Bengaluru NewsKarnataka News

ಇನ್ಮುಂದೆ ಅನ್ನಭಾಗ್ಯ ಯೋಜನೆಯ ಹಣ ಸಿಗೋದಿಲ್ಲ! ಧಿಡೀರ್ ರಾಜ್ಯ ಸರ್ಕಾರದಿಂದ ಹೊಸ ಸುದ್ದಿ

Annabhagya Yojana : ಕಾಂಗ್ರೆಸ್ ಸರ್ಕಾರ ನಮ್ಮ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ 5 ಯೋಜನೆಗಳನ್ನು ಜಾರಿಗೆ ತಂದಿದೆ. ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ಗೃಹಜ್ಯೋತಿ ಯೋಜನೆ, ಅನ್ನಭಾಗ್ಯ ಯೋಜನೆ ಮತ್ತು ಯುವನಿಧಿ ಯೋಜನೆ.

ಇವುಗಳ ಪೈಕಿ ಈಗಾಗಲೇ ಬಹುತೇಕ ಯೋಜನೆಗಳು ಜಾರಿಗೆ ಬಂದಿವೆ. 5 ಯೋಜನೆಗಳಲ್ಲಿ ಮಹತ್ವದ ಯೋಜನೆಗಳ ಪೈಕಿ ಒಂದು ಅನ್ನಭಾಗ್ಯ ಯೋಜನೆ ಆಗಿದೆ. ಇದು ಜನರ ಹಸಿವನ್ನು ನೀಗಿಸುವ ಯೋಜನೆ..

No more Annabhagya Scheme money, decision of State Govt

ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಇದ್ದು, ಆ ಕಾರ್ಡ್ ಗಳಲ್ಲಿ ಇರುವ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡವುದಾಗಿ ಸರ್ಕಾರ ಭರವಸೆ ನೀಡಿತ್ತು.

ಇನ್ಮೇಲೆ ಪ್ರತಿ ತಿಂಗಳು ಈ ತಾರೀಕಿಗೆ ಗೃಹಲಕ್ಷ್ಮಿ ಹಣ ನಿಮ್ಮ ಖಾತೆ ತಲುಪಲಿದೆ! ಸರ್ಕಾರದ ಹೊಸ ನಿರ್ಧಾರ

ಆದರೆ ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಕೇಂದ್ರ ಸರ್ಕಾರದ ಅನುಮೋದನೆ ಸಿಗಲಿಲ್ಲ, ಹಾಗೆಯೇ ಬೇರೆ ಮೂಲಗಳಿಂದ ಅಷ್ಟು ದೊಡ್ಡ ಮಟ್ಟದಲ್ಲಿ ಅಕ್ಕಿಯನ್ನು ಒದಗಿಸಲು ಸಾಧ್ಯ ಆಗಲು ಇಲ್ಲ. ಆ ಕಾರಣಕ್ಕೆ ರಾಜ್ಯ ಸರ್ಕಾರ ಬೇರೆಯದೇ ನಿರ್ಧಾರ ಮಾಡಿತ್ತು.

ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಒದಗಿಸಲು ಸಾಧ್ಯವಾಗದ ಕಾರಣ, ಒಬ್ಬ ವ್ಯಕ್ತಿಗೆ 5ಕೆಜಿ ಅಕ್ಕಿ ನೀಡಿ, ಇನ್ನು 5 ಕೆಜಿ ಅಕ್ಕಿಯ ಬದಲಾಗಿ ಒಂದು ಕೆಜಿ ಅಕ್ಕಿಗೆ 34 ರೂಪಾಯಿಯ ಹಾಗೆ 5 ಕೆಜಿಗೆ ₹170 ರೂಪಾಯಿ ಹಣವನ್ನು ಡಿಬಿಟಿ ಮೂಲಕ ಮನೆಯ ಮುಖ್ಯಸ್ಥರ ಖಾತೆಗೆ (Bank Account) ವರ್ಗಾವಣೆ ಮಾಡುವುದಾಗಿ ಸರ್ಕಾರ ತಿಳಿಸಿತ್ತು. ಅದೇ ರೀತಿ 10 ತಿಂಗಳುಗಳಿಂದ ಜನರಿಗೆ ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆ ಆಗುತ್ತಲೇ ಬರುತ್ತಿದೆ.

ಶಕ್ತಿ ಯೋಜನೆಗೆ ಹೊಸ ರೂಲ್ಸ್ ಜಾರಿ! ಫ್ರೀ ಬಸ್ ಹತ್ತುವ ಮಹಿಳೆಯರು ನಿಯಮ ಪಾಲಿಸಲೇಬೇಕು

Annabhagya Schemeಆದರೆ ಇದೀಗ ರಾಜ್ಯ ಸರ್ಕಾರದ ವತಿಯಿಂದ ಒಂದು ಹೊಸ ಸುದ್ದಿ ಸಿಕ್ಕಿದ್ದು, ಈಗಷ್ಟೇ ಲೋಕಸಭಾ ಚುನಾವಣೆ ಮುಗಿದು, ಕೇಂದ್ರದಲ್ಲಿ ಹೊಸದಾಗಿ ಸಚಿವ ಸಂಪುಟ ರಚನೆ ಆಗಿರುವ ಕಾರಣ ಮತ್ತೊಮ್ಮೆ 10ಕೆಜಿ ನೀಡುವ ಬಗ್ಗೆ ಕೇಂದ್ರ ಸರ್ಕಾರದ ಜೊತೆಗೆ ಮಾತುಕತೆ ನಡೆಸಲಾಗುತ್ತದೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಕೇಂದ್ರ ಸರ್ಕಾರದ ಕಡೆಯಿಂದ ಇದಕ್ಕಾಗಿ ಅನುಮೋದನೆ ಸಿಕ್ಕರೆ, ಇನ್ನುಮುಂದೆ ಹಣದ ಬದಲಾಗಿ 10ಕೆಜಿ ಅಕ್ಕಿ ಪ್ರತಿ ವ್ಯಕ್ತಿಗೆ ಸಿಗಲಿದೆ.

ಇಷ್ಟು ದಿನವಾದ್ರೂ ಗೃಹಲಕ್ಷ್ಮಿ ಹಣ ಇನ್ನೂ ಬಂದಿಲ್ವಾ? ಹಾಗಾದ್ರೆ ಈ ದಾಖಲೆ ಕೊಟ್ಟು ಹಣ ಪಡೆಯಿರಿ

ಶೀಘ್ರದಲ್ಲೇ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಜೊತೆಗೆ ಈ ವಿಷಯದ ಬಗ್ಗೆ ಮಾತುಕತೆ ನಡೆಸಲಿದೆ. ಹಾಗೆಯೇ ಅನ್ನಭಾಗ್ಯ ಯೋಜನೆಯ ಮೂಲಕ ಪ್ರಸ್ತುತ ಸಿಗುತ್ತಿರುವ ಹಣದ ಬಗ್ಗೆ ಹೇಳುವುದಾದರೆ, ಕಳೆದ 2 ತಿಂಗಳುಗಳಿಂದ ಎಲೆಕ್ಷನ್ ಹಾಗೂ ಅದರ ಫಲಿತಾಂಶ ಇದ್ದ ಕಾರಣ ಅನ್ನಭಾಗ್ಯ ಯೋಜನೆಯ ಹಣ ಜನರನ್ನು ತಲುಪಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಅನ್ನಭಾಗ್ಯ ಯೋಜನೆಯ ಹಣ ಫಲಾನುಭವಿಗಳ ಖಾತೆ ತಲುಪಲಿದೆ.

No more Annabhagya Scheme money, decision of State Govt

Our Whatsapp Channel is Live Now 👇

Whatsapp Channel

Related Stories