ರಾಜ್ಯದ ಎಲ್ಲಾ ರೈತರಿಗೆ ಸರಕಾರದಿಂದ ಬಂಪರ್ ಯೋಜನೆ, ಸಿಗಲಿದೆ ₹10,000 ರೂಪಾಯಿ ಉಚಿತ!

Story Highlights

ರೈತ ಸಿರಿ ಯೋಜನೆಗೆ ಅರ್ಹತೆ ಪಡೆಯುವ ರೈತರಿಗೆ ₹10,000 ರೂಪಾಯಿ ಆದಾಯ ಸಿಗುತ್ತದೆ. ಹಾಗಿದ್ದಲ್ಲಿ ಈ ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು, ಅರ್ಜಿ ಸಲ್ಲಿಸಲು ಬೇಕಿರುವ ಅರ್ಹತೆ ಏನು? ಎಲ್ಲವನ್ನು ತಿಳಿಸುತ್ತೇವೆ ನೋಡಿ

ನಮ್ಮ ದೇಶದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಕೂಡ ರೈತರಿಗೆ ಅನುಕೂಲ ಆಗುವ ಹಾಗೆ ಅನೇಕ ಯೋಜನೆಗಳನ್ನು (Schemes For Farmers) ಜಾರಿಗೆ ತರುತ್ತಿದ್ದಾರೆ. ಕೃಷಿ ಕೆಲಸ ಮಾಡುವುದು ಸುಲಭವಲ್ಲ, ಇದರ ಹಿಂದೆ ಹೆಚ್ಚು ಪರಿಶ್ರಮವಿದೆ, ಬಿತ್ತನೆ ಬೀಜ ಖರೀದಿ ಮಾಡುವುದು, ಕೃಷಿಗೆ ಬೇಕಾದ ಉಪಕರಣಗಳನ್ನು ಖರೀದಿ ಮಾಡುವುದು, ರಸಗೊಬ್ಬರ ಖರೀದಿ, ಕೃಷಿ ಪರಿಕರ ವಿತರಣೆ ಇದೆಲ್ಲವನ್ನು ಸಹ ಸರ್ಕಾರ ಕೊಡುತ್ತಿದೆ.

ಹಾಗೆಯೇ ಬರ ಪರಿಹಾರವನ್ನು ಕೂಡ ಕೊಡುತ್ತಲಿದೆ. ಇದೆಲ್ಲದರ ಜೊತೆಗೆ ಈಗ ಸಿದ್ದರಾಮಯ್ಯ ಅವರ ಸರ್ಕಾರ ರೈತರಿಗೆ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತರಲಿದೆ.

ನಮ್ಮ ರಾಜ್ಯ ಹಾಗೂ ನಮ್ಮ ದೇಶದಲ್ಲಿ ಕೃಷಿ ಕೆಲಸವೇ ಪ್ರಮುಖವಾದದ್ದು, ರೈತರು ಕೃಷಿ ಕೆಲಸ (Agriculture) ಮಾಡಿದರೆ ಮಾತ್ರ ನಮಗೆ ಪ್ರತಿದಿನ ಊಟ ಮಾಡುವುದಕ್ಕೆ ಆಹಾರ ಧಾನ್ಯಗಳು ಸಿಗುತ್ತದೆ. ಆದರೆ ಎಲ್ಲರಿಗಿಂತ ಕಡಿಮೆ ಸಂಪಾದನೆ ಮಾಡುತ್ತಾ, ಕಷ್ಟಪಡುವುದು ಕೂಡ ರೈತರೇ.

ಈ ಕಾರಣಕ್ಕೆ ರೈತರು ಕೃಷಿ ಕೆಲಸದಿಂದ ಹೊರಬರುತ್ತಿದ್ದಾರೆ, ಹಾಗಾಗಿ ಸರ್ಕಾರ ಈಗ ರೈತರಿಗೆ ಸಹಾಯ ಆಗುವ ಹಾಗೆ, ಯೋಜನೆಯನ್ನು ಜಾರಿಗೆ ತರುತ್ತಲಿದೆ. ಆ ಯೋಜನೆಯ ಬಗ್ಗೆ ಇಂದು ನಿಮಗೆ ಪೂರ್ತಿ ಮಾಹಿತಿ ನೀಡಲಿದ್ದೇವೆ…

ರೇಷನ್ ಕಾರ್ಡ್ ನಲ್ಲಿ ಹೆಸರು ಬಿಟ್ಟು ಹೋಗಿದ್ರೆ ಅಥವಾ ಕ್ಯಾನ್ಸಲ್ ಆಗಿದ್ರೆ ಈ ರೀತಿಯಾಗಿ ಸೇರಿಸಿಕೊಳ್ಳಿ!

ರೈತ ಸಿರಿ ಯೋಜನೆ:

ರಾಜ್ಯ ಸರ್ಕಾರ ಇದೀಗ ರೈತರಿಗಾಗಿ ಹೊಸದಾಗಿ ಜಾರಿಗೆ ತಂದಿರುವ ಯೋಜನೆಯ ಹೆಸರು ರೈತ ಸಿರಿ ಯೋಜನೆ ಆಗಿದೆ. ರಾಜ್ಯದ ಎಲ್ಲಾ ರೈತರು ಕೂಡ ಈ ಯೋಜನೆಗೆ ಅರ್ಹತೆ ಪಡೆಯಲಿದ್ದು, ಅವರೆಲ್ಲರೂ ಕೂಡ ಈ ಯೋಜನೆಗೆ ಅಪ್ಲೈ ಮಾಡಬಹುದು.

ರೈತ ಸಿರಿ ಯೋಜನೆಗೆ ಅರ್ಹತೆ ಪಡೆಯುವ ರೈತರಿಗೆ ₹10,000 ರೂಪಾಯಿ ಆದಾಯ ಸಿಗುತ್ತದೆ. ಹಾಗಿದ್ದಲ್ಲಿ ಈ ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು, ಅರ್ಜಿ ಸಲ್ಲಿಸಲು ಬೇಕಿರುವ ಅರ್ಹತೆ ಏನು? ಎಲ್ಲವನ್ನು ತಿಳಿಸುತ್ತೇವೆ ನೋಡಿ..

ಈ ಮೊದಲೇ ಜಾರಿಯಲ್ಲಿದ್ದ ಯೋಜನೆ:

ರೈತ ಸಿರಿ ಯೋಜನೆ ಈಗ ಮೊದಲ ಸಾರಿ ಜಾರಿಗೆ ಬಂದಿರುವ ಯೋಜನೆ ಅಲ್ಲ, 2019-20ರಲ್ಲೆ ಜಾರಿಗೆ ಬಂದಿತ್ತು, ಆದರೆ ಜೇಲಸ ಸಮಯದ ನಂತರ ಈ ಯೋಜನೆಯನ್ನು ನಿಲ್ಲಿಸಲಾಗಿತ್ತು. ಆದರೆ ಈ ವರ್ಷ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಹಣದ ಸಹಾಯದ ಜೊತೆಗೆ ನೀರಾವರಿ ಸೌಲಭ್ಯವನ್ನು ಕೂಡ ನೀಡುವ ಯೋಜನೆ ಹೊಂದಿದೆ ಸರ್ಕಾರ. ಇದರಲ್ಲಿ ನೀವು ವ್ಯವಸಾಯಕ್ಕೆ ಅವಶ್ಯಕತೆ ಆಗಿರುವ, ಬದು ನಿರ್ಮಾಣ, ಕೃಷಿ ಹೊಂಡ ಇವುಗಳನ್ನು ನಿರ್ಮಾಣ ಮಾಡುವುದಕ್ಕೆ ಸಹಾಯ ಮಾಡುತ್ತದೆ.

ಬೇಕಿರುವ ಅರ್ಹತೆಗಳು:

*ನಮ್ಮ ಕರ್ನಾಟಕ ರಾಜ್ಯದಲ್ಲಿ ವಾಸವಿರುವ ರೈತರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಪಡೆಯುತ್ತಾರೆ.

*ಯಾವೆಲ್ಲಾ ರೈತರು ರಾಗಿ ಬೆಳೆಯುತ್ತಿದ್ದಾರೋ, ಅವರಿಗೆ ಮೊದಲ ಆದ್ಯತೆ ಕೊಡಲಾಗುತ್ತದೆ.

*ಅರ್ಜಿ ಸಲ್ಲಿಸುವ ರೈತರ ಹತ್ತಿರ ಮುಖ್ಯವಾಗಿ 1 ಹೆಕ್ಟರ್ ಭೂಮಿ ಆದರೂ ಇರಬೇಕು.

*ಅರ್ಜಿ ಸಲ್ಲಿಕೆಗೆ ರೈತರ ಬಳಿ ಆಧಾರ್ ಕಾರ್ಡ್, ಜಮೀನಿನ ದಾಖಲೆಗಳು (Property Documents), ನಿವಾಸ ಪತ್ರ, ಪಹಣಿ ಪತ್ರದ ಜೆರಾಕ್ಸ್ ಕಾಪಿ, ಬ್ಯಾಂಕ್ ಅಕೌಂಟ್ ಡೀಟೇಲ್ಸ್, ರೇಷನ್ ಕಾರ್ಡ್, ವಾಸಸ್ಥಳ ಪ್ರಮಾಣ ಪತ್ರ, ಪಾಸ್ ಪೋರ್ಟ್ ಸೈಜ್ ಫೋಟೋ, ಇದಿಷ್ಟು ಬೇಕಾಗುತ್ತದೆ.

*ಯೋಜನೆಯ ಬಗ್ಗೆ ಪೂರ್ತಿ ಮಾಹಿತಿ ಪಡೆಯಲು, ನಿಮ್ಮ ಮನೆಗೆ ಹತ್ತಿರ ಇರುವ ಕೃಷಿ ಕೇಂದ್ರಕ್ಕೆ ಭೇಟಿ ನೀಡಿ.

All the farmers of the state will get a bumper gift from the government