ಬೆಂಗಳೂರು: ನಟ ಅಂಬರೀಶ್ ಅವರ ಪುಣ್ಯಸ್ಮರಣೆ, ಪೂಜೆ ಸಲ್ಲಿಸಿದ ಸುಮಲತಾ

Story Highlights

ನಟ ಅಂಬರೀಶ್ ಅವರ ಪುಣ್ಯಸ್ಮರಣೆ ಭಾನುವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು, ಪತ್ನಿ ಸುಮಲತಾ ಹಾಗೂ ಅಭಿಮಾನಿಗಳು ನೆರೆದಿದ್ದರು

ಬೆಂಗಳೂರು (Bengaluru): ಕನ್ನಡದ ದಿವಂಗತ ನಟ, ರಾಜಕಾರಣಿ ಅಂಬರೀಶ್ (Actor Ambareesh) ಅವರ ಪುಣ್ಯಸ್ಮರಣೆ ಭಾನುವಾರ ನಡೆಯಿತು. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಅವರ ಸಮಾಧಿಗೆ ಹಿರಿಯ ನಟಿ ಹಾಗೂ ಅಂಬರೀಶ್ ಪತ್ನಿ ಸುಮಲತಾ ನಮನ ಸಲ್ಲಿಸಿದರು.

ನೂರಾರು ಅಭಿಮಾನಿಗಳು, ಸಿನಿಮಾ ತಾರೆಯರು ನೆರೆದಿದ್ದರು. ಸುಮಲತಾ (Sumalatha) ಎಕ್ಸ್ ನಲ್ಲಿ ನೀವು ಸದಾ ಇರುತ್ತೀರಿ… ಎಂದಿಗೂ ಮರೆಯಲಾಗದ ನೆನಪು ನೀವು ಎಂದು ಪೋಸ್ಟ್ ಮಾಡಿದ್ದಾರೆ.

ಅಂಬರೀಶ್ ನಿಧನದ ನಂತರ ತಮ್ಮ ಮನೆಯಲ್ಲಿ ಪುಟ್ಟ ರೆಬೆಲ್‌ಸ್ಟಾರ್ (ಮೊಮ್ಮಗ) ಇರುವುದಕ್ಕೆ ತುಂಬಾ ಖುಷಿಯಾಗಿರುವುದಾಗಿ ತಿಳಿಸಿದ್ದಾರೆ.

Actor Ambareesh 6th death anniversary family tributes memories

English Summary
Related Stories