ ಬಳಕೆ ಮಾಡಿದ್ರೆ ಸಿಗೋಲ್ಲ ಗೃಹಜ್ಯೋತಿ ಯೋಜನೆ ಸೌಲಭ್ಯ!
ಜನರು ಸರ್ಕಾರದಿಂದ ಉಚಿತ ಪಡಿತರ ಪಡೆಯಲು, ಉಚಿತವಾಗಿ ಆರೋಗ್ಯ ಸೇವೆ ಪಡೆಯಲು, ಬ್ಯಾಂಕ್ ಕೆಲಸಗಳನ್ನು ಮಾಡಿಸಿಕೊಳ್ಳಲು ಇದೆಲ್ಲದಕ್ಕೂ ರೇಷನ್ ಕಾರ್ಡ್ ಮುಖ್ಯವಾಗಿ ಬೇಕಾದ ದಾಖಲೆ ಆಗಿದೆ.
ಹಾಗಾಗಿ ಎಲ್ಲರೂ ರೇಷನ್ ಕಾರ್ಡ್ ಹೊಂದಲು ಬಯಸುತ್ತಿದ್ದಾರೆ. ಕೆಲವು ಜನರ ಬಳಿ ಇನ್ನು ಕೂಡ ರೇಷನ್ ಕಾರ್ಡ್ ಇಲ್ಲ. ಅಂಥವರು ಸರ್ಕಾರ ಯಾವಾಗ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಕೊಡುತ್ತದೆ ಎಂದು ಕಾಯುತ್ತಿದ್ದಾರೆ. ಇದೀಗ ಆ ಸಮಯ ಕೊನೆಗೂ ಬಂದಿದ್ದು, ಜನರು ಅರ್ಜಿ ಸಲ್ಲಿಸಬಹುದು.
ಹೊಸ ರೇಷನ್ ಕಾರ್ಡ್ ಗೆ ಅರ್ಜಿ
ಕಳೆದ ವರ್ಷ ವಿಧಾನಸಭಾ ಚುನಾವಣೆ ನಡೆಯುವುದಕ್ಕಿಂತ ಮೊದಲೇ ಸುಮಾರು 2 ಲಕ್ಷ ಜನರು ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿದ್ದರು ಆದರೆ ಎಲೆಕ್ಷನ್ ಕಾರಣ ಯಾರಿಗೂ ಕೂಡ ಹೊಸ ರೇಷನ್ ಕಾರ್ಡ್ ವಿತರಣೆ ಆಗಿರಲಿಲ್ಲ.
ಇದೀಗ ಸರ್ಕಾರದಿಂದ ಸಿಕ್ಕಿರುವ ಮಾಹಿತಿಯ ಪ್ರಕಾರ, ಈಗಾಗಲೇ ಅರ್ಜಿ ಸಲ್ಲಿಸಿರುವವರಿಗೆ ಶೀಘ್ರದಲ್ಲೇ ರೇಷನ್ ಕಾರ್ಡ್ ವಿತರಣೆ ಮಾಡಲಿದ್ದು, ಜೂನ್ 21ರಿಂದ ಅಥವಾ ಜೂನ್ ತಿಂಗಳು ಮುಗಿಯುವುದರ ಒಳಗೆ ಮತ್ತೊಮ್ಮೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಸಿಗುತ್ತದೆ ಎಂದು ಹೇಳಲಾಗುತ್ತಿದೆ.
ಫ್ರೀ ಬಸ್ ಯೋಜನೆ! ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಇನ್ಮುಂದೆ ಹೊಸ ರೂಲ್ಸ್
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
ಇದು ಜನರಿಗೆ ಗುಡ್ ನ್ಯೂಸ್ ಆಗಿದ್ದು, ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳನ್ನು ರೆಡಿ ಮಾಡಿ ಇಟ್ಟುಕೊಂಡರೆ, ಸರ್ಕಾರದಿಂದ ಅಧಿಕೃತ ಮಾಹಿತಿ ಬಂದ ತಕ್ಷಣವೇ ಅರ್ಜಿ ಸಲ್ಲಿಸಬಹುದು. ಹಾಗಿದ್ದಲ್ಲಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಏನೆಲ್ಲಾ ದಾಖಲೆಗಳು (Documents) ಬೇಕು ಎಂದರೆ…
*ಕ್ಯಾಸ್ಟ್ ಸರ್ಟಿಫಿಕೇಟ್ (Cast Certificate)
*ಇನ್ಕಮ್ ಸರ್ಟಿಫಿಕೇಟ್ (Income Certificate)
*ಆಧಾರ್ ಕಾರ್ಡ್ (Aadhaar Card)
*ಪಾಸ್ ಪೋರ್ಟ್ ಸೈಜ್ ಫೋಟೋ
*6 ವರ್ಷದ ಒಳಗಿನ ಮಕ್ಕಳಿಗೆ ಬರ್ತ್ ಸರ್ಟಿಫಿಕೇಟ್
*ಫೋನ್ ನಂಬರ್ (Mobile Number)
ಹಿರಿಯ ನಾಗರಿಕರ ಕಾರ್ಡ್ ಮಾಡಿಸಲು ಪೋರ್ಟಲ್ ಮತ್ತೆ ಪ್ರಾರಂಭ! ಸಿಗಲಿದೆ ಇನ್ನಷ್ಟು ಬೆನಿಫಿಟ್
ಎಲ್ಲಿ ಅರ್ಜಿ ಸಲ್ಲಿಸಬಹುದು:
ಒಂದು ವೇಳೆ ನೀವು ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಹಾಗಿದ್ದರೆ, ಈ ಕೆಳಗೆ ಸೂಚಿಸುವ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
*ಗ್ರಾಮ ಒನ್ ಕೇಂದ್ರ
*ಬೆಂಗಳೂರು ಒನ್ ಕೇಂದ್ರ
*ಕರ್ನಾಟಕ ಒನ್ ಕೇಂದ್ರ
ಇದಿಷ್ಟು ಕೇಂದ್ರಗಳಿಗೆ ಭೇಟಿ ನೀಡಿ, ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.
Date fixed for new ration card application, Update on Applying New Ration Card
English Summary : ration card will be distributed soon to those who have already applied, and opportunity to apply for a new ration card again from June 21 or before the end of June.