ನಕಲಿ ರೇಷನ್ ಕಾರ್ಡ್ ರದ್ದು, ಅರ್ಹ ಪಡಿತರ ಚೀಟಿದಾರರಿಗೆ ಶೀಘ್ರದಲ್ಲೇ ಕಾರ್ಡ್ ವಿತರಣೆ! ಇಲ್ಲಿದೆ ಮಾಹಿತಿ
ಇದೀಗ ಅನರ್ಹರ ಕಾರ್ಡ್ ರದ್ದು (Cancellation) ಮಾಡುವ ಜೊತೆಗೆ ಅರ್ಹರಿಗೆ ರೇಷನ್ ಕಾರ್ಡ್ ವಿತರಣೆ ಮಾಡುವ ಬಗ್ಗೆ ಸಚಿವರು ಗುಡ್ ನ್ಯೂಸ್ ನೀಡಿದ್ದಾರೆ.
Ration Card : ಇಂದು ಆಹಾರ ಇಲಾಖೆಯು ಬಡ ವರ್ಗದ ಜನತೆಯ ಹಸಿವನ್ನು ನೀಗಿಸಲು ಪಡಿತರ ಧಾನ್ಯ ಗಳನ್ನು ವಿತರಣೆ ಮಾಡುತ್ತಿದೆ. ಹೌದು ಹೆಚ್ಚಿನ ಬಡವರ್ಗದ ಜನತೆ ಈ ಸೌಲಭ್ಯ ವನ್ನು ಪಡೆಯುತ್ತಿದೆ. ಆದರೆ ಇಂದು ಈ ರೇಷನ್ ಕಾರ್ಡ್ ಅನ್ನು ದುರುಪಯೋಗ ಮಾಡುವವರ ಸಂಖ್ಯೆಯೆ ಹೆಚ್ಚಾಗಿದೆ.
ಅದಕ್ಕಾಗಿ ಆಹಾರ ಇಲಾಖೆ ಈ ಬಗ್ಗೆ ಪದೇ ಪದೇ ಸೂಚನೆ ನೀಡುತ್ತಲೇ ಬಂದಿದೆ. ಇದೀಗ ಅನರ್ಹರ ಕಾರ್ಡ್ ರದ್ದು (Cancellation) ಮಾಡುವ ಜೊತೆಗೆ ಅರ್ಹರಿಗೆ ರೇಷನ್ ಕಾರ್ಡ್ ವಿತರಣೆ ಮಾಡುವ ಬಗ್ಗೆ ಸಚಿವರು ಗುಡ್ ನ್ಯೂಸ್ ನೀಡಿದ್ದಾರೆ.
ಹೌದು ಬಿಪಿಎಲ್ (BPL Card) ಮತ್ತು ಎಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಿದವರಿಗೆ ರಾಜ್ಯ ಸರಕಾರ ಗುಡ್ ನ್ಯೂಸ್ ನೀಡಿದ್ದು ಅರ್ಹ ಫಲಾನುಭವಿಗಳಿಗೆ ಶೀಘ್ರವಾಗಿ ಕಾರ್ಡ್ ವಿತರಣೆ ಮಾಡುವ ಬಗ್ಗೆ ಸಚಿವರು ಅನುಮೋದನೆ ನೀಡಿದ್ದಾರೆ.
ಉಚಿತ ಕರೆಂಟ್ ಪಡೆಯೋಕೆ ಕೊಟ್ಟ ಆಧಾರ್ ಡೀಲಿಂಕ್ ಮಾಡೋದು ಹೇಗೆ? ಇಲ್ಲಿದೆ ಬಿಗ್ ಅಪ್ಡೇಟ್
ಈಗಾಗಲೇ ಅರ್ಜಿ ಹಾಕಿದ್ದ ಫಲಾನುಭವಿಗಳನ್ನು ಗುರುತಿಸಿ, ಅರ್ಜಿ ದಾಖಲೆ ಸರಿ ಇದ್ದರೆ ಅಂತಹ ಕಾರ್ಡ್ ಗಳನ್ನು ಗುರುತಿಸಿ ಶೀಘ್ರವಾಗಿ ವಿಲೇವಾರಿ ಮಾಡಲು ಸಚಿವ ಕೆ.ಹೆಚ್. ಮುನಿಯಪ್ಪ ಸೂಚನೆ ಕೂಡ ನೀಡಿದ್ದಾರೆ.
ಅದೇ ರೀತಿ ಅನ್ನಭಾಗ್ಯ ಯೋಜನೆಯ ಹಣವೂ ಕೂಡ ತಿಂಗಳಿಗೆ ಸರಿಯಾಗಿ ಬಿಡುಗಡೆ ಮಾಡುವಂತೆ ಪ್ರತಿ ತಿಂಗಳ ಅಂತ್ಯದ ಒಳಗೆ ಫಲಾನುಭವಿಗಳ ಖಾತೆಗೆ ಸಂದಾಯವಾಗುವಂತೆ ಮಾಡ ಬೇಕೆಂದು ಸೂಚನೆ ಕೂಡ ನೀಡಿದರು.
ಉಚಿತ ಮನೆ ಹಂಚಿಕೆಗೆ ಅರ್ಜಿ ಆಹ್ವಾನ! ರಾಜೀವ್ ಗಾಂಧಿ ವಸತಿ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ
ಅನರ್ಹ ಕಾರ್ಡ್ ರದ್ದು
ಇಂದು ನಕಲಿ ರೇಷನ್ ಕಾರ್ಡ್ ಗಳ ಸಂಖ್ಯೆ ಹೆಚ್ಚಾಗಿದ್ದು ಸುಳ್ಳು ಮಾಹಿತಿ,ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ್ ಮಾಡಿಸಿದವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತೆ. ಇದಕ್ಕಾಗಿ ಕಡಿವಾಣ ಹಾಕಲು ಆಹಾರ ಇಲಾಖೆಯು ಸೂಕ್ತ ಕ್ರಮ ಕೈಗೊಂಡಿದೆ.ಈಗಾಗಲೇ ಎಪಿಎಲ್ ಕಾರ್ಡ್ ಹೊಂದಿದ್ದ ಜನರೇ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದು ಇಂತಹ ಕಾರ್ಡ್ ಗಳನ್ನು ಅನರ್ಹರ ಪಟ್ಟಿಗೆ ಸೇರಿಸಲಾಗುತ್ತದೆ.
ರಾಜ್ಯದಲ್ಲಿ ಇಂದು ಮಿತಿ ಮೀರಿ 10.33 ಲಕ್ಷ ಹೆಚ್ಚುವರಿ ಬಿಪಿಎಲ್ ಕಾರ್ಡ್ ಹೊಂದಿದ್ದು ಅನರ್ಹರು ಕೂಡ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ. ಕೆಲವರು ಹೆಚ್ಚಿನ ಆದಾಯ ಹೊಂದಿದ್ದರು,ಆರ್ಥಿಕವಾಗಿ ಸಬಲರಾಗಿದ್ದೂ ಬಿಪಿಎಲ್ ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ.
ಜುಲೈ 1ರಿಂದ ಗ್ರಾಮ ಪಂಚಾಯತ್ ನಲ್ಲೆ ಸಿಗಲಿದೆ ಜನನ-ಮರಣ ಪ್ರಮಾಣಪತ್ರಗಳು! ಇಲ್ಲಿದೆ ಮಾಹಿತಿ
ಇಂತಹ ಕಾರ್ಡ್ ರದ್ದು ಆಗಲಿದೆ. ಅದೇ ರೀತಿ ಸರಕಾರಿ ಕೆಲಸದಲ್ಲಿ ಇದ್ದವರು, ಮೂರು ತಿಂಗಳಿಂದ ಪಡಿತರ ಪಡೆಯದೇ ಕೇವಲ ಸರಕಾರಿ ಸೌಲಭ್ಯ ಪಡೆದುಕೊಳ್ಳುವವರ ಕಾರ್ಡ್‌ಗಳನ್ನು ಅಮಾನತು ಗೊಳಿಸಲಿದೆ.
ಹಾಗಾಗಿ ಇದೀಗ ಅರ್ಹರಿಗೆ ಮಾತ್ರ ರೇಷನ್ ಕಾರ್ಡ್ ವಿತರಣೆ ಮಾಡುವ ಬಗ್ಗೆ ಆಹಾರ ಸಚಿವರು ಗುಡ್ ನ್ಯೂಸ್ ನೀಡಿದ್ದಾರೆ. ಹಾಗಾಗಿ ಶೀಘ್ರದಲ್ಲೇ ಅರ್ಜಿ ಸಲ್ಲಿಕೆ ಮಾಡಿದ್ದ ಫಲಾನುಭವಿಗಳಿಗೆ ಈ ರೇಷನ್ ಕಾರ್ಡ್ ಸಿಗಲಿದೆ.
Cancellation of fake ration cards, card distribution to eligible ration card holders soon