ಬಿಎಂಟಿಸಿ ಉಚಿತ ಚಾಲನಾ ತರಬೇತಿ ಅವಕಾಶ! ಇಲ್ಲಿದೆ ಅರ್ಜಿ ಸಲ್ಲಿಕೆ ಮಾಹಿತಿ
ಬಿಎಂಟಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಲಘು ಮತ್ತು ಭಾರೀ ವಾಹನಗಳ ಉಚಿತ ಚಾಲನಾ ತರಬೇತಿ ನೀಡಲು ಅವಕಾಶ ಕಲ್ಪಿಸಿದೆ. ಅರ್ಹ ಅಭ್ಯರ್ಥಿಗಳು ನಿಗದಿತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
- ಬಿಎಂಟಿಸಿ ಉಚಿತ ಚಾಲನಾ ತರಬೇತಿ ಪಡೆಯಲು ಅವಕಾಶ.
- ಲಘು ಹಾಗೂ ಭಾರೀ ವಾಹನ ಚಾಲನಾ ತರಬೇತಿ ಸೇರಿ ವಸತಿ ಸೌಲಭ್ಯ.
- ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹಾಗೂ ಅಗತ್ಯ ದಾಖಲೆಗಳ ಬಗ್ಗೆ ವಿವರ.
ಬೆಂಗಳೂರು (Bengaluru): ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಬಿಎಂಟಿಸಿ (BMTC), ಇದೀಗ ಉಚಿತ ಚಾಲನಾ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಯೋಜನೆ ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಲಭ್ಯವಿದೆ.
ಈ ತರಬೇತಿ ಲಘು ಮತ್ತು ಭಾರೀ ವಾಹನಗಳಿಗೆ ನೀಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ವಸತಿ ಸಹಿತ ಅಥವಾ ವಸತಿ ರಹಿತ ತರಬೇತಿಗಾಗಿ ಅರ್ಜಿ ಸಲ್ಲಿಸಬಹುದು. ವಸತಿ ಮತ್ತು ಊಟದ ಸೌಲಭ್ಯವನ್ನು ಆಯ್ಕೆಯ ಅಭ್ಯರ್ಥಿಗಳಿಗೆ ಒದಗಿಸಲಾಗುತ್ತದೆ. ಮೊದಲು ಅರ್ಜಿ ಸಲ್ಲಿಸುವವರಿಗೆ ಆದ್ಯತೆ ನೀಡಲಾಗುವುದು.
ಭಾರೀ ವಾಹನ ತರಬೇತಿಗೆ ಅರ್ಜಿ ಹಾಕಲು ಕನಿಷ್ಠ 20 ವರ್ಷ ವಯಸ್ಸು ಅಗತ್ಯವಿದ್ದು, ಅಭ್ಯರ್ಥಿಯು ಲಘು ವಾಹನ ಚಾಲನಾ ಪರವಾನಗಿ ಪಡೆದಿದ್ದು ಒಂದು ವರ್ಷ ಪೂರ್ಣಗೊಳ್ಳಬೇಕು. ಲಘು ವಾಹನ ತರಬೇತಿಗೆ 18-45 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು – ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, 5 ಪಾಸ್‌ಪೋರ್ಟ್ ಸೈಜ್ ಫೋಟೋಗಳು. ತರಬೇತಿ ಆರಂಭದಂದು ಈ ದಾಖಲೆಗಳನ್ನು ಅಧಿಕಾರಿಗಳ ಮುಂದೆ ಹಾಜರು ಪಡಿಸಬೇಕು.
ಅರ್ಜಿಯನ್ನು https://sevasindhuservices.karnataka.gov.in ವೆಬ್‌ಸೈಟ್‌ನಲ್ಲಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 08022279954, 8792662816/8792662814 ಸಂಖ್ಯೆಗೆ ಸಂಪರ್ಕಿಸಬಹುದು ಅಥವಾ http://www.mybmtc.gov.in ವೆಬ್‌ಸೈಟ್‌ನಲ್ಲಿ ಹೆಚ್ಚಿನ ವಿವರಗಳನ್ನು ಪಡೆಯಬಹುದು.
Bengaluru BMTC Free Driving Training
Our Whatsapp Channel is Live Now 👇