ಯುವನಿಧಿ ಯೋಜನೆಯ ₹3000 ಹಣ ಪಡೆಯೋಕೆ ಬಂತು ಹೊಸ ಅಪ್ಡೇಟ್! ಈ ಸಲಹೆ ತಪ್ಪದೆ ಪಾಲಿಸಿ
ಬಹಳ ದಿನಗಳಿಂದ ಕಾಯುತ್ತಿದ್ದ ಯುವನಿಧಿ ಯೋಜನೆ ಬಗ್ಗೆ ಇದೀಗ ಹೊಸ ಅಪ್ಡೇಟ್ ಬಂದಿದೆ. ಸರ್ಕಾರ ಯೋಜನೆಗೆ ಸಂಬಂಧಿಸಿದಂತೆ ಹೊಸ ಮಾಹಿತಿ ಹಂಚಿಕೊಂಡಿದೆ.
Yuva Nidhi scheme : ರಾಜ್ಯ ಸರ್ಕಾರದ ಎಲ್ಲಾ ಗ್ಯಾರಂಟಿ ಯೋಜನೆಗಳು ಈಗಾಗಲೇ ಜನ ಸಾಮಾನ್ಯರಿಗೆ ತಲುಪುತ್ತಿವೆ, ಅದರ ಬೆನ್ನಲ್ಲೇ ಬಹಳ ದಿನಗಳಿಂದ ಕಾಯುತ್ತಿದ್ದ ಯುವನಿಧಿ ಯೋಜನೆ ಬಗ್ಗೆ ಇದೀಗ ಹೊಸ ಅಪ್ಡೇಟ್ ಬಂದಿದೆ.
ಹೌದು, ವಿದ್ಯಾರ್ಥಿಗಳು (Students) ಈ ಯೋಜನೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ, ಯುವನಿಧಿ ಯೋಜನೆಗೆ ಸರ್ಕಾರ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಇದೀಗ ಈ ಯೋಜನೆಗೆ ಸಂಬಂಧಿಸಿದಂತೆ ಹೊಸ ಮಾಹಿತಿ ಹಂಚಿಕೊಂಡಿದೆ.
ಫ್ರೀ ಬಸ್ ಗೆ ಹತ್ತುವ ಮುನ್ನ ಈ ವಿಚಾರಕ್ಕೆ ಗಮನಕೊಡಿ! ಶಕ್ತಿಯೋಜನೆಯಲ್ಲಿ ಹೊಸ ನಿಯಮ ಜಾರಿ
ಹೌದು ಯುವನಿಧಿ ಪ್ರಮುಖವಾಗಿ ಯುವಕರನ್ನು ಅದರಲ್ಲೂ ಡಿಗ್ರಿ ಮುಗಿಸಿ ಕೆಲಸವಿರದೆ ಸಂಕಷ್ಟದಲ್ಲಿರುವ ನಿರುದ್ಯೋಗಿಗಳಿಗಾಗಿ ಮಾಡಿರುವ ಉಚಿತ ಯೋಜನೆಯಾಗಿದೆ. ಇದರಲ್ಲಿ ಪದವಿ (Degree) ಮುಗಿಸಿದವರಿಗೆ 3000 ರೂ ಹಾಗು ಡಿಪ್ಲೊಮಾ (Diploma) ಮುಗಿಸಿದವರಿಗೆ 1500 ರೂ ಸಿಗಲಿದೆ .
ಬೇಸರದ ಸಂಗತಿ ಏನೆಂದರೆ ಬಾಕಿ ಎಲ್ಲಾ ಗ್ಯಾರಂಟಿ ಯೋಜನೆಗಳು ಬೇಗನೆ ಪ್ರಾರಂಭವಾದರೂ ಸಹ ಯುವನಿಧಿ ಯೋಜನೆ ಸ್ವಲ್ಪ ಸಮಯ ತಗೆದು ಕೊಂಡಿತ್ತು, ಇದೀಗ ಯುವನಿಧಿ ಯೋಜನೆಯ ರೂಪುರೇಷೆ ಚುರುಕುಗೊಂಡಿದೆ.
ಅನ್ನಭಾಗ್ಯ ಯೋಜನೆ ಹಣ 3 ತಿಂಗಳಿಂದ ಬಾರದವರಿಗೆ ಮಹತ್ವದ ಸೂಚನೆ! ಈ ಕೆಲಸ ಮಾಡಿ
ಸದ್ಯಕ್ಕೆ ಕೊಡುಗು ಜಿಲ್ಲೆಯಿಂದ ಅರ್ಜಿ ಹಾಕಿರುವ ಎಲ್ಲಾ ವಿದ್ಯಾರ್ಥಿಗಳು ತಮ್ಮ ಮೂಲ ಅಂಕಪತ್ರ ಆಧಾರ್ ಕಾರ್ಡ್ (Aadhaar Card) ಸೇರಿದಂತೆ ಹಲವು ದಾಖಲೆ ಪತ್ರಗಳನ್ನು ಕೂಡಲೇ ವೆರಿಫಿಕೇಶನ್ ಗೆ ಸಲ್ಲಿಸಬೇಕು. ಈ ವೆರಿಪಿಕೇಶನ್ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನಡೆಯಲಿದೆ.
ಇನ್ನು ಈ ತಿಂಗಳ 25ನೇ ತಾರೀಕಿನ ಒಳಗೆ ತಾವು ಯಾವುದೇ ಸಂಸ್ಥೆಯಲ್ಲಿ ಉದ್ಯೋಗ ಹೊಂದಿಲ್ಲವೆಂದು ಧೃಡಿಕರಣ ಕೂಡ ನೀಡಬೇಕಾಗುತ್ತದೆ. ಹೀಗಾಗಿ ಈ ಎಲ್ಲಾ ಕೆಲಸಗಳನ್ನು ತಪ್ಪದೇ ವಿದ್ಯಾರ್ಥಿಗಳು ಮಾಡಬೇಕು ಎಂದು ಪ್ರಕಟಣೆಯಲ್ಲಿ ಅಧಿಕಾರಿಗಳು ಸೂಚಿಸಿದ್ದಾರೆ.
ರೈತರ ಜಮೀನಿನಲ್ಲಿ ಕರೆಂಟ್ ಕಂಬ ಇದ್ರೆ ಹಣ ಸಿಗುತ್ತಾ! ಯೋಜನೆ ಬಗ್ಗೆ ಸರ್ಕಾರ ಕೊಟ್ಟ ಸ್ಪಷ್ಟನೆ
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 18005999918 ಸಂಖ್ಯೆಗೆ ಕರೆ ಮಾಡಿ ಎಂದು ಜಿಲ್ಲಾ ಉದ್ಯೋಗಧಿಕಾರಿ ತಿಳಿಸಿದ್ದಾರೆ . ಸರ್ಕಾರ ಹೇಳಿದಂತೆ ಈ ಯೋಜನೆಯಲ್ಲಿ ಪ್ರತಿ ತಿಂಗಳು ವಿದ್ಯಾರ್ಥಿಗಳಿಗೆ 3000 ರೂ ಹಣ ಸಿಗಲಿದೆ. ಸದ್ಯ ಹಲವಾರು ಟೀಕೆಗಳು ಬಂದ ಕಾರಣ ಯುವನಿಧಿ ಯೋಜನೆಯನ್ನು ಇನ್ನಷ್ಟು ವೇಗದಲ್ಲಿ ಚುರುಕು ಮಾಡುವ ಸಾಧ್ಯತೆ ಇದೆ.
A new update from the government about the Karnataka Yuva Nidhi scheme