ಉಚಿತ ವಿದ್ಯುತ್! ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಗೃಹಜ್ಯೋತಿ ಯೋಜನೆಯ ಹೊಸ ರೂಲ್ಸ್
ಇದೀಗ ಸರ್ಕಾರವು ಗೃಹಜ್ಯೋತಿ ಯೋಜನೆಯಲ್ಲಿ (Gruha Jyothi Scheme) ಹೊಸ ಬದಲಾವಣೆ ತಂದಿದೆ. ಈ ಯೋಜನೆಯ ಮೂಲಕ ರಾಜ್ಯದ ಕೋಟ್ಯಾಂತರ ಜನರಿಗೆ ಉಚಿತ ವಿದ್ಯುತ್ ಸಿಗುತ್ತಿದೆ.
ರಾಜ್ಯದ ಜನರು ಉಚಿತವಾಗಿ ವಿದ್ಯುತ್ ಬಳಕೆ ಮಾಡಲಿ, ವಿದ್ಯುತ್ ಬಿಲ್ (Electricity Bill) ಕಟ್ಟುವ ಹೊರೆ ಅವರ ಮೇಲೆ ಬೀಳಬಾರದು ಎಂದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದಿತು.
ಈ ಯೋಜನೆಯ ಮೂಲಕ ರಾಜ್ಯದ ಕೋಟ್ಯಾಂತರ ಜನರಿಗೆ ಉಚಿತ ವಿದ್ಯುತ್ ಸಿಗುತ್ತಿದೆ, ಜೊತೆಗೆ ಪ್ರತಿ ತಿಂಗಳು ಜೀರೋ ಬಿಲ್ ಪಡೆಯುತ್ತಿದ್ದಾರೆ. ಆದರೆ ಇದೀಗ ಸರ್ಕಾರವು ಗೃಹಜ್ಯೋತಿ ಯೋಜನೆಯಲ್ಲಿ (Gruha Jyothi Scheme) ಹೊಸ ಬದಲಾವಣೆ ತಂದಿದೆ..
ಗೃಹಜ್ಯೋತಿ ಯೋಜನೆಯನ್ನು ರಾಜ್ಯದಲ್ಲಿ ಬಹುತೇಕ ಎಲ್ಲಾ ಮನೆಗಳಿಗೂ ಸೌಲಭ್ಯ ನೀಡಲಾಗುತ್ತಿದೆ. ನಮಗೆಲ್ಲ ಗೊತ್ತಿರುವ ಹಾಗೆ ಮೊದಲಿಗೆ ಸರ್ಕಾರ ಹೇಳಿದ್ದು ಪ್ರತಿ ಮನೆಗೆ ಉಚಿತವಾಗಿ 200 ಯೂನಿಟ್ ವರೆಗು ವಿದ್ಯುತ್ ಕೊಡಲಾಗುತ್ತದೆ ಎಂದು, ಆದರೆ ಪ್ರತಿ ಮನೆಗೂ ಉಚಿತ 200 ಯೂನಿಟ್ ವಿದ್ಯುತ್ ಸಿಗುತ್ತಿಲ್ಲ.
ಫ್ರೀ ಬಸ್ ಗೆ ಹತ್ತುವ ಮುನ್ನ ಈ ವಿಚಾರಕ್ಕೆ ಗಮನಕೊಡಿ! ಶಕ್ತಿಯೋಜನೆಯಲ್ಲಿ ಹೊಸ ನಿಯಮ ಜಾರಿ
ಆ ಮನೆಯಲ್ಲಿ ಕಳೆದ 12 ತಿಂಗಳುಗಳಿಂದ ಎಷ್ಟು ಯೂನಿಟ್ ಬಳಕೆ ಆಗುತ್ತಿದೆ ಎನ್ನುವುದನ್ನು ಲೆಕ್ಕ ಹಾಕಿ, ಅದರ ಸರಾಸರಿಯನ್ನು ಪಡೆದು ಅಷ್ಟು ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ.
ಅದರ ಜೊತೆಗೆ 10% ಹೆಚ್ಚು ವಿದ್ಯುತ್ ಅನ್ನು ಉಚಿತವಾಗಿ ಕೊಡಲಾಗುತ್ತದೆ. ಅಷ್ಟು ವಿದ್ಯುತ್ ಅನ್ನು ಮಾತ್ರ ಉಚಿತವಾಗಿ ಬಳಸಬಹುದು ಅಂಥವರಿಗೆ ಮಾತ್ರ ಜೀರೋ ಬಿಲ್ ಕೂಡ ಬರುತ್ತಿದೆ.
ಆದರೆ ಸರ್ಕಾರ ನೀಡಿರುವ ಸರಾಸರಿ ಲಿಮಿಟ್ ಮೀರಿ ವಿದ್ಯುತ್ ಬಳಕೆ ಮಾಡಿದರೆ, ಅಂಥವರಿಗೆ ಪ್ರತಿ ತಿಂಗಳು ಬಿಲ್ ಬರುತ್ತದೆ. ಅವರು ಹೆಚ್ಚುವರಿ ವಿದ್ಯುತ್ ಬಳಕೆಗೆ ಬಿಲ್ ಪಾವತಿ ಮಾಡಬೇಕಾಗುತ್ತದೆ. ಆದರೆ ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದ ಹಾಗೆ ಸರ್ಕಾರ ಒಂದು ಹೊಸ ನಿಯಮವನ್ನು ಜಾರಿಗೆ ತಂದಿದೆ.
ಯುವನಿಧಿ ಯೋಜನೆಯ ₹3000 ಹಣ ಪಡೆಯೋಕೆ ಬಂತು ಹೊಸ ಅಪ್ಡೇಟ್! ಈ ಸಲಹೆ ತಪ್ಪದೆ ಪಾಲಿಸಿ
ಹೊಸ ಬಾಡಿಗೆದಾರರಿಗೆ ಗುಡ್ ನ್ಯೂಸ್!
ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದ ಹಾಗೆ ಇದೀಗ ಮತ್ತೊಂದು ನಿಯಮವನ್ನು ಸರ್ಕಾರ ಜಾರಿಗೆ ತಂದಿದ್ದು, ಬಾಡಿಗೆ ಮನೆಗೆ (Rent House) ಹೊಸದಾಗಿ ಬರುವಂಥ ಜನರಿಗಾಗಿ ಈ ನಿಯಮವನ್ನು ಜಾರಿಗೆ ತರಲಾಗಿದೆ.
ಒಂದು ವೇಳೆ ನೀವು ಹೊಸದಾಗಿ ಬಾಡಿಗೆ ಮನೆಗೆ ಹೋಗುವವರಾಗಿದ್ದರೆ ನಿಮಗೆ ಪ್ರತಿ ತಿಂಗಳು 53 ಯೂನಿಟ್ ವಿದ್ಯುತ್ ಉಚಿತವಾಗಿ (Free Electricity) ಸಿಗುತ್ತದೆ. ಅದರ ಜೊತೆಗೆ 10% ವಿದ್ಯುತ್ ಅನ್ನು ಹೆಚ್ಚುವರಿಯಾಗಿ ಬಳಕೆ ಮಾಡಬಹುದು.
ರೈತರ ಜಮೀನಿನಲ್ಲಿ ಕರೆಂಟ್ ಕಂಬ ಇದ್ರೆ ಹಣ ಸಿಗುತ್ತಾ! ಯೋಜನೆ ಬಗ್ಗೆ ಸರ್ಕಾರ ಕೊಟ್ಟ ಸ್ಪಷ್ಟನೆ
ಇದು ಸರ್ಕಾರ ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ಜಾರಿಗೆ ತಂದಿರುವ ಹೊಸ ನಿಯಮ ಆಗಿದೆ. ಈ ಕಾರಣಕ್ಕೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ, ಹೊಸದಾಗಿ ಬಾಡಿಗೆ ಮನೆಗೆ ಹೋಗುವ ಎಲ್ಲರಿಗೂ ಇದೊಂದು ಗುಡ್ ನ್ಯೂಸ್ ಆಗಿದೆ.
ಆದರೆ ಈಗ ಬಹಳಷ್ಟು ಜನರು ತಮ್ಮ ಮನೆಗಳಲ್ಲಿ ವಿದ್ಯುತ್ ಇಂದ ಚಲಿಸುವ ಹಲವು ಉಪಕರಣಗಳನ್ನು ಬಳಸುತ್ತಿದ್ದಾರೆ. ಫ್ಯಾನ್, ಕೂಲರ್ ,ಫ್ರಿಜ್ ಇದೆಲ್ಲವೂ ಇದೆ. ಇವುಗಳ ಬಳಕೆ ಮಾಡುವವರಿಗೆ, 200 ಯೂನಿಟ್ ವಿದ್ಯುತ್ ಅನ್ನು ಕೂಡ ದಾಟಿ, ಪೂರ್ತಿ ಮೊತ್ತವನ್ನು ಕಟ್ಟಬೇಕಾಗಿ ಬರಬಹುದು. ಹಾಗಾಗಿ ಹುಷಾರಾಗಿರಿ.
No more free electricity, Changes in Gruha Jyothi scheme rules