ಈ ಕಾರ್ಡ್ ಇರುವ ಪೋಷಕರ ಮಕ್ಕಳಿಗೆ ಸಿಗಲಿದೆ ₹11,000 ಸ್ಕಾಲರ್ಶಿಪ್! ಇಂದೇ ಅರ್ಜಿ ಸಲ್ಲಿಸಿ
Education scholarship : ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವುದು ಹೇಗೆ? ವಿದ್ಯಾರ್ಥಿಗಳಿಗೆ ಸಿಗುವ ಮೊತ್ತ ಎಷ್ಟು? ಯಾರೆಲ್ಲಾ ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು? ಈ ಎಲ್ಲಾ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇವೆ.
Education scholarship : ಕೇಂದ್ರ ಸರ್ಕಾರವು ಕಾರ್ಮಿಕ ವರ್ಗದವರಿಗೆ, ಇನ್ನಿತರ ಕೂಲಿ ಕೆಲಸ ಮಾಡುವವರಿಗೆ ಅನುಕೂಲ ಆಗಲಿ ಎಂದು ಲೇಬರ್ ಕಾರ್ಡ್ ಸೌಲಭ್ಯವನ್ನು ಜಾರಿಗೆ ತಂದಿದೆ. ಅಸಂಘಾಟಿತ ವರ್ಗದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು, ಈ ಒಂದು ಕಾರ್ಡ್ ಅನ್ನು ಮಾಡಿಸಿಕೊಳ್ಳಬಹುದು.
ಇನ್ನಿತರ ಕಾರ್ಮಿಕರಿಗೂ ಸಹ ಇದರಿಂದ ಅನುಕೂಲ ಸಿಗುತ್ತದೆ. ಕಾರ್ಮಿಕರಿಗೆ ಮಾತ್ರವಲ್ಲ ಇದೀಗ ಅವರ ಮಕ್ಕಳಿಗೆ ಕೂಡ ಸಹಾಯ ಮಾಡಲು ಮುಂದಾಗಿದೆ ಸರ್ಕಾರ.
ಹೌದು, ಕಾರ್ಮಿಕ ವರ್ಗದಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸ ಸಿಗಬೇಕು, ಅವರು ಉತ್ತಮವಾದ ರೀತಿಯಲ್ಲಿ ಅವರು ಬೆಳೆದು ಸಾಧನೆ ಮಾಡಬೇಕು ಎಂದು ಲೇಬರ್ ಕಾರ್ಡ್ ಇರುವವರ ಮಕ್ಕಳಿಗೆ ಸ್ಕಾಲರ್ಶಿಪ್ ಕೊಡುವುದಕ್ಕೆ ಸರ್ಕಾರ ಮುಂದಾಗಿದೆ. ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ, ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸಕ್ಕೆ ಸಹಾಯ ಪಡೆದುಕೊಳ್ಳಬಹುದು.
ಮಕ್ಕಳು ಚೆನ್ನಾಗಿ ಓದುವುದಕ್ಕೆ, ಅವರ ಮುಂದಿನ ಭವಿಷ್ಯ ಚೆನ್ನಾಗಿ ಕಟ್ಟಿಕೊಳ್ಳುವುದಕ್ಕೆ ಈ ಒಂದು ಸ್ಕಾಲರ್ಶಿಪ್ ಸೌಲಭ್ಯದಿಂದ ಸಹಾಯ ಆಗಲಿದೆ. ಹಾಗಿದ್ದಲ್ಲಿ ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವುದು ಹೇಗೆ? ವಿದ್ಯಾರ್ಥಿಗಳಿಗೆ ಸಿಗುವ ಮೊತ್ತ ಎಷ್ಟು? ಯಾರೆಲ್ಲಾ ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು? ಈ ಎಲ್ಲಾ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇವೆ. ಈ ಲೇಖನವನ್ನು ಪೂರ್ತಿಯಾಗಿ ಓದಿ..
ಫ್ರೀಯಾಗಿ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಆಹ್ವಾನ! ಸುಲಭವಾಗಿ ಮೊಬೈಲ್ ನಲ್ಲೆ ಅರ್ಜಿ ಸಲ್ಲಿಸಿ
ಸ್ಕಾಲರ್ಶಿಪ್ ಗೆ ಸಿಗೋ ಮೊತ್ತವೆಷ್ಟು?
*3000 ರೂಪಾಯಿಗಳ ಸ್ಕಾಲರ್ಶಿಪ್ ಅನ್ನು 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
*4,600 ರೂಪಾಯಿಗಳ ಸ್ಕಾಲರ್ಶಿಪ್ ಅನ್ನು ಪ್ರಥಮ ಮತ್ತು ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕೊಡಲಾಗುತ್ತದೆ.
*6,000 ರೂಪಾಯಿಗಳ ಸ್ಕಾಲರ್ಶಿಪ್ ಅನ್ನು ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
*10,000 ರೂಪಾಯಿಗಳ ಸ್ಕಾಲರ್ಶಿಪ್ ಇಂಜಿನಿಯರಿಂಗ್ ಅಥವಾ ಬೀಟೆಕ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
*6000 ರೂಪಾಯಿಗಳ ಸ್ಕಾಲರ್ಶಿಪ್ B.ed ಓದುತ್ತಿರುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
*11,000 ರೂಪಾಯಿಗಳ ಸ್ಕಾಲರ್ಶಿಪ್ ಮೆಡಿಸಿನ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಿಗುತ್ತದೆ.
ನಿಮ್ಮ ಕೆನರಾ ಬ್ಯಾಂಕ್ ಫಿಕ್ಸೆಡ್ ಹಣಕ್ಕೆ ಸಿಗಲಿದೆ ಭರ್ಜರಿ ಬಡ್ಡಿದರ! ಇಲ್ಲಿದೆ ಸಿಗುವ ಬಡ್ಡಿ ಲೆಕ್ಕಾಚಾರ
ಅಗತ್ಯವಿರುವ ದಾಖಲೆಗಳು:
ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ವಿದ್ಯಾರ್ಥಿಯ ದಾಖಲೆಗಳು ಈ ಕೆಳಗಿನಂತಿದೆ.
*ಆಧಾರ್ ಕಾರ್ಡ್
*ವಿದ್ಯಾರ್ಥಿಯ ತಂದೆ ತಾಯಿಯ ಲೇಬರ್ ಕಾರ್ಡ್
*ವಿದ್ಯಾರ್ಥಿಯ ತಂದೆ ತಾಯಿಯ ಆಧಾರ್ ಕಾರ್ಡ್
*ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್
*ಆಕ್ಟಿವ್ ಆಗಿರುವ ಫೋನ್ ನಂಬರ್
ಅತಿ ಕಡಿಮೆ ಬಡ್ಡಿಗೆ ಹೋಮ್ ಲೋನ್ ನೀಡುತ್ತಿರುವ ಟಾಪ್ ಬ್ಯಾಂಕುಗಳು ಇವು! ಇಲ್ಲಿದೆ ಫುಲ್ ಡೀಟೇಲ್ಸ್
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ಒಂದು ವೇಳೆ ನೀವು ಲೇಬರ್ ಕಾರ್ಡ್ ಹೊಂದಿರುವ ತಂದೆ ತಾಯಿಯ ಮಕ್ಕಳಾಗಿದ್ದು, ಸ್ಕಾಲರ್ಶಿಪ್ ಪಡೆಯಬೇಕು ಎಂದರೆ, ಸುಲಭವಾಗಿ ಅರ್ಜಿ ಸಲ್ಲಿಸಬಹದು. https://karbwwb.karnataka.gov.in/ ಈ ಒಂದು ಲಿಂಕ್ ಗೆ ಭೇಟಿ ನೀಡುವ ಮೂಲಕ, ಸುಲಭವಾಗಿ ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು.
Children of parents with this card will get 11,000 Education scholarship