ನಿಮ್ಮ ಕೆನರಾ ಬ್ಯಾಂಕ್ ಫಿಕ್ಸೆಡ್ ಹಣಕ್ಕೆ ಸಿಗಲಿದೆ ಭರ್ಜರಿ ಬಡ್ಡಿದರ! ಇಲ್ಲಿದೆ ಸಿಗುವ ಬಡ್ಡಿ ಲೆಕ್ಕಾಚಾರ
Canara Bank Fixed Deposit : ಪ್ರತಿಯೊಬ್ಬರು ಕೂಡ ತಮ್ಮಿಂದ ಸಾಧ್ಯ ಆದಷ್ಟು ಮೊತ್ತವನ್ನು ಹೂಡಿಕೆ ಮಾಡುವುದಕ್ಕೆ ಇಷ್ಟಪಡುತ್ತಾರೆ. ಹೂಡಿಕೆ ಮಾಡುವುದಕ್ಕೆ ಸಾಕಷ್ಟು ಆಯ್ಕೆಗಳಿವೆ, ಅವುಗಳ ಪೈಕಿ ಬ್ಯಾಂಕ್ ನಲ್ಲಿ FD ಇಡುವುದು ಒಂದು ಒಳ್ಳೆಯ ಆಯ್ಕೆ ಎಂದು ಹೇಳಿದರೆ ಖಂಡಿತ ತಪ್ಪಲ್ಲ. FD ಅಂದರೆ ಸ್ಥಿರ ಠೇವಣಿ ಮಾಡುವುದರಿಂದ ನಿಮ್ಮ ಮೊತ್ತಕ್ಕೆ ಒಳ್ಳೆಯ ರಿಟರ್ನ್ಸ್ ಬರುತ್ತದೆ. ಬ್ಯಾಂಕ್ ಗಳಲ್ಲಿ FD ಹೂಡಿಕೆಗೆ ಸಾಕಷ್ಟು ಆಯ್ಕೆಗಳಿವೆ…
ನಮ್ಮ ದೇಶದ ಪ್ರಮುಖ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್ ತಮ್ಮ ಗ್ರಾಹಕರಿಗೆ ಹೂಡಿಕೆಗಾಗಿ ಸಾಕಷ್ಟು ಆಯ್ಕೆಗಳನ್ನು ನೀಡುತ್ತದೆ. ಈ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವುದಕ್ಕೆ, ಇದು ಬಹಳ ಸುರಕ್ಷಿತವಾದ ಹಾಗೂ ಜನರ ನಂಬಿಕೆಯನ್ನು ಗಳಿಸಿಕೊಂಡಿರುವ ಬ್ಯಾಂಕ್ ಆಗಿದೆ.
ಅತಿ ಕಡಿಮೆ ಬಡ್ಡಿಗೆ ಹೋಮ್ ಲೋನ್ ನೀಡುತ್ತಿರುವ ಟಾಪ್ ಬ್ಯಾಂಕುಗಳು ಇವು! ಇಲ್ಲಿದೆ ಫುಲ್ ಡೀಟೇಲ್ಸ್
ಹಾಗಾಗಿ ಯಾರೇ ಆದರೂ ಕೆನರಾ ಬ್ಯಾಂಕ್ ನಲ್ಲಿ ಹೂಡಿಕೆ ಮಾಡಬಹುದು. ಹಾಗೆಯೇ ಈ ಬ್ಯಾಂಕ್ ನಲ್ಲಿ ಗ್ರಾಹಕರಿಗೆ ನೀಡುವ ಸೇವೆ ಕೂಡ ಅಷ್ಟೇ ಚೆನ್ನಾಗಿರುತ್ತದೆ. ಯಾವುದೇ ಸಮಸ್ಯೆ ಸಹ ಎದುರಾಗುವುದಿಲ್ಲ.
ಹಾಗಾಗಿ ಒಂದು ವೇಳೆ ನೀವು ಕೂಡ FD ಮಾಡುವುದಕ್ಕೆ ಒಳ್ಳೆಯ ಬ್ಯಾಂಕ್ ಹಾಗೂ ಅದಕ್ಕಾಗಿ ಉತ್ತಮ ಬಡ್ಡಿದರಕ್ಕಾಗಿ ಹುಡುಕುತ್ತಿದ್ದರೆ ಕೆನರಾ ಬ್ಯಾಂಕ್ ನಿಮಗೆ ಒಳ್ಳೆಯ ಆಯ್ಕೆ ಆಗಿದ್ದು, ಈ ಬ್ಯಾಂಕ್ ನಲ್ಲಿ FD ಗೆ ಬಡ್ಡಿದರ ಎಷ್ಟಿದೆ? ಎಷ್ಟು ಕಾಲಕ್ಕೆ ಹೂಡಿಕೆ ಮಾಡುವುದು ಒಳ್ಳೆಯದು? ಅದರಿಂದ ನಿಮಗೆ ಬರುವ ರಿಟರ್ನ್ಸ್ ಹಣ ಎಷ್ಟು? ಇದೆಲ್ಲವನ್ನು ತಿಳಿಸಿಕೊಡುತ್ತೇವೆ ನೋಡಿ..
ಕೇವಲ 2 ಲಕ್ಷ ರೂಪಾಯಿಗೆ ಶುರು ಮಾಡಿ ಅಮುಲ್ ಫ್ರಾಂಚೈಸಿ ಬ್ಯುಸಿನೆಸ್! ಒಳ್ಳೆಯ ಲಾಭ ಖಂಡಿತ
*7 ರಿಂದ 45 ದಿನಗಳ ವರೆಗಿನ FD ಪ್ಲಾನ್ ಗೆ, ಸಾಮಾನ್ಯ ಜನರಿಗೆ 4% ಬಡ್ಡಿದರ, ಹಿರಿಯ ನಾಗರೀಕರಿಗೆ 4% ಬಡ್ಡಿದರ ಸಿಗಲಿದೆ.
*46 ರಿಂದ 90 ದಿನಗಳ ವರೆಗೆ, ಸಾಮಾನ್ಯ ಜನರಿಗೆ 5.25% ಬಡ್ಡಿದರ, ಹಿರಿಯ ನಾಗರೀಕರಿಗೆ 5.25% ಬಡ್ಡಿದರ ಸಿಗಲಿದೆ.
*91 ರಿಂದ 179 ದಿನಗಳ ವರೆಗೆ, ಸಾಮಾನ್ಯ ಜನರಿಗೆ 5.50% ಬಡ್ಡಿದರ, ಹಿರಿಯ ನಾಗರೀಕರಿಗೆ 5.50 ಬಡ್ಡಿದರ ಸಿಗಲಿದೆ.
*180 ರಿಂದ 269 ದಿನಗಳ ವರೆಗೆ, ಸಾಮಾನ್ಯ ಜನರಿಗೆ 6.25% ಬಡ್ಡಿದರ, ಹಿರಿಯ ನಾಗರೀಕರಿಗೆ 6.25% ಬಡ್ಡಿದರ ಸಿಗಲಿದೆ.
*1 ವರ್ಷದ ವರೆಗಿಗೆ, ಸಾಮಾನ್ಯ ಜನರಿಗೆ 6.85% ಬಡ್ಡಿದರ, ಹಿರಿಯ ನಾಗರೀಕರಿಗೆ 7.35% ಬಡ್ಡಿದರ ಸಿಗಲಿದೆ.
*1 ವರ್ಷದಿಂದ 2 ವರ್ಷದ ವರೆಗೆ, ಸಾಮಾನ್ಯ ಜನರಿಗೆ 6.85% ಬಡ್ಡಿದರ, ಹಿರಿಯ ನಾಗರೀಕರಿಗೆ 7.35% ಬಡ್ಡಿದರ ಸಿಗಲಿದೆ.
*444 ದಿನಗಳ FD ಪ್ಲಾನ್ ಗೆ, ಸಾಮಾನ್ಯ ಜನರಿಗೆ 7.25% ಬಡ್ಡಿದರ, ಹಿರಿಯ ನಾಗರೀಕರಿಗೆ 7.75% ಬಡ್ಡಿದರ ಸಿಗಲಿದೆ.
*2 ವರ್ಷದಿಂದ 3 ವರ್ಷಗಳ ವರೆಗೆ, ಸಾಮಾನ್ಯ ಜನರಿಗೆ 6.85% ಬಡ್ಡಿದರ, ಹಿರಿಯ ನಾಗರೀಕರಿಗೆ 7.35% ಬಡ್ಡಿದರ ಸಿಗಲಿದೆ.
*3 ವರ್ಷದಿಂದ 5 ವರ್ಷದ ವರೆಗೆ, ಸಾಮಾನ್ಯ ಜನರಿಗೆ 6.80% ಬಡ್ಡಿದರ, ಹಿರಿಯ ನಾಗರೀಕರಿಗೆ 7.30% ಬಡ್ಡಿದರ ಸಿಗಲಿದೆ..
*5 ವರ್ಷದಿಂದ 10 ವರ್ಷದ ವರೆಗೆ, ಸಾಮಾನ್ಯ ಜನರಿಗೆ 6.80% ಬಡ್ಡಿದರ, ಹಿರಿಯ ನಾಗರೀಕರಿಗೆ 7.30% ಬಡ್ಡಿದರ ಸಿಗಲಿದೆ.
ಕೆನರಾ ಬ್ಯಾಂಕ್ ನಲ್ಲಿ ಇಷ್ಟು ಒಳ್ಳೆಯ ಬಡ್ಡಿದರ ಸಿಗುತ್ತಿದ್ದು, ಒಂದು ವೇಳೆ ನಿಮಗೆ ಬ್ಯಾಂಕ್ ನಲ್ಲಿ FD ಮಾಡುವ ಆಸಕ್ತಿ ಇದ್ದರೆ, ಮಾಡಬಹುದು.
Your Canara Bank fixed money will get a great interest rate