Bangalore NewsKarnataka News

ರೇಷನ್ ಕಾರ್ಡಿನಲ್ಲಿ ಹೊಸ ಸದಸ್ಯರ ಹೆಸರು ಸೇರಿಸಿಕೊಳ್ಳಲು ಅವಕಾಶ! ಆನ್‌ಲೈನ್‌ನಲ್ಲೇ ಮಾಡಿ

ನಮ್ಮ ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಹಾಯ ಆಗಲಿ ಎಂದು ರೇಷನ್ ಕಾರ್ಡ್ (Ration Card) ಸೌಲಭ್ಯವನ್ನು ಜಾರಿಗೆ ತರಲಾಗಿದೆ. ಬಡತನದ ರೇಖೆಗಿಂತ ಕೆಳಗೆ ಇರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ (BPL Ration Card), ಬಡತನದ ರೇಖೆಗಿಂತ ಮೇಲೆ ಇರುವವರಿಗೆ ಎಪಿಎಲ್ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ರೇಷನ್ ಕಾರ್ಡ್ ಹೊಂದಿರುವವರು ಸರ್ಕಾರದಿಂದ ಸಿಗುವ ಹಲವು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.

ಬಿಪಿಎಲ್ ರೇಶನ್ ಕಾರ್ಡ್ ಇದ್ದರೆ ಸರ್ಕಾರ ಆರ್ಥಿಕವಾಗಿ ಸಹಾಯ ಮಾಡುವ ಎಲ್ಲಾ ಸೌಲಭ್ಯಗಳನ್ನು ಪಡೆಯಬಹುದು. ಜೊತೆಗೆ ಉಚಿತ ರೇಷನ್ ಅನ್ನು (Free Ration) ಕೂಡ ಪಡೆಯಬಹುದು.

Include children's names in the ration card, Here is the direct link for easy method

ರೈತರಿಗೆ ವಿಶೇಷ ಸೌಲಭ್ಯ, ಯೋಜನೆಗಳು, ವಸತಿ ಇಲ್ಲದವರಿಗೆ ಯೋಜನೆಗಳು ಹೀಗೆ ಬಹಳಷ್ಟು ಲಾಭ ಪಡೆದುಕೊಳ್ಳಬಹುದು. ಕಷ್ಟದಲ್ಲಿರುವ ಜನರು ಊಟಕ್ಕೆ ಅಥವಾ ಇನ್ಯಾವುದೇ ಮೂಲಭೂತ ಸೌಕರ್ಯಗಳಿಗೆ ಕಷ್ಟಪಡಬಾರದು ಎನ್ನುವುದು ಸರ್ಕಾರದ ಉದ್ದೇಶ ಆಗಿದೆ.

ಗೃಹಲಕ್ಷ್ಮಿ ಹಣಕ್ಕೆ ಪೋಸ್ಟ್ ಆಫೀಸ್ ಅಕೌಂಟ್ ತೆರೆಯಿರಿ! ಹಣ ಬಾರದವರಿಗೆ ಒಟ್ಟಿಗೆ ಸಿಗಲಿದೆ ₹22,000

ರಾಜ್ಯ ಸರ್ಕಾರದ ಯೋಜನೆಯ ಲಾಭಗಳನ್ನು ಪಡೆಯುವುದಕ್ಕೆ ಕೂಡ ರೇಷನ್ ಕಾರ್ಡ್ ಅತ್ಯಗತ್ಯ. ನಮ್ಮ ದೇಶದ ಪ್ರಜೆಗಳಿಗೆ ಆಧಾರ್ ಕಾರ್ಡ್ (Aadhaar Card) ಎಷ್ಟು ಮುಖ್ಯವೋ ಅದೇ ರೀತಿ ಬಡತನದ ಕುಟುಂಬಗಳಿಗೆ ಬಿಪಿಎಲ್ ರೇಷನ್ ಕಾರ್ಡ್ ಅಷ್ಟೇ ಮುಖ್ಯ.

ರೇಷನ್ ಕಾರ್ಡ್ ಅನ್ನು ಹೊಸದಾಗಿ ಮಾಡಿಸಲು ಹಲವು ಜನರು ಕಾಯುತ್ತಿದ್ದಾರೆ ಆದರೆ ಅದಕ್ಕಾಗಿ ಇನ್ನು ಕೂಡ ಸರ್ಕಾರದಿಂದ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ಇನ್ನು ಹಲವರ ಸಮಸ್ಯೆ ಏನು ಎಂದರೆ, ರೇಷನ್ ಕಾರ್ಡ್ ಗೆ ಮನೆಯ ಹೊಸ ಸದಸ್ಯರ ಹೆಸರನ್ನು ಸೇರಿಸಬೇಕಾಗುತ್ತದೆ. ಮದುವೆಯಾಗಿ ಬಂದಿರುವವರು ಅಥವಾ ಜನಿಸಿದ ಮಗುವಿನ ಹೆಸರು ಇದನ್ನೆಲ್ಲ ಸೇರಿಸಬೇಕಾಗುತ್ತದೆ.

ಇದಕ್ಕಾಗಿ ಸರ್ಕಾರವು ಈಗ ಆನ್ಲೈನ್ ಮೂಲಕ ರೇಷನ್ ಕಾರ್ಡ್ ಗೆ ಹೊಸ ಹೆಸರನ್ನು ಸೇರಿಸುವುದಕ್ಕೆ ಅವಕಾಶ ನೀಡಿದ್ದು, ಈ ಕೆಲಸವನ್ನು ಮಾಡುವುದು ಹೇಗೆ ಎಂದು ತಿಳಿಯೋಣ..

ರೇಷನ್ ಪಡೆಯೋಕೆ ಹೊಸ ರೂಲ್ಸ್, ಇನ್ಮುಂದೆ ಕಣ್ಣಿನ ಐರಿಸ್ ಸ್ಕ್ಯಾನ್ ಮಾಡಿ ನೀಡಲಾಗುತ್ತೆ ರೇಷನ್!

Ration Cardಹೊಸ ಸದಸ್ಯರ ಹೆಸರು ಸೇರಿಸುವ ಪ್ರಕ್ರಿಯೆ:

*ರಾಜ್ಯ ಸರ್ಕಾರದ ಆಹಾರ ಇಲಾಖೆಯ ವೆಬ್ಸೈಟ್ ಗೆ ಮೊದಲು ಭೇಟಿ ನೀಡಿ

*ಇಲ್ಲಿ ನಿಮಗೆ Add New Member to Ration Card ಎನ್ನುವ ಆಯ್ಕೆ ಕಾಣುತ್ತದೆ, ಅದನ್ನು ಸೆಲೆಕ್ಟ್ ಮಾಡಿ.

*ಈಗ ಒಂದು ಫಾರ್ಮ್ ಬರುತ್ತದೆ ಅದರಲ್ಲಿ ಕೇಳುವ ಪ್ರಶ್ನೆಗೆ ಸರಿಯಾಗಿ ಉತ್ತರಿಸಿ.

*ಹೊಸ ಸದಸ್ಯರ ಹೆಸರು, ವೈಯಕ್ತಿಕ ಮಾಹಿತಿ ಮತ್ತು ಫೋನ್ ನಂಬರ್ ಎಲ್ಲವನ್ನು ನಮೂದಿಸಿ..

*ನಂತರ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ

*ಬಳಿಕ ಅರ್ಜಿ ಶುಲ್ಕವನ್ನು ಪಾವತಿ ಮಾಡಿ

*ಬಳಿಕ ಅರ್ಜಿಗೆ ಅನುಮೋದನೆ ಸಿಗುತ್ತದೆ

ಕೃಷಿ ನೆಲದಲ್ಲಿ ಉಚಿತ ಬೋರ್ ವೆಲ್ ಸೌಲಭ್ಯ! ರೈತರ ನೀರಿನ ಸಮಸ್ಯೆ ನೀಗಿಸಲು ಹೊಸ ಯೋಜನೆ

ಬೇಕಾಗುವ ದಾಖಲೆಗಳು:

*ರೇಷನ್ ಕಾರ್ಡ್ ನಂಬರ್
*ಮನೆಯ ಮುಖ್ಯಸ್ಥರ ಹೆಸರು
*ಹೊಸ ಸದಸ್ಯರ ಬರ್ತ್ ಸರ್ಟಿಫಿಕೇಟ್
*ಹೊಸ ಸದಸ್ಯರ ಆಧಾರ್ ಕಾರ್ಡ್

include the name of a new member in the ration card in Online

Our Whatsapp Channel is Live Now 👇

Whatsapp Channel

Related Stories