ಫ್ರೀಯಾಗಿ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಆಹ್ವಾನ! ಸುಲಭವಾಗಿ ಮೊಬೈಲ್ ನಲ್ಲೆ ಅರ್ಜಿ ಸಲ್ಲಿಸಿ
ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ನಮ್ಮ ದೇಶದ ಜನರಿಗೆ ಆರ್ಥಿಕವಾಗಿ ಸಹಾಯ ಮಾಡುವುದಕ್ಕಾಗಿ ಅದರಲ್ಲೂ ಬಡತನದ ರೇಖೆಗಿಂತ ಕೆಳಗೆ ಇರುವಂಥ ಜನರಿಗೆ ಸಹಾಯ ಮಾಡುವುದಕ್ಕಾಗಿ ಕೇಂದ್ರ ಸರ್ಕಾರದ ಕಡೆಯಿಂದ ಬಹಳಷ್ಟು ಯೋಜನೆಗಳನ್ನು ಜಾರಿಗೆ ತರುತ್ತಲಿದ್ದಾರೆ. ಆ ಯೋಜನೆಗಳ ಪೈಕಿ ಪಿಎಮ್ ಉಜ್ವಲಾ ಯೋಜನೆ ಕೂಡ ಪ್ರಮುಖವಾದ ಯೋಜನೆ ಆಗಿದೆ.
ಪಿಎಮ್ ಉಜ್ವಲಾ ಯೋಜನೆ:
ಕೆಲ ವರ್ಷಗಳ ಹಿಂದೆಯೇ ಪಿಎಮ್ ಉಜ್ವಲಾ ಯೋಜನೆಯನ್ನು ಶುರು ಮಾಡಲಾಯಿತು. ಈ ಯೋಜನೆ ಮೂಲಕ ಕಷ್ಟದಲ್ಲಿ ಇರುವ ಜನರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ (Gas Cylinder) ಮತ್ತು ಸ್ಟವ್ (Gas Stove) ಎರಡನ್ನು ಕೂಡ ನೀಡಲಾಗುತ್ತದೆ.
ದೇಶದಲ್ಲಿ ಯಾರು ಕೂಡ ಒಲೆಯಲ್ಲಿ, ಧೂಳಿನಲ್ಲಿ ಕಷ್ಟಪಟ್ಟು ಅಡುಗೆ ಮಾಡಿ, ಆರೋಗ್ಯ ಕೆಡಿಸಿಕೊಳ್ಳಬಾರದು ಎನ್ನುವುದು ಮೋದಿ ಅವರ ಉದ್ದೇಶ ಆಗಿದೆ. ಹಾಗಾಗಿ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ನಿಮ್ಮ ಕೆನರಾ ಬ್ಯಾಂಕ್ ಫಿಕ್ಸೆಡ್ ಹಣಕ್ಕೆ ಸಿಗಲಿದೆ ಭರ್ಜರಿ ಬಡ್ಡಿದರ! ಇಲ್ಲಿದೆ ಸಿಗುವ ಬಡ್ಡಿ ಲೆಕ್ಕಾಚಾರ
ಪಿಎಮ್ ಉಜ್ವಲಾ ಯೋಜನೆಯ ಮೂಲಕ ಉಚಿತವಾಗಿ ಗ್ಯಾಸ್ ಸಿಲಿಂಡರ್ (Free Gas Connection) ಸಂಪರ್ಕ ಹಾಗೂ ಉಚಿತ ಸ್ಟವ್ ಸಿಗುತ್ತದೆ. ಈ ಯೋಜನೆಯಲ್ಲಿ ನೀವು 500 ರೂಪಾಯಿಗೆ ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಪಡೆಯಬಹುದು.
ಪ್ರಸ್ತುತ 14.2 ಕೆಜಿ ಗ್ಯಾಸ್ ಸಿಲಿಂಡರ್ ನ ಬೆಲೆ ₹804 ರೂಪಾಯಿ ಆಗಿದೆ, ಆದರೆ ಉಜ್ವಲಾ ಯೋಜನೆಯ ಅಡಿಯಲ್ಲಿ 300 ರೂಪಾಯಿ ಸಬ್ಸಿಡಿ ಸಿಗಲಿದ್ದು, 500 ರೂಪಾಯಿಗೆ ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಪಡೆಯುವ ಸೌಲಭ್ಯ ನಿಮ್ಮದಾಗುತ್ತದೆ.
ಹಾಗಿದ್ದಲ್ಲಿ ಈ ಯೋಜನೆಗೆ ಅಪ್ಲೈ ಮಾಡುವುದಕ್ಕೆ ಬೇಕಿರುವ ಎಲ್ಲಾ ಮಾಹಿತಿಗಳನ್ನು ಇಂದು ತಿಳಿಯೋಣ… ಪಿಎಮ್ ಉಜ್ವಲಾ ಯೋಜನೆಗೆ ಅಪ್ಲೈ ಮಾಡಲು ಬೇಕಿರುವ ಪ್ರಮುಖ ದಾಖಲೆಗಳು:
ಅತಿ ಕಡಿಮೆ ಬಡ್ಡಿಗೆ ಹೋಮ್ ಲೋನ್ ನೀಡುತ್ತಿರುವ ಟಾಪ್ ಬ್ಯಾಂಕುಗಳು ಇವು! ಇಲ್ಲಿದೆ ಫುಲ್ ಡೀಟೇಲ್ಸ್
*ಆಧಾರ್ ಕಾರ್ಡ್
*ಬ್ಯಾಂಕ್ ಪಾಸ್ ಬುಕ್
*ಬಿಪಿಎಲ್ ರೇಶನ್ ಕಾರ್ಡ್
*ಆಕ್ಟಿವ್ ಆಗಿರುವ ಫೋನ್ ನಂಬರ್
ನೆನಪಿಡಿ ಈ ಯೋಜನೆಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು.
ಕೇವಲ 2 ಲಕ್ಷ ರೂಪಾಯಿಗೆ ಶುರು ಮಾಡಿ ಅಮುಲ್ ಫ್ರಾಂಚೈಸಿ ಬ್ಯುಸಿನೆಸ್! ಒಳ್ಳೆಯ ಲಾಭ ಖಂಡಿತ
ಅರ್ಜಿ ಸಲ್ಲಿಕೆ ಪ್ರಕ್ರಿಯೆ
ಒಂದು ವೇಳೆ ನೀವು ಪಿಎಮ್ ಉಜ್ವಲಾ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ, ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹದು. ಅಥವಾ ಪಿಎಮ್ ಉಜ್ವಲಾ ಯೋಜನೆಯ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅಥವಾ https://pmuy.gov.in/ ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಫೋನ್ ನಲ್ಲೇ ಸುಲಭವಾಗಿ ಅರ್ಜಿ ಸಲ್ಲಿಸಬಹುದು.
Application invitation to get gas cylinder for free, Apply easily on mobile