Kannada News Bangalore News

ಕೃಷಿ ನೆಲದಲ್ಲಿ ಉಚಿತ ಬೋರ್ ವೆಲ್ ಸೌಲಭ್ಯ! ರೈತರ ನೀರಿನ ಸಮಸ್ಯೆ ನೀಗಿಸಲು ಹೊಸ ಯೋಜನೆ

Rs 4.25 lakh subsidy for drilling borewell in your agricultural land
Story Highlights

ಈ ಯೋಜನೆಯ ಮೂಲಕ ರೈತರಿಗೆ ತಮ್ಮ ಭೂಮಿಯಲ್ಲಿ ಪಂಪ್ ಸೆಟ್ (Pumpset) ಹಾಕಿಸಲು ಅಥವಾ ಬೋರ್ ವೆಲ್ (Borewell) ಕೊರೆಸಲು ಸಹಾಯ ನೀಡಲಾಗುತ್ತದೆ.

ರೈತರು ವ್ಯವಸಾಯ ಮಾಡುವುದಕ್ಕೆ ಆಗುವ ಪ್ರಮುಖ ತೊಂದರೆ ನೀರಾವರಿ ಸಮಸ್ಯೆ ಆಗಿದೆ. ಈ ಸಮಸ್ಯೆಯನ್ನು ಸರಿಪಡಿಸಲು ರಾಜ್ಯ ಸರ್ಕಾರವು ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯ ಮೂಲಕ ರೈತರಿಗೆ ತಮ್ಮ ಭೂಮಿಯಲ್ಲಿ ಪಂಪ್ ಸೆಟ್ (Pumpset) ಹಾಕಿಸಲು ಅಥವಾ ಬೋರ್ ವೆಲ್ (Borewell) ಕೊರೆಸಲು ಸಹಾಯ ನೀಡಲಾಗುತ್ತದೆ.

ಬೋರ್ವೆಲ್ ಮತ್ತು ಪಂಪ್ ಸೆಟ್ ಅಳವಡಿಸಲು 1.50 ಲಕ್ಷದಿಂದ 3 ಲಕ್ಷದವರೆಗು ಸರ್ಕಾರ ಸಹಾಯಧನ ನೀಡುತ್ತದೆ. ಹಾಗೆಯೇ ಕೃಷಿ ನೆಲ ವಿದ್ಯುದೀಕರಣ ಮಾಡಲು ₹50,000 ವರೆಗು ಸಹಾಯ ಸಿಗುತ್ತದೆ.

ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಈ ಎಲ್ಲಾ ಜಿಲ್ಲೆಯ ರೈತರು ಗಂಗಾ ಕಲ್ಯಾಣ ಯೋಜನೆಯ ಮೂಲಕ 3.5 ಲಕ್ಷದವರೆಗು ಸಾಲ (Loan) ಪಡೆಯಬಹುದು.

ಬೇರೆ ಜಿಲ್ಲೆಯ ರೈತರಿಗೆ 2 ಲಕ್ಷದವರೆಗು Loan ಸಿಗುತ್ತದೆ. ಕೃಷಿ ಭೂಮಿಯಲ್ಲಿ (Agriculture Land) ಬಾವಿ ತೆಗೆಸಬೇಕು ಎಂದು ರೈತರು ಎಲ್ಲಿಗೂ ಹೋಗುವ ಅಗತ್ಯವಿಲ್ಲ, ಈ ಯೋಜನೆಗೆ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು. ರೈತರ (Farmer) ಸಮಸ್ಯೆಗಳು ದೂರವಾಗಲಿ ಎಂದು ಜಾರಿಗೆ ತಂದಿರುವ ಈ ಯೋಜನೆಗೆ ಬೇಕಿರುವ ಅರ್ಹತೆಗಳೇನು? ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ? ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ..

ಆಧಾರ್ ಜೊತೆಗೆ ಇನ್ನು ರೇಷನ್ ಕಾರ್ಡ್ ಲಿಂಕ್ ಮಾಡಿಲ್ವಾ? ಅದಕ್ಕೂ ಮುನ್ನ ಬಂತು ಬಿಗ್ ಅಪ್ಡೇಟ್

ಯೋಜನೆಯ ವಿಶೇಷತೆ:

*ಗಂಗಾ ಕಲ್ಯಾಣ ಯೋಜನೆಯನ್ನು, ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಾರಿಗೆ ತಂದಿದೆ.
*ರೈತರು ಈ ಯೋಜನೆಯಲ್ಲಿ ಕೊಳವೆ ಬಾವಿ ತೆರೆಯಬಹುದು ಅಥವಾ ತೆರೆದ ಬಾವಿಯನ್ನು ತೋಡಿಸಬಹುದು, ಪಂಪ್ ಸೆಟ್ ಅಳವಡಿಸಬಹುದು. ಇದರಿಂದ ನೀರಾವರಿ ಸೌಲಭ್ಯ ಸಿಗುತ್ತದೆ.
*ಬೋರ್ ವೆಲ್ ಕೊರೆಸಲು 1.5 ಇಂದ 3 ಲಕ್ಷದವರೆಗು ಸಾಲ ಸೌಲಭ್ಯ ಪಡೆಯಬಹುದು. ಬೋರ್ ವೆಲ್, ಪಂಪ್ ಸೆಟ್ ಗೆ ವಿದ್ಯುತ್ ಪೂರೈಕೆ ಮಾಡುವುದಕ್ಕೆ 50,000 ವರೆಗು ಸಾಲ ಸಿಗುತ್ತದೆ.
*ಹತ್ತಿರ ಇರುವ ನದಿಗಳ ಮೂಲಕ ನೀರಿನ ಪೈಪ್ ಲೈನ್ ಎಳೆದು, ಈ ಸೌಲಭ್ಯವನ್ನು ರೈತರಿಗೆ ಒದಗಿಸಿಕೊಡಲಾಗುತ್ತದೆ.
*8 ಎಕರೆ ಭೂಮಿ ಇದ್ದರೆ, 4 ಲಕ್ಷದವರೆಗೂ, 15 ಎಕರೆ ಇದ್ದರೆ 6 ಲಕ್ಷದವರೆಗು ಹಣ ಸಿಗುತ್ತದೆ.
*ಈ ಯೋಜನೆಯ ಪೂರ್ತಿ ಹಣ ಸಬ್ಸಿಡಿ ಆಗಿರಲಿದೆ
*ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರುವ ಸಣ್ಣ ಮತ್ತು ಅತಿಸಣ್ಣ ರೈತರು ಈ ಯೋಜನೆಯ ಸೌಲಭ್ಯ ಪಡೆಯಬಹುದು.
*ಬೋರ್ ವೆಲ್ ನಿರ್ಮಾಣಕ್ಕೆ 1.5 ಲಕ್ಷದವರೆಗೂ ಸಾಲ ಸಿಗುತ್ತದೆ.

ಉಚಿತ ವಿದ್ಯುತ್! ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಗೃಹಜ್ಯೋತಿ ಯೋಜನೆಯ ಹೊಸ ರೂಲ್ಸ್

ಗಂಗಾ ಕಲ್ಯಾಣ ಯೋಜನೆಯ ಅರ್ಹತೆಗಳು:

*ರೈತರು ಅಲ್ಪ ಸಂಖ್ಯಾತ ಸಮುದಾಯದವರಾಗಿರಬೇಕು
*ನಮ್ಮ ರಾಜ್ಯದಲ್ಲಿ ವಾಸ ಮಾಡುವವರೇ ಆಗಿರಬೇಕು
*ಸಣ್ಣ ಮತ್ತು ಅತೀಸಣ್ಣ ರೈತರು ಮಾತ್ರ ಅರ್ಜಿ ಸಲ್ಲಿಸಬಹುದು
*ಹಳ್ಳಿಯ ರೈತರ ವಾರ್ಷಿಕ ಆದಾಯ 96 ಸಾವಿರಕ್ಕಿಂತ ಕಡಿಮೆ ಇರಬೇಕು, ಸಿಟಿ ರೈತರ ವಾರ್ಷಿಕ ಆದಾಯ 1.03 ಲಕ್ಷಕ್ಕಿಂತ ಕಡಿಮೆ ಇರಬೇಕು.
*18 ರಿಂದ 55 ವರ್ಷಗಳ ಒಳಗೆ ಇರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

Free Borewell Schemeಅಗತ್ಯವಿರುವ ದಾಖಲೆಗಳು:

*ಆಧಾರ್ ಕಾರ್ಡ್
*ಕ್ಯಾಸ್ಟ್ ಸರ್ಟಿಫಿಕೇಟ್
*ಇನ್ಕಮ್ ಸರ್ಟಿಫಿಕೇಟ್
*ಯೋಜನೆಯ ವರದಿ
*ಬಿಪಿಎಲ್ ರೇಷನ್ ಕಾರ್ಡ್
*ಈಗಿನ RTC
*ಸಣ್ಣ ಮತ್ತು ಅತೀ ಸಣ್ಣ ರೈತರು ಎಂದು ತಿಳಿಸುವ ಸರ್ಟಿಫಿಕೇಟ್
*ಬ್ಯಾಂಕ್ ಪಾಸ್ ಬುಕ್
*ನಿಮ್ಮ ಭೂಮಿಗೆ ಕಂದಾಯ ಕಟ್ಟಿರುವ ರಿಸಿಪ್ಟ್
*ಸ್ವಯಂ ಘೋಷಣೆ ಪತ್ರ
*ಜಾಮೀನು ಕೊಡುವವರ ಸ್ವಯಂ ಘೋಷಣೆ ಪತ್ರ

ರೈತರ ಜಮೀನಿನಲ್ಲಿ ಕರೆಂಟ್ ಕಂಬ ಇದ್ರೆ ಹಣ ಸಿಗುತ್ತಾ! ಯೋಜನೆ ಬಗ್ಗೆ ಸರ್ಕಾರ ಕೊಟ್ಟ ಸ್ಪಷ್ಟನೆ

ಅರ್ಜಿ ಸಲ್ಲಿಕೆ ಪ್ರಕ್ರಿಯೆ

*ಮೊದಲು https://kmdc.karnataka.gov.in/english ಈ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಹೋಮ್ ಪೇಜ್ ನಲ್ಲಿ ಆನ್ಲೈನ್ ಅಪ್ಲಿಕೇಶನ್ ಬರುತ್ತದೆ.

*ಇಲ್ಲಿ ಗಂಗಾ ಕಲ್ಯಾಣ ಯೋಜನೆ ಹೆಸರನ್ನು ಕ್ಲಿಕ್ ಮಾಡಿದಾಗ ನಿಮ್ಮ ಎದುರಲ್ಲಿ ಅಪ್ಲಿಕೇಶನ್ ಫಾರ್ಮ್ ಬರುತ್ತದೆ.

*ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳುವ ಸಂಪೂರ್ಣ ಮಾಹಿತಿಯನ್ನು ಫಿಲ್ ಮಾಡಿ.

*ಬಳಿಕ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ, ಅಪ್ಲಿಕೇಶನ್ ಅನ್ನು ಸಬ್ಮಿಟ್ ಮಾಡಿ.

*ಈ ರೀತಿ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಪೋರ್ಟಲ್ ಲಾಗಿನ್:

*ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಮೊದಲಿಗೆ ನೀವು ಅಧಿಕೃತ ವೆಬ್ಸೈಟ್ ಗೆ ರಿಜಿಸ್ಟರ್ ಮಾಡಬೇಕು.

*ಸರ್ಕಾರದ ಅಧಿಕೃತ ವೆಬ್ಸೈಟ್ ಓಪನ್ ಆದ ಬಳಿಕ ಹೋಮ್ ಪೇಜ್ ನಲ್ಲಿ, ಸೈನ್ ಇನ್ ಎನ್ನುವ ಆಪ್ಶ ಕ್ಲಿಕ್ ಮಾಡಿ, ಈಗ ಲಾಗಿನ್ ಮಾಡುವ ಪೇಜ್ ಓಪನ್ ಆಗುತ್ತದೆ.

*ಇಲ್ಲಿ ನಿಮ್ಮ ಇಮೇಲ್ ಐಡಿ, ಪಾಸ್ ವರ್ಡ್ ಮತ್ತು ಕ್ಯಾಪ್ಚ ಕೋಡ್ ಇದೆಲ್ಲವನ್ನು ನಮೂದಿಸಿ..

*ನಂತರ ಸೈನ್ ಇನ್ ಆಪ್ಶನ್ ಕ್ಲಿಕ್ ಮಾಡಿ

*ಈ ಮೂಲಕ ಲಾಗಿನ್ ಗಾಗಿ ಐಡಿ ಪಾಸ್ವರ್ಡ್ ಪಡೆಯುತ್ತೀರಿ.

Free borewell facility for agricultural land, A new scheme for farmers