ರೇಷನ್ ಕಾರ್ಡ್ ನಲ್ಲಿ ಹೆಸರು ಬಿಟ್ಟು ಹೋಗಿದ್ರೆ ಅಥವಾ ಕ್ಯಾನ್ಸಲ್ ಆಗಿದ್ರೆ ಈ ರೀತಿಯಾಗಿ ಸೇರಿಸಿಕೊಳ್ಳಿ!
ಈಗ ನಮ್ಮ ರಾಜ್ಯದ ಜನರು ಸರ್ಕಾರದ ಎಲ್ಲಾ ಗ್ಯಾರೆಂಟಿ ಯೋಜನೆಗಳ ಸೌಲಭ್ಯ ಪಡೆದುಕೊಳ್ಳಬೇಕು ಎಂದರೆ ಅವರ ಬಳಿ ಬಿಪಿಎಲ್ ರೇಶನ್ ಕಾರ್ಡ್ (BPL Ration Card) ಇರಬೇಕು. ಬಿಪಿಎಲ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಸಾಕಷ್ಟು ಉಪಯೋಗಗಳು ಸಿಗುತ್ತದೆ. ಬಡತನದಲ್ಲಿ ಇರುವವರ ಕಷ್ಟ ಕಡಿಮೆ ಮಾಡಲು ಸರ್ಕಾರ ಈ ಸೌಲಭ್ಯವನ್ನು ಕೊಡುತ್ತಿದೆ.
ಎರಡು ಥರದ ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡುತ್ತಾ ಬರಲಾಗಿದೆ, ಒಂದು ಬಿಪಿಎಲ್ ರೇಷನ್ ಕಾರ್ಡ್, ಇನ್ನೊಂದು ಎಪಿಎಲ್ ರೇಷನ್ ಕಾರ್ಡ್.
ಬಡತನದ ರೇಖೆಗೆ ಬರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು (BPL Card) ನೀಡಲಾಗುತ್ತದೆ. ಬಡತನದ ರೇಖೆಗಿಂತ ಜಾಸ್ತಿ ಇರುವವರಿಗೆ ಎಪಿಎಲ್ ರೇಷನ್ ಕಾರ್ಡ್ ಕೊಡಲಾಗುತ್ತದೆ. ಬಿಪಿಎಲ್ ರೇಷನ್ ಕಾರ್ಡ್ ಇರುವವರಿಗೆ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳು, ಉಚಿತ ರೇಷನ್, ಉಚಿತ ಆರೋಗ್ಯ ಸೇವೆ, ಸರ್ಕಾರದ ಇನ್ನಿತರ ಯೋಜನೆಗಳು ಈ ಎಲ್ಲದರ ಸೌಲಭ್ಯ ಕೂಡ ಸಿಗುತ್ತದೆ. ಇದರಿಂದ ನಿಮ್ಮ ಬದುಕು ಸಾಗಿಸುವುದಕ್ಕೆ ಸುಲಭ ಆಗುತ್ತದೆ ಎಂದು ಹೇಳಿದರೆ ಖಂಡಿತ ತಪ್ಪಲ್ಲ.
ಕೊನೆಗೂ ಗೃಹಲಕ್ಷ್ಮಿ ಪೆಂಡಿಂಗ್ ಹಣ ಬಿಡುಗಡೆ! ಈ ಜಿಲ್ಲೆಗಳಿಗೆ ಎರಡು ತಿಂಗಳ ₹4,000 ಒಟ್ಟಿಗೆ ವರ್ಗಾವಣೆ
ಆದರೆ ಕೆಲವೊಮ್ಮೆ ಸರ್ಕಾರದಿಂದ ರೇಷನ್ ಕಾರ್ಡ್ ಕೊಡುವ ವೇಳೆ ಸಮಸ್ಯೆ ಆಗಿರುತ್ತದೆ, ಸರಿಯಾಗಿ ಹೆಸರು ಬಂದಿರುವುದಿಲ್ಲ, ಅಥವಾ ತಾಂತ್ರಿಕ ದೋಷದ ಕಾರಣ ನಿಮ್ಮ ಮನೆಯವರ ಹೆಸರನ್ನು ರೇಷನ್ ಕಾರ್ಡ್ ಇಂದ ಕೈಬಿಟ್ಟಿದ್ದರೆ, ಅಂಥ ಸಮಯದಲ್ಲಿ ನೀವು ಹೆದರುವ ಅಥವಾ ಟೆನ್ಷನ್ ಮಾಡಿಕೊಳ್ಳುವ ಅಗತ್ಯವಿಲ್ಲ,
ಸರ್ಕಾರ ಇದಕ್ಕೆ ಒಂದು ದಾರಿ ತೋರಿಸಿದ್ದು, ಈ ಕ್ರಮಗಳನ್ನು ಅನುಸರಿಸುವ ಮೂಲಕ ನಿಮ್ಮ ರೇಷನ್ ಕಾರ್ಡ್ ಗೆ ಸದಸ್ಯರ ಹೆಸರನ್ನು ಸೇರಿಸಿಕೊಳ್ಳಬಹುದು. ಅದು ಹೇಗೆ ಎಂದು ಸಂಪೂರ್ಣವಾಗಿ ತಿಳಿಯೋಣ ಬನ್ನಿ..
ಈ ರೀತಿ ಮಾಡಿ:
ಮೊದಲಿಗೆ ನೀವು nfsa.gov.in/Default.aspx ಈ ಲಿಂಕ್ ಓಪನ್ ಮಾಡಿ, ಇದರಲ್ಲಿ ರೇಷನ್ ಕಾರ್ಡ್ ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ. ನಂತರ ರಾಜ್ಯದ ಪೋರ್ಟಲ್ ನಲ್ಲಿ ರೇಷನ್ ಕಾರ್ಡ್ ಎನ್ನುವ ಆಪ್ಶನ್ ಇರುತ್ತದೆ, ಅದನ್ನು ಸೆಲೆಕ್ಟ್ ಮಾಡಿ.
ನಂತರ ನಿಮ್ಮ ರಾಜ್ಯ, ತಾಲ್ಲೂಕು, ಜಿಲ್ಲೆ, ಹೋಬಳಿ ಈ ಎಲ್ಲಾ ಮಾಹಿತಿಯನ್ನು ಪೋರ್ಟಲ್ ನಲ್ಲಿ ಎಂಟರ್ ಮಾಡಿ, ಇದರ ಜೊತೆಗೆ ನೀವು ಯಾವ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ತೆಗೆದುಕೊಳ್ಳುತ್ತೀರೋ, ಅದರ ಮಾಹಿತಿಯನ್ನು ಕೂಡ ಕೊಡಿ. ಈಗ ಒಂದು ಲಿಸ್ಟ್ ಬರುತ್ತದೆ, ಅದರಲ್ಲಿ ನಿಮ್ಮ ಹೆಸರು ಇಲ್ಲ ಎಂದರೆ, ನಿಮ್ಮ ಹೆಸರನ್ನು ಕ್ಯಾನ್ಸಲ್ ಮಾಡಲಾಗಿರುತ್ತದೆ.
ಈ ರೀತಿ ಆಗಿದ್ದರೆ, ಆತಂಕ ಪಡುವುದು ಬೇಡ, ನಿಮ್ಮ ಹತ್ತಿರದ ಆಹಾರ ಇಲಾಖೆಯ ಕಚೇರಿಗೆ ಭೇಟಿ ನೀಡಿ, ನಡೆದಿರುವ ವಿಷಯವನ್ನು ಅವರಿಗೆ ತಿಳಿಸಿ, ಅವರು ನಿಮಗೆ ಒಂದು ಫಾರ್ಮ್ ಕೋಡುತ್ತಾರೆ, ಅದನ್ನು ಫಿಲ್ ಮಾಡಿ, ಜೊತೆಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಕೂಡ ನೀಡಿ.
ನೀವು ನೀಡಿರುವ ಎಲ್ಲಾ ಮಾಹಿತಿಗಳು ಸರಿ ಇದೆ ಎಂದರೆ, ನಿಮಗೆ ಹೊಸ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಹಾಗಾಗಿ ಭಯ ಪಡುವ ಅವಶ್ಯಕತೆ ಖಂಡಿತ ಇಲ್ಲ.
If the name is left out or canceled in the ration card, add it like this