ಬೆಂಗಳೂರಿನಲ್ಲಿ ಪತ್ನಿಗೆ ನಿದ್ರೆ ಮಾತ್ರೆ ನೀಡಿ ಕತ್ತು ಹಿಸುಕಿ ಕೊಂದ ಪತಿ ಅರೆಸ್ಟ್
ಪತ್ನಿಗೆ ನಿದ್ರೆ ಮಾತ್ರೆ ನೀಡಿದ ಪತಿ, ನಂತರ ಕತ್ತು ಹಿಸುಕಿ ಕೊಲೆ ಮಾಡಿ ಸಹಜ ಸಾವೆಂದು ಬಿಂಬಿಸಿದ ಘಟನೆ. ಪೊಲೀಸರು ವಿಚಾರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
- ಪತ್ನಿ ಚೇತನಾ (42) ಹತ್ಯೆ, ಪತಿ ಶರತ್ ಉತ್ತಂಗಿ (43) ಬಂಧನ.
- ದಂಪತಿಯ ನಡುವೆ ಗಲಾಟೆ, ಕೊಲೆ ಮಾಡಿ ಸಹಜ ಸಾವು ಎಂಬ ನಾಟಕ.
- ಸಂಬಂಧಿಗಳ ಅನುಮಾನಕ್ಕೆ ನಿಜಾಂಶ ಬಯಲು
ಬೆಂಗಳೂರು (Bengaluru): ಹಣಕಾಸಿನ ವಿಚಾರಕ್ಕೆ ಪತ್ನಿಯನ್ನು ಕ್ರೂರವಾಗಿ ಕೊಂದ ಪತಿ, ಸಹಜ ಸಾವಿನಂತೆ ನಾಟಕವಾಡಿದ್ದ ಪ್ರಕರಣ ಬೆಳಕಿಗೆ ಬಂದಿದೆ. ವೈಯಾಲಿಕಾವಲ್ ಠಾಣೆ ಪೊಲೀಸರು ಪತಿ ಶರತ್ ಉತ್ತಂಗಿಯನ್ನು ಬಂಧಿಸಿದ್ದು, ವಿಚಾರಣೆಯ ವೇಳೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿಯ ಶರತ್ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಪತ್ನಿ ಚೇತನಾ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಳು. ಈ ದಂಪತಿ ಕಳೆದ ಒಂದು ವರ್ಷದಿಂದ ಬೆಂಗಳೂರಿನ ಮಲ್ಲೇಶ್ವರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇಬ್ಬರಿಗೂ ಉತ್ತಮ ಆದಾಯವಿದ್ದರೂ, ಹಣಕಾಸಿನ ವಿಚಾರದಲ್ಲಿ ನಿರಂತರ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.
ಬೈಕ್-ಬಸ್ ಅಪಘಾತ: ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಸಾವು
ಫೆಬ್ರವರಿ 3ರಂದು ದಂಪತಿ ನಡುವೆ ಗಲಾಟೆ ತಾರಕಕ್ಕೇರಿದಾಗ, ಪತಿ ಶರತ್ ಪತ್ನಿಗೆ ಜ್ವರದ ಮಾತ್ರೆಯ ಹೆಸರಿನಲ್ಲಿ ನಿದ್ರೆ ಮಾತ್ರೆ ನೀಡಿದನು. ಗಾಢ ನಿದ್ರೆಗೆ ಜಾರಿದ ಪತ್ನಿಯನ್ನು ಹಾಸಿಗೆಯಲ್ಲೇ ಕತ್ತುಹಿಸುಕಿ ಕೊಲೆ ಮಾಡಿದ್ದನು. ನಂತರ, ಪತ್ನಿ ಹೃದಯಾಘಾತದಿಂದ ಮೃತಪಟ್ಟಂತೆ ಬಿಂಬಿಸಲು ಹಲವಾರು ಕುತಂತ್ರಗಳನ್ನು ಕೂಡ ಮಾಡಿದ್ದನು.
ಆದರೆ, ಸಂಬಂಧಿಗಳಿಗೆ ಪ್ರಕರಣದ ಬಗ್ಗೆ ಅನುಮಾನ ಮೂಡಿತು. ಮೃತದೇಹದ ಮೇಲೆ ಪತ್ತೆಯಾದ ಗಾಯಗಳು ಹಾಗೂ ಪತಿಯ ಮೇಲಿನ ಶಂಕೆಯಿಂದ ಕುಟುಂಬಸ್ಥರು ದೂರು ನೀಡಿದ ಬಳಿಕ ಪೊಲೀಸರು ತನಿಖೆ ನಡೆಸಿದರು. ಈ ಸಂಬಂಧ ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಕೊಲೆ ಸತ್ಯಾಂಶವನ್ನು ಹೊರ ಹಾಕಿದನು. ಶರತ್‌ನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.
Bengaluru Man kills wife by Sleeping pills