ಬೆಂಗಳೂರಿನಲ್ಲಿ ವಜ್ರ-ಚಿನ್ನ ಕಳ್ಳತನ ಪ್ರಕರಣ, ಮನೆ ಕೆಲಸದಾಕೆಯ ಕೈಚಳಕ - Bengaluru Theft Case

ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆಯ ತಂಡವು 22 ಲಕ್ಷ ರೂ. ಮೌಲ್ಯದ ವಜ್ರ ಮತ್ತು ಚಿನ್ನದ ಆಭರಣ ಕಳ್ಳತನ ಮಾಡಿದ ತೆಲಂಗಾಣ ಮೂಲದ ಮಹಿಳೆ ಹಾಗೂ ಆಕೆಯ ಸಹೋದರಿಯ ಪತಿಯನ್ನು ಬಂಧಿಸಿದೆ.

  • ವಜ್ರ-ಚಿನ್ನ ಕಳ್ಳತನ ಪ್ರಕರಣದಲ್ಲಿ ಮಹಿಳೆ ಬಂಧನ
  • ಸಿದ್ದಾಪುರ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ
  • 22 ಲಕ್ಷ ರೂ. ಮೌಲ್ಯದ ಆಭರಣ ವಶಕ್ಕೆ

ಬೆಂಗಳೂರು (Bengaluru): ಬೆಂಗಳೂರು ನಗರದ ಜಯನಗರದ ವೈದ್ಯೆಯ ಮನೆಯಲ್ಲಿ ನಡೆದ ವಜ್ರ ಮತ್ತು ಚಿನ್ನಾಭರಣ ಕಳ್ಳತನ ಪ್ರಕರಣ ಬಿಚ್ಚು ಬಿದ್ದಿದೆ. ಈ ಪ್ರಕರಣದಲ್ಲಿ ಕೆಲಸದಾಳಿಯಾದ ಮಹಿಳೆ ದುರ್ಗಾ ಅನ್ನಾರೆಡ್ಡಿ (40) ಮತ್ತು ಆಕೆಯ ಸಹೋದರಿಯ ಪತಿ ವೆಂಕಟೇಶ್ ರಾವ್ (44)ರನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರ ಪೊಲೀಸ್ ಕಮಿಷನರ್ ಸೀಮಂತ್‌ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಆರೋಪಿ ದುರ್ಗಾ ಮತ್ತು ವೆಂಕಟೇಶ್‌ನಿಂದ ಒಟ್ಟು 22 ಲಕ್ಷ ಮೌಲ್ಯದ ವಜ್ರಾಭರಣ, ಚಿನ್ನಾಭರಣ, ಮೊಬೈಲ್ ಹಾಗೂ ಬೆಲೆಬಾಳುವ ವಾಚ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರು ಹೆಬ್ಬಾಳ ಜಂಕ್ಷನ್ ಲೂಪ್‌ನಿಂದ ಸಂಚಾರ ದಟ್ಟಣೆ 25% ಕಡಿಮೆ

ವೈದ್ಯೆ ಸುಮಾರು ಎರಡು ವರ್ಷಗಳ ಹಿಂದೆ ಏಜೆನ್ಸಿಯ ಮೂಲಕ ತೆಲಂಗಾಣದ ದುರ್ಗಾಳನ್ನು ಮನೆ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಅನಾರೋಗ್ಯಕ್ಕೊಳಗಾದ ವೈದ್ಯೆಯ ಮನೆಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಆಕೆ ನಿರ್ವಹಿಸುತ್ತಿದ್ದಳು. ಈ ಅವಧಿಯಲ್ಲಿ ಮನೆಯಲ್ಲಿದ್ದ ಕಪಾಟುಗಳಲ್ಲಿ ಇಟ್ಟಿದ್ದ ಆಭರಣಗಳನ್ನು ಆಕೆ ಕದ್ದಿದ್ದಾಳೆ ಎಂಬುದು ತನಿಖೆಯಿಂದ ಹೊರಬಂದಿದೆ.

ಜುಲೈ 28ರಂದು ಆಕೆ ಏಕಾಏಕಿ ಪರಾರಿ ಆದ ಬಳಿಕ ಮನೆಯಲ್ಲಿ ಆಭರಣ, ಮೊಬೈಲ್ ಮತ್ತು ವಾಚ್‌ಗಳು ಕಾಣಿಸದೆ ಹೋದವು. ನಂತರ ವೈದ್ಯೆ ಠಾಣೆಗೆ ದೂರು ನೀಡಿದ ಮೇಲೆ ಪೊಲೀಸರು ತನಿಖೆ ಪ್ರಾರಂಭಿಸಿದರು. ವಿಶೇಷ ಪೊಲೀಸ್ ತಂಡವು ತೆಲಂಗಾಣದ ನ್ಯೂ ರಂಗಪುರ ಗ್ರಾಮದ ಆಕೆಯ ಸಹೋದರಿಯ ಮನೆಯಲ್ಲಿ ದುರ್ಗಾಳನ್ನು ಪತ್ತೆಹಚ್ಚಿ ಬಂಧಿಸಿತು.

ಪೊಲೀಸರ ಪ್ರಕಾರ, ದುರ್ಗಾ ಕದ್ದ ಚಿನ್ನಾಭರಣವನ್ನು ತನ್ನ ಸಹೋದರಿಯ ಪತಿ ವೆಂಕಟೇಶ್ ರಾವ್ ಮೂಲಕ ಮಾರಾಟ ಮಾಡಿಸಿದ್ದಾಳೆ. ತನಿಖೆಯ ನಂತರ ವೆಂಕಟೇಶ್‌ನನ್ನೂ ಬಂಧಿಸಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

Bengaluru Maid Nabbed for Stealing Gold and Diamonds

English Summary▼

TRENDING ARTICLES1 / 3
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories