ಬೆಂಗಳೂರು ಮೆಟ್ರೋ ನೇಮಕಾತಿ, 82,660 ಸಂಬಳ! 50 ಹುದ್ದೆಗಳಿಗೆ ಅರ್ಜಿ ಆಹ್ವಾನ
BMRCL Recruitment 2025: ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್(BMRCL) 50 ರೈಲು ನಿರ್ವಾಹಕ (Train Operator) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಏಪ್ರಿಲ್ 4ರೊಳಗೆ ಅರ್ಜಿ ಸಲ್ಲಿಸಬಹುದು.
- ಒಟ್ಟು ಹುದ್ದೆಗಳು: 50
- ಉದ್ಯೋಗ ಸ್ಥಳ: ಬೆಂಗಳೂರು
- ವೇತನ: ₹35,000 – ₹82,660/–
ಹುದ್ದೆಗೆ ಸಂಬಂಧಿಸಿದ ಮಾಹಿತಿ
BMRCL Recruitment 2025: ಬೆಂಗಳೂರು ಮೆಟ್ರೋ ಸಂಸ್ಥೆಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಉತ್ತಮ ಅವಕಾಶ. ಈ ಹುದ್ದೆಗಳ ನೇಮಕಾತಿ BMRCL ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದ ನಿಯಮಗಳ ಪ್ರಕಾರ ನಡೆಯಲಿದೆ.
ಇದನ್ನು ಓದಿ: ಮಾರ್ಚ್ ಅನ್ನಭಾಗ್ಯ ಹಣ ₹680 ರೂಪಾಯಿ ಜಮಾ, ಖಾತೆ ಚೆಕ್ ಮಾಡಿಕೊಳ್ಳಿ
ಅರ್ಹತಾ ಮಾನದಂಡ
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು 10ನೇ ತರಗತಿ ಪಾಸ್ ಆಗಿದ್ದು, ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್, ಟೆಲಿಕಾಂ, ಎಲೆಕ್ಟ್ರಾನಿಕ್ಸ್ & ಸಂವಹನ, ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್ ಮೊದಲಾದ ವಿಭಾಗಗಳಲ್ಲಿ ಡಿಪ್ಲೊಮಾ (Diploma) ಹೊಂದಿರಬೇಕು.
ವಯೋಮಿತಿ:
ಗರಿಷ್ಠ 38 ವರ್ಷ (12 ಮಾರ್ಚ್ 2025ರ ಸ್ಥಿತಿಯಂತೆ).
ಇದನ್ನು ಓದಿ: ಬೆಂಗಳೂರು ಸೇರಿದಂತೆ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ
ಅರ್ಜಿ ಸಲ್ಲಿಸುವ ವಿಧಾನ
➤ ಆಫ್‌ಲೈನ್ ಅರ್ಜಿ:
ಜನರಲ್ ಮ್ಯಾನೇಜರ್ (HR), BMRCL, III ಮಹಡಿ, BMTC ಕಾಂಪ್ಲೆಕ್ಸ್, ಕೆಎಚ್ ರಸ್ತೆ, ಶಾಂತಿನಗರ, ಬೆಂಗಳೂರು – 560027
➤ ಆನ್‌ಲೈನ್ ಲಿಂಕ್: BMRCL ವೆಬ್‌ಸೈಟ್ (https://projectrecruit.bmrc.co.in/)
Bengaluru Metro Recruitment, 50 Train Operator Vacancies