ಗೃಹಲಕ್ಷ್ಮಿ ಹಣ ಕಳೆದ ತಿಂಗಳು ಯಾರಿಗೆ ಬಂದಿಲ್ವೋ ಅವರಿಗೆ ಪೆಂಡಿಂಗ್ ಹಣ ಸೇರಿ ಒಟ್ಟಿಗೆ ₹4000 ಜಮೆ!
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಆಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಒಂದು ಗುಡ್ ನ್ಯೂಸ್ ನೀಡಿ, ಒಟ್ಟಿಗೆ ₹4000 ರೂಪಾಯಿ ಹಣ ಮಹಿಳೆಯರ ಖಾತೆಗೆ ವರ್ಗಾವಣೆ (Money Transfer) ಆಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಎಲ್ಲ ಮಹಿಳೆಯರಿಗಾಗಿ ಜಾರಿಗೆ ತಂದಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ (Gruha lakshmi Scheme) ಆಗಿದೆ. ಒಂದು ಮನೆಯನ್ನು ಜವಾಬ್ದಾರಿಯುತವಾಗಿ ನಡೆಸಿಕೊಂಡು ಹೋಗುವ ಹೆಣ್ಣಿಗೆ ಆರ್ಥಿಕವಾಗಿ ಸಹಾಯ ಆಗಲಿ ಎಂದು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿತು ರಾಜ್ಯ ಸರ್ಕಾರ.
ರಾಜ್ಯದ ಮಹಿಳೆಯರು ಕೂಡ ಈ ಯೋಜನೆಯ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಈಗಾಗಲೇ 1.18 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ, ಅದರ ಸೌಲಭ್ಯ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ (BPL card) ಹೊಂದಿದ್ದು, ಆ ಮಹಿಳೆ ಮನೆಯ ಮುಖ್ಯಸ್ಥೆ ಆಗಿದ್ದರೆ ಅಂಥವರ ಬ್ಯಾಂಕ್ ಖಾತೆಗೆ (Bank Account) ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ತಿಂಗಳು ₹2000 ರೂಪಾಯಿ ಹಣ ಮಹಿಳೆಯ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ವರ್ಗಾವಣೆ ಆಗುತ್ತಿದೆ.
ನಕಲಿ ರೇಷನ್ ಕಾರ್ಡ್ ರದ್ದು, ಅರ್ಹ ಪಡಿತರ ಚೀಟಿದಾರರಿಗೆ ಶೀಘ್ರದಲ್ಲೇ ಕಾರ್ಡ್ ವಿತರಣೆ! ಇಲ್ಲಿದೆ ಮಾಹಿತಿ
ಈವರೆಗೂ 10 ತಿಂಗಳುಗಳ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಬ್ಯಾಂಕ್ ಖಾತೆ ತಲುಪಿದ್ದು, 11ನೇ ಕಂತಿನ ಹಣ ಬರೋದು ಯಾವಾಗ ಎಂದು ಮಹಿಳೆಯರು ಕಾಯುತ್ತಿದ್ದಾರೆ.
ಹೌದು, ಈ ವರೆಗು 10 ಕಂತುಗಳ ಹಣ ಅಂದರೆ ಒಟ್ಟು ₹20000 ರೂಪಾಯಿಗಳು ಮಹಿಳೆಯರ ಬ್ಯಾಂಕ್ ಖಾತೆ ತಲುಪಿದೆ. ಆದರೆ ಇನ್ನೂ ಹಲವು ಮಹಿಳೆಯರಿಗೆ 10ನೇ ಕಂತಿನ ಹಣ ಇನ್ನು ಕೂಡ ಸಿಕ್ಕಿಲ್ಲ.
ಅಂಥ ಮಹಿಳೆಯರಿಗೆ ಸರ್ಕಾರದ ಕಡೆಯಿಂದ ಈಗ ಒಂದು ಬಿಗ್ ಅಪ್ಡೇಟ್ ಸಿಕ್ಕಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಆಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಒಂದು ಗುಡ್ ನ್ಯೂಸ್ ನೀಡಿ, ಒಟ್ಟಿಗೆ ₹4000 ರೂಪಾಯಿ ಹಣ ಮಹಿಳೆಯರ ಖಾತೆಗೆ ವರ್ಗಾವಣೆ (Money Transfer) ಆಗುತ್ತದೆ ಎಂದು ತಿಳಿಸಿದ್ದಾರೆ.
ಉಚಿತ ಕರೆಂಟ್ ಪಡೆಯೋಕೆ ಕೊಟ್ಟ ಆಧಾರ್ ಡೀಲಿಂಕ್ ಮಾಡೋದು ಹೇಗೆ? ಇಲ್ಲಿದೆ ಬಿಗ್ ಅಪ್ಡೇಟ್
ಹೌದು, ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಈಗ ಸಿಕ್ಕಿರುವ ಲೇಟೆಸ್ಟ್ ಅಪ್ಡೇಟ್ ನ ಅನುಸಾರ.. 11ನೇ ಕಂತಿನ ಹಣ ಈ ತಿಂಗಳು ಮುಗಿಯುವ ಒಳಗೆ ಅಂದರೆ ಜೂನ್ 30ರ ಒಳಗೆ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಬ್ಯಾಂಕ್ ಖಾತೆ (Bank Account) ತಲುಪುತ್ತದೆ.
ಹಾಗೆಯೇ 10ನೇ ಕಂತಿನ ಹಣ ಯಾರಿಗೆಲ್ಲಾ ಇನ್ನು ಪೆಂಡಿಂಗ್ ಇದೆಯೋ ಅವರಿಗೆಲ್ಲಾ ಕೂಡ ಒಟ್ಟಿಗೆ ₹4000 ಮೊತ್ತ ಅಕೌಂಟ್ ಗೆ ಜಮೆ ಆಗುತ್ತದೆ ಎಂದು ತಿಳಿಸಿದ್ದಾರೆ. ಹಾಗೆಯೇ ಪೆಂಡಿಂಗ್ ಇರುವ ಮೊತ್ತಗಳು ಕೂಡ ಕ್ಲಿಯರ್ ಆಗಲಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದಾರೆ.
ಉಚಿತ ಮನೆ ಹಂಚಿಕೆಗೆ ಅರ್ಜಿ ಆಹ್ವಾನ! ರಾಜೀವ್ ಗಾಂಧಿ ವಸತಿ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ
ಒಂದು ವೇಳೆ ಮಹಿಳೆಯರಿಗೆ ಇನ್ನು ಕೂಡ ಗೃಹಲಕ್ಷ್ಮೀ ಯೋಜನೆಯ ಹಣ ಬರುತ್ತಿಲ್ಲ ಎಂದರೆ, ಅಂಥವರು ತಾವು ಹಾಕಿರುವ ಅಪ್ಲಿಕೇಶನ್ ಸರಿ ಇದೆಯಾ ಎಂದು ಚೆಕ್ ಮಾಡಬೇಕು. ಆಧಾರ್ ಕಾರ್ಡ್ NCPI ಮ್ಯಾಪಿಂಗ್ ಆಗಿದ್ಯಾ? ಆಧಾರ್ ಗೆ ರೇಷನ್ ಕಾರ್ಡ್ ಲಿಂಕ್ ಆಗಿದ್ಯಾ? ಬ್ಯಾಂಕ್ ಅಕೌಂಟ್ kyc ಆಗಿದ್ಯಾ? ಇದೆಲ್ಲವನ್ನು ಸಹ ನೋಡಿಕೊಳ್ಳಬೇಕು.
ಇದೆಲ್ಲವೂ ಸರಿ ಇದ್ದು ಇನ್ನು ಹಣ ಬಂದಿಲ್ಲ ಎಂದರೆ, ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.
4000 together with the pending money for those who have Not received the Gruha lakshmi Scheme money