ಈ ರೂಲ್ಸ್ ಪಾಲಿಸಿದರೆ ಮಾತ್ರ ಜೂನ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ಸಿಗೋದು! ಹೊಸ ಅಪ್ಡೇಟ್
ಈ ಕೆಲವು ಕೆಲಸಗಳನ್ನು ಕಡ್ಡಾಯವಾಗಿ ಮಾಡಲೇಬೇಕು. ಆಗ ಅವರಿಗೆ ಅನ್ನಭಾಗ್ಯ ಯೋಜನೆಯ ಹಣ ಬಂದೆ ಬರುತ್ತದೆ. ಸರ್ಕಾರದ ಈ ಹೊಸ ರೂಲ್ಸ್ ಗಳು ಏನೇನು ಎಂದು ತಿಳಿಯೋಣ
ರಾಜ್ಯ ಸರ್ಕಾರ ನಮ್ಮ ಜನರಿಗಾಗಿ ಜಾರಿಗೆ ತಂದಿರುವ ಪ್ರಮುಖ ಯೋಜನೆ ಅನ್ನಭಾಗ್ಯ ಯೋಜನೆ (Annabhagya Scheme) ಆಗಿದೆ. ಈ ಯೋಜನೆಯ ಅಡಿಯಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಗಳಲ್ಲಿ ಹೆಸರು ಇರುವ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಲಾಗಿತ್ತು.
ಆದರೆ ಅಷ್ಟು ಅಕ್ಕಿಯನ್ನು ಹೊಂದಿಸಲು ಸರ್ಕಾರದಿಂದ ಸಾಧ್ಯವಾಗಲಿಲ್ಲ. ಹಾಗಾಗಿ 5 ಕೆಜಿ ಅಕ್ಕಿ ನೀಡಿ, ಇನ್ನು 5 ಕೆಜಿ ಅಕ್ಕಿಯ ಬದಲಾಗಿ ಹಣ ನೀಡಲಾಗುತ್ತಿದೆ..
ಹೌದು, ಒಬ್ಬ ವೈಕ್ತಿಗೆ 5 ಕೆಜಿ ಅಕ್ಕಿ, ಇನ್ನು 5 ಕೆಜಿ ಅಕ್ಕಿಯ ಬದಲಾಗಿ 1ಕೆಜಿಗೆ 34 ರೂಪಾಯಿಯ ಹಾಗೆ 5 ಕೆಜಿಗೆ 170 ರೂಪಾಯಿಗಳನ್ನು ರೇಷನ್ ಕಾರ್ಡ್ ನಲ್ಲಿ ಮನೆಯ ಮುಖ್ಯಸ್ಥರು ಎಂದು ಹೆಸರು ಇರುವ ವ್ಯಕ್ತಿಯ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ.
ಫ್ರೀ ಅಂತ ಬೇಕಾಬಿಟ್ಟಿ ಕರೆಂಟ್ ಬಳಸೋಕು ಮುನ್ನ ಎಚ್ಚರ, ಗೃಹಜ್ಯೋತಿ ಯೋಜನೆಗೆ ಹೊಸ ರೂಲ್ಸ್
ಒಂದು ಕುಟುಂಬದಲ್ಲಿ 5 ಸದಸ್ಯರಿದ್ದರೆ ಅವರಿಗೆ ತಿಂಗಳಿಗೆ ₹850 ರೂಪಾಯಿಗಳು ಅನ್ನಭಾಗ್ಯ ಯೋಜನೆಯ ಮೂಲಕ ಸಿಗುತ್ತಿದೆ. ಆದರೆ ಇನ್ನೂ ಕೂಡ ಎಲ್ಲರಿಗೂ ಹಣ ಬರುತ್ತಿಲ್ಲ.
ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಸರ್ಕಾರಕ್ಕೆ ಕೂಡ ಅನ್ನಭಾಗ್ಯ ಯೋಜನೆಯ ಹಣವನ್ನು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಅದು ಪೆಂಡಿಂಗ್ ನಲ್ಲಿಯೇ ಇದೆ, ಜೊತೆಗೆ ಇನ್ನು ಕೆಲವರಿಗೆ ಅನ್ನಭಾಗ್ಯ ಯೋಜನೆಯ ಹಣ ಬಂದೇ ಇಲ್ಲ.
ಅಂಥವರು ಈ ಕೆಲವು ಕೆಲಸಗಳನ್ನು ಕಡ್ಡಾಯವಾಗಿ ಮಾಡಲೇಬೇಕು. ಆಗ ಅವರಿಗೆ ಅನ್ನಭಾಗ್ಯ ಯೋಜನೆಯ ಹಣ ಬಂದೆ ಬರುತ್ತದೆ. ಸರ್ಕಾರದ ಈ ಹೊಸ ರೂಲ್ಸ್ ಗಳು ಏನೇನು ಎಂದು ತಿಳಿಯೋಣ…
ಅನ್ನಭಾಗ್ಯ ಯೋಜನೆಯ ಹಣ ಇನ್ನು ನಿಮ್ಮ ಅಕೌಂಟ್ ಗೆ ಬಂದಿಲ್ವಾ? ಹಾಗಿದ್ದಲ್ಲಿ ಈ ಕೆಲಸ ಮಾಡಿ
ಸರ್ಕಾರದಿಂದ ಹೊಸ ರೂಲ್ಸ್:
*ರೇಷನ್ ಕಾರ್ಡ್ ಇಕೆವೈಸಿ (Ration Card E-Kyc: ಅನ್ನಭಾಗ್ಯ ಯೋಜನೆಯ ಹಣ ನಿಮಗೆ ತಲುಪಬೇಕು ಎಂದರೆ ಮೊದಲು ನಿಮ್ಮ ಮನೆಯ ಎಲ್ಲಾ ಸದಸ್ಯರು ಸಹ ರೇಷನ್ ಕಾರ್ಡ್ ಗೆ ಇಕೆವೈಸಿ ಮಾಡಿಸಿರಬೇಕು. ಹಾಗೆಯೇ ಎಲ್ಲರ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಗೆ ಲಿಂಕ್ ಆಗಿರಬೇಕು. ಇದು ಸರ್ಕಾರ ನಿಯಮ ಆಗಿದೆ.
*ಆಧಾರ್ ಅಪ್ಡೇಟ್ (Update Aadhaar): ರೇಷನ್ ಕಾರ್ಡ್ ನಲ್ಲಿ ಇರುವ ಮನೆಯ ಮುಖ್ಯಸ್ಥರು ಒಂದು ವೇಳೆ 10 ವರ್ಷಗಳಿಂದ ಆಧಾರ್ ಅಪ್ಡೇಟ್ ಮಾಡಿಸಿಲ್ಲ ಎಂದರೆ, ಕೂಡಲೇ ಮಾಡಿಸಿ. ಆಗ ಮಾತ್ರ ನೀವಿ ಸರ್ಕಾರದ ಸೌಲಭ್ಯಗಳನ್ನು ಪಡೆಯಬಹುದು.
ಪಡಿತರ ಪಡೆಯಿರಿ (Get Ration): ಒಂದು ವೇಳೆ ನೀವು ಕಳೆದ 6 ತಿಂಗಳ ಸಮಯದಿಂದ ರೇಷನ್ ಕಾರ್ಡ್ ಇದ್ದು ಅದರಿಂದ ಪ್ರತಿತಿಂಗಳು ರೇಷನ್ ಪಡೆಯುತ್ತಿಲ್ಲ ಎಂದರೆ, ಅನ್ನಭಾಗ್ಯ ಯೋಜನೆಯಾ ಹಣ ಬರುವುದಿಲ್ಲ. ಹಾಗಾಗಿ ರೇಷನ್ ಪಡೆಯುವುದಕ್ಕೆ ಶುರು ಮಾಡಿ.
*ಬ್ಯಾಂಕ್ ಅಕೌಂಟ್ (Bank Account): ಮನೆಯ ಮುಖ್ಯಸ್ಥರ ಬ್ಯಾಂಕ್ ಅಕೌಂಟ್ ಅನ್ನು ರೇಷನ್ ಕಾರ್ಡ್ ಗೆ ಲಿಂಕ್ ಮಾಡಿ, NCPI ಮ್ಯಾಪಿಂಗ್ ಮಾಡಿಸುವುದು ಕಡ್ಡಾಯ.
ಗೃಹಲಕ್ಷ್ಮಿ ಯೋಜನೆಯ 12ನೇ ಕಂತಿನ ಬಗ್ಗೆ ಬಿಗ್ ಅಪ್ಡೇಟ್! ಇನ್ಮುಂದೆ ಹಂತ ಹಂತವಾಗಿ ಹಣ ಬಿಡುಗಡೆ
ಇದಿಷ್ಟು ಕೆಲಸ ಮಾಡಿದರೆ, ನಿಮಗೇ ಅನ್ನಭಾಗ್ಯ ಯೋಜನೆಯ ಹಣ ಖಂಡಿತವಾಗಿ ಬ್ಯಾಂಕ್ ಅಕೌಂಟ್ ಗೆ ಬರುತ್ತದೆ.
If you follow these rules, you will get money for Annabhagya Yojana for the month of June