ಗೃಹಲಕ್ಷ್ಮಿ ಯೋಜನೆಯ 12ನೇ ಕಂತಿನ ಬಗ್ಗೆ ಬಿಗ್ ಅಪ್ಡೇಟ್! ಇನ್ಮುಂದೆ ಹಂತ ಹಂತವಾಗಿ ಹಣ ಬಿಡುಗಡೆ
ಜುಲೈ ತಿಂಗಳಿನಲ್ಲಿ 12ನೇ ಕಂತಿನ ಹಣ ಬಿಡುಗಡೆ ಆಗಲಿದ್ದು, ಮೊದಲ ಹಂತದಲ್ಲಿ 12 ಅಥವಾ 13 ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮೆ ಆಗಲಿದೆ
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪ್ರಮುಖ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಸಹ ಒಂದು. ಈ ಯೋಜನೆಯ ಮೂಲಕ ರಾಜ್ಯದ ಮಹಿಳಾ ಮಣಿಯರಿಗೆ ಹೆಚ್ಚಿನ ಸಹಾಯ ಆಗುತ್ತಿದೆ ಎಂದು ಹೇಳಿದರೆ ಖಂಡಿತ ತಪ್ಪಲ್ಲ.
ಪ್ರತಿ ತಿಂಗಳು ಬರುತ್ತಿಯುವ ₹2000 ರೂಪಾಯಿಗಳನ್ನು ತಮ್ಮ ಮನೆಯ ಖರ್ಚುಗಳನ್ನು ನಿಭಾಯಿಸಲು ಮಹಿಳೆಯರು ಬಳಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಈ ಹಣವನ್ನು ಕೂಡಿಟ್ಟು, ಮನೆಗೆ ಬೇಕಿರುವ ಪ್ರಮುಖ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ.
ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಯಿತು. ಈವರೆಗೂ ಗೃಹಲಕ್ಷ್ಮಿ ಯೋಜನೆಯ ಬಹುತೇಕ 10 ಕಂತುಗಳ ಹಣ ಮಹಿಳೆಯರ ಖಾತೆಗೆ ವರ್ಗಾವಣೆ ಆಗಿದೆ. 1 ಕೋಟಿಗಿಂತ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ, ಈ ಯೋಜನೆಯ ಹಣವನ್ನು ಪಡೆಯುತ್ತಿದ್ದಾರೆ. ಆದರೆ ಇನ್ನೂ ಕೂಡ ಹಲವು ಮಹಿಳೆಯರಿಗೆ ಯೋಜನೆಯ ಹಣ ಪ್ರತಿ ತಿಂಗಳು ತಲುಪುತ್ತಿಲ್ಲ.
ಕೃಷಿ ಭೂಮಿಯ ಸರ್ವೇ ನಂಬರ್ ಬಳಸಿ ಬರ ಪರಿಹಾರ ಹಣ ಎಷ್ಟು ಬಂದಿದೆ ಸ್ಟೇಟಸ್ ತಿಳಿಯಿರಿ!
ಅದಕ್ಕೆ ಪ್ರಮುಖ ಕಾರಣ ಮಹಿಳೆಯರು ಅರ್ಜಿ ಸಲ್ಲಿಸುವ ವೇಳೆ ಸರಿಯಾದ ದಾಖಲೆಗಳನ್ನು ನೀಡದೇ ಇರುವುದು ಆಗಿದೆ. ಆಧಾರ್ ಕಾರ್ಡ್, ಬ್ಯಾಂಕ್ ಡೀಟೇಲ್ಸ್ ಮತ್ತು ರೇಷನ್ ಕಾರ್ಡ್ ಈ ಮೂರರಲ್ಲಿ ಇರುವ ಮಾಹಿತಿ ಒಂದೇ ಆಗಿರಬೇಕು, ಹಾಗೆಯೇ ಅಪ್ಡೇಟ್ ಆಗಿರಬೇಕು, kyc ಆಗಿರಬೇಕು, ncpi ಮ್ಯಾಪಿಂಗ್ ಆಗಿರಬೇಕು. ಇದಿಷ್ಟು ಕೆಲಸಗಳು ಆಗಿರುವವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗೆ (Bank Account) ಬರುತ್ತದೆ..
ಲೋಕಸಭಾ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಸರ್ಕಾರ ಅಂದುಕೊಂಡ ಹಾಗೆ ಗೆಲುವು ಸಾಧಿಸದ ಕಾರಣ, ಈ ಯೋಜನೆಗಳು ರದ್ದಾಗಬಹುದು ಎಂದು ಹೇಳಲಾಗಿತ್ತು, ಆದರೆ ಸರ್ಕಾರವೇ ತಿಳಿಸಿರುವ ಹಾಗೆ ಈ ಯೋಜನೆಗಳು ರದ್ದಾಗುವುದಿಲ್ಲ. ಸರ್ಕಾರ ಅಧಿಕಾರದಲ್ಲಿ ಇರುವಷ್ಟು ದಿವಸ ಕೂಡ, ಈ ಯೋಜನೆಗಳು ಜನರಿಗೆ ತಲುಪುತ್ತದೆ ಎಂದು ತಿಳಿಸಿದ್ದಾರೆ. ಇಂದು ಮುಖ್ಯವಾಗಿ ನಿಮಗೆ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಅಪ್ಡೇಟ್ ತಿಳಿಸಿಕೊಡಲಿದ್ದೇವೆ.
ಗೃಹಲಕ್ಷ್ಮಿ ಹಣ ಕಳೆದ ತಿಂಗಳು ಯಾರಿಗೆ ಬಂದಿಲ್ವೋ ಅವರಿಗೆ ಪೆಂಡಿಂಗ್ ಹಣ ಸೇರಿ ಒಟ್ಟಿಗೆ ₹4000 ಜಮೆ!
ಈ ಅಪ್ಡೇಟ್ ಗೃಹಲಕ್ಷ್ಮಿ ಯೋಜನೆಯ 12 ನೇ ಕಂತಿನ ಬಗ್ಗೆ ಆಗಿದ್ದು, ಇತ್ತೀಚಿನ ದಿನಗಳಲ್ಲಿ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಸಚಿವೆ ಆಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಾವೇ ಖುದ್ದು ಈ ಯೋಜನೆಯಲ್ಲಿ ಆಗಿರುವ ಸಮಸ್ಯೆಗಳನ್ನು ಪರಿಹರಿಸಲು ಮುಂದೆ ಬಂದಿದ್ದಾರೆ.
ನಕಲಿ ರೇಷನ್ ಕಾರ್ಡ್ ರದ್ದು, ಅರ್ಹ ಪಡಿತರ ಚೀಟಿದಾರರಿಗೆ ಶೀಘ್ರದಲ್ಲೇ ಕಾರ್ಡ್ ವಿತರಣೆ! ಇಲ್ಲಿದೆ ಮಾಹಿತಿ
ಅವರೇ 12ನೇ ಕಂತಿನ ಹಣದ ಬಗ್ಗೆ ಈಗ ಮಾಹಿತಿ ನೀಡಿದ್ದು, ಜುಲೈ ತಿಂಗಳಿನಲ್ಲಿ 12ನೇ ಕಂತಿನ ಹಣ ಬಿಡುಗಡೆ ಆಗಲಿದ್ದು, ಮೊದಲ ಹಂತದಲ್ಲಿ 12 ಅಥವಾ 13 ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮೆ ಆಗಲಿದೆ, ನಂತರ ಹಂತ ಹಂತವಾಗಿ ಎಲ್ಲಾ ಜಿಲ್ಲೆಗಳಿಗೂ ಸಹ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಆಗಲಿದೆ.
Big update about the 12th installment of Gruha Lakshmi Yojana