ಕುಸಿತದ ಹಂತದಲ್ಲಿ ಬೆಂಗಳೂರಿನ ಮತ್ತೊಂದು ಕಟ್ಟಡ, ಕೂಡಲೇ ಕೆಡವಲು ಸೂಚನೆ
ಬೆಂಗಳೂರು ಕಟ್ಟಡವೊಂದು ಒಂದು ಕಡೆ ವಾಲಿ ಕೊಂಡಿದೆ. ಯಾವುದೇ ಕ್ಷಣದಲ್ಲಿ ಬೀಳುವ ಅಪಾಯವಿದೆ. ಕಟ್ಟಡ ಯಾವುದೇ ಕ್ಷಣದಲ್ಲಿ ಬೀಳುವ ಆತಂಕ ಶುರುವಾಗಿದೆ.
ಬೆಂಗಳೂರು (Bengaluru): ನಗರದ ಕೃಷ್ಣರಾಜಪುರದಲ್ಲಿ (Krishnarajapuram) ಮತ್ತೊಂದು ಬೃಹತ್ ಕಟ್ಟಡ ಕುಸಿದು ಬೀಳಲು ಸಿದ್ಧವಾಗಿದ್ದು, ಸ್ಥಳೀಯರಿಗೆ ನಿದ್ದೆಯಿಲ್ಲದಂತಾಗಿದೆ. ಐದು ಅಂತಸ್ತಿನ ಕಟ್ಟಡ ಒಂದೆಡೆ ವಾಲುತ್ತಿದೆ. ನಂಜಪ್ಪ ಗಾರ್ಡನ್ ನ ಜನನಿಬಿಡ 4ನೇ ಕ್ರಾಸ್ ನಲ್ಲಿ ಪುಟ್ಟಪ್ಪ ಎಂಬ ವ್ಯಕ್ತಿ ಈ ಬಹುಮಹಡಿ ಕಟ್ಟಡವನ್ನು ನಿರ್ಮಿಸಿದ್ದಾರೆ.
ಆದರೆ ಅದು ಒಂದು ಕಡೆ ವಾಲಿ ಕೊಂಡಿದೆ. ಯಾವುದೇ ಕ್ಷಣದಲ್ಲಿ ಬೀಳುವ ಅಪಾಯವಿದೆ. ಕಳಪೆ ಕಾಮಗಾರಿ ಅನುಮಾನ ವ್ಯಕ್ತವಾಗಿದ್ದು, ಕಟ್ಟಡ ಯಾವುದೇ ಕ್ಷಣದಲ್ಲಿ ಬೀಳುವ ಆತಂಕ ಶುರುವಾಗಿದೆ. ಈ ಬಗ್ಗೆ ಸ್ಥಳೀಯರು ಕೂಡ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಮನೆಯ ಮಾಲಿಕನಿಗೆ ಕಟ್ಟಡ ಕೆಡವಲು ಸೂಚನೆ ನೀಡಲಾಗಿದೆ.
ಅಧಿಕಾರಿಗಳ ಒತ್ತಡಕ್ಕೆ ಮಣಿದು ಮಾಲೀಕರು ಆ ಕಟ್ಟಡದಲ್ಲಿ ಇದ್ದ ಕುಟುಂಬಗಳನ್ನು ಬೇರೆ ಕಡೆ ಸ್ಥಳಾಂತರಿಸಿದರು. ಕಟ್ಟಡಕ್ಕೆ ವಿದ್ಯುತ್ ಸಂಪರ್ಕವನ್ನು ತೆಗೆದುಹಾಕಲಾಯಿತು. ಕಟ್ಟಡವನ್ನು ಕೆಡವಲು ಸೂಚಿಸಲಾಗಿದೆ.
ಅಲ್ಲದೆ ಅಧಿಕಾರಿಗಳು ಈ ಬಗ್ಗೆ ಸಾರ್ವಜನಿಕರಿಗೆ ಸೂಚನೆ ನೀಡಿದ್ದು ಸರಿಯಾದ ಅನುಮತಿ ಇಲ್ಲದೆ ಹಾಗೂ ಕಳಪೆ ಕಾಮಗಾರಿ ಕಟ್ಟಡಗಳನ್ನು ಕಟ್ಟಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
Another building in Bengaluru at the point of collapse, immediate demolition notice