ಬೆಂಗಳೂರು ಪಟಾಕಿ ಮಾರಾಟ, ಶಬ್ದ ಮತ್ತು ಮಾಲಿನ್ಯ ಸಮಸ್ಯೆ! ಹಸಿರು ಪಟಾಕಿ ಕೊಳ್ಳುವವರಿಲ್ಲ

Story Highlights

ಬೆಂಗಳೂರಿಗೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರಿನಿಂದ ನಿಷೇಧಿತ ಪಟಾಕಿಯನ್ನು ಬೆಂಗಳೂರು ನಗರಕ್ಕೆ ತರಲಾಗುತ್ತದೆ

ಬೆಂಗಳೂರು (Bengaluru): ರಾಜ್ಯ ಸರಕಾರ ಹಸಿರು ಪಟಾಕ (green crackers) ಕಡ್ಡಾಯಗೊಳಿಸಿ ಹಲವು ವರ್ಷಗಳು ಕಳೆದರೂ ಮಾರಾಟ, ಖರೀದಿ ಆ ಮಟ್ಟದಲ್ಲಿ ಆಗಿಲ್ಲ. ನಗರದಲ್ಲಿ ಮಾರಾಟವಾಗುವ ಪಟಾಕಿಗಳಲ್ಲಿ ಶೇಕಡಾ 5 ರಿಂದ 10 ರಷ್ಟು ಮಾತ್ರ ಹಸಿರು ಪಟಾಕಿಗಳಾಗಿವೆ.

ಕಳೆದ ವರ್ಷ ನಗರದಲ್ಲಿ 400 ಕೋಟಿ ರೂ.ಗಳ ಪಟಾಕಿ (Fire crackers) ವ್ಯವಹಾರ ನಡೆದಿದೆ. ಅದರಲ್ಲಿ ಹಸಿರುಪಟಾಕಿ ಕೇವಲ 40 ಕೋಟಿ ರೂ. ಈ ಬಾರಿ ನಗರದಲ್ಲಿ ರೂ.500 ಕೋಟಿಯಷ್ಟು ಪಟಾಕಿ ವ್ಯಾಪಾರ ಆಗಬಹುದು ಎಂದು ವ್ಯಾಪಾರಸ್ಥರು ನಿರೀಕ್ಷಿಸುತ್ತಿದ್ದಾರೆ. ಹಸಿರು ಪಟಾಕಿ ಪಾಲು ರೂ. 40 ರಿಂದ 50 ಕೋಟಿ ಇರಬಹುದು.

ಬೆಂಗಳೂರು: ದರ್ಶನ್ ಜಾಮೀನು ಕುರಿತು ವಾದ, ಖೈದಿಗೂ ಉತ್ತಮ ಆರೋಗ್ಯ ಪಡೆಯುವ ಹಕ್ಕಿದೆ; ಹೈಕೋರ್ಟ್

ಬೆಂಗಳೂರಿಗೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರಿನಿಂದ ನಿಷೇಧಿತ ಪಟಾಕಿಯನ್ನು ಬೆಂಗಳೂರು ನಗರಕ್ಕೆ ತರಲಾಗುತ್ತದೆ. ಅವುಗಳನ್ನು ಸುಡುವುದರಿಂದ ಅತಿಯಾದ ವಾಯು ಮತ್ತು ಶಬ್ದ ಮಾಲಿನ್ಯ ಉಂಟಾಗುತ್ತದೆ. ನಗರದಲ್ಲಿ ಕೂಡ ಪಟಾಕಿಗಳನ್ನು ಮಾರಾಟ ಮಾಡಲಾಗುತ್ತದೆ. ಆದರೆ ಅಗ್ಗದ ದರದಲ್ಲಿ ಪಟಾಕಿ ತರಲು ಅನೇಕ ಜನರು ಹೊಸೂರಿಗೆ ಹೋಗುತ್ತಾರೆ.

ಅಕ್ರಮ ಪಟಾಕಿ ಮಾರಾಟಗಾರರಿಗೆ ತೆರಿಗೆ ಇಲ್ಲ. ಆದರೆ ಸರಕಾರದ ಅನುಮತಿ ಪಡೆದು ಮಳಿಗೆ ಹಾಕುವವರು ನಾನಾ ಶುಲ್ಕ ಹಾಗೂ ಜಿಎಸ್ ಟಿ ಕಟ್ಟಬೇಕಾಗುತ್ತದೆ ಎಂದು ಪಟಾಕಿ ಮಾರಾಟಗಾರರು ದೂರಿದ್ದಾರೆ.

ಬೆಂಗಳೂರು ಬನ್ನೇರುಘಟ್ಟ ಬಳಿ ವಾಹನ ಡಿಕ್ಕಿಯಾಗಿ ಆನೆ ಸಾವು

Bengaluru crackers sale, There are no buyers of green crackers

Related Stories