ಬೆಂಗಳೂರು ನಂದಿನಿ ಬೂತ್ ಮಾಲೀಕನಿಗೆ 1 ಕೋಟಿ 3 ಲಕ್ಷ ತೆರಿಗೆ ನೋಟಿಸ್ - GST Notice
ಬೆಂಗಳೂರಿನ ನಂದಿನಿ ಬೂತ್ ಮಾಲೀಕರಿಗೆ ಬರೋಬ್ಬರಿ 1ಕೋಟಿ ಮೂರು ಲಕ್ಷ ತೆರಿಗೆ ನೋಟಿಸ್ ನೀಡಿದ ಕರ್ನಾಟಕ ವಾಣಿಜ್ಯ ಇಲಾಖೆ.

- ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಲಕ್ಷಗಟ್ಟಲೆ GST ನೋಟಿಸ್.
- ಬೆಂಗಳೂರಿನ ವ್ಯಾಪಾರಿಗಳು ವಾಣಿಜ್ಯ ಇಲಾಖೆಯ ಮೇಲೆ ಆಕ್ರೋಶ.
- 23 ರಿಂದ 25 ರವರೆಗೆ ಕರ್ನಾಟಕ ಸಂಪೂರ್ಣ ಬಂದ್ .
ಬೆಂಗಳೂರು (Bengaluru): ಇತ್ತೀಚಿಗೆ ಫೋನ್ ಪೇ, ಗೂಗಲ್ ಪೇ ಹಾಗೂ ಪೇಟಿಎಂ ಬಳಸುವಂತಹ ಅಂಗಡಿ ಮಾಲೀಕರಿಗೆ ಸುಮಾರು ಲಕ್ಷಗಟ್ಟಲೆ ತೆರಿಗೆ ಕೊಟ್ಟಲು ನೋಟಿಸ್ ಬಂದಿದ್ದು, ಕರ್ನಾಟಕದಲ್ಲಿ ಗಲಭೆ ಎಬ್ಬಿಸಿದ ವಿಚಾರವಾಗಿದೆ.
ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ನಂದಿನಿ ಬೂತ್ ಇಟ್ಟುಕೊಂಡಿರುವ ಮಾಲಿಕನಾದ ರವಿ ಅವರಿಗೆ ಸುಮಾರು ಒಂದು ಕೋಟಿ ಮೂರು ಲಕ್ಷ ರೂಪಾಯಿ ತೆರಿಗೆ ಕಟ್ಟಲು ನೋಟಿಸ್ ಬಂದಿದೆ.
ರವಿ ಅವರು ಈ ನೋಟಿಸ್ ನೋಡಿದ ಕೂಡಲೇ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಗೆ ಹೋಗಿ ದೂರು ನೀಡಿದ್ದಾರೆ. ಆದರೆ ಅಲ್ಲಿ ಅವರಿಗೆ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ ಎಂದು ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ.
ಅವರಿಗೆ ಮಾತ್ರವಲ್ಲ ಬೆಂಗಳೂರಿನಲ್ಲಿ ಹಲವಾರು ಜನ ಹೊಟ್ಟೆಪಾಡಿಗೋಸ್ಕರ ಚಿಕ್ಕಪುಟ್ಟ ಅಂಗಡಿ ಮುಗಟ್ಟುಗಳನ್ನು ನಡೆಸುತ್ತಿರುವ ಎಲ್ಲಾ ಮಾಲೀಕರಿಗೂ ಕೂಡ ಸುಮಾರು ಲಕ್ಷಗಟ್ಟಲೆ ತೆರಿಗೆ ಕಟ್ಟಲು ನೋಟಿಸ್ ಬಂದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಜುಲೈ 23 ರಂದು 70ಕ್ಕೂ ಹೆಚ್ಚು ಏರಿಯಾಗಳಲ್ಲಿ ವಿದ್ಯುತ್ ಸ್ಥಗಿತ!
ಕರ್ನಾಟಕ ಬಂದ್ ಯಾವಾಗ?
GST ನೋಟಿಸ್ ನೋಡಿದ ಅಂಗಡಿಯ ಮಾಲೀಕರು ಅವರಿಗೆ ಏನು ತೋಚದೆ ನಾಳೆ ಅಂದರೆ ಜುಲೈ 23 ರಿಂದ ಜುಲೈ 25ರವರೆಗೆ ಕರ್ನಾಟಕದ ಫ್ರೀಡಂ ಪಾರ್ಕ್ ನಲ್ಲಿ ಬಂದ್ ಮಾಡುವುದಾಗಿ ಹೇಳಿದ್ದಾರೆ. ಹಾಗೂ ಪ್ರತಿಭಟನೆ ಸಮಯದಲ್ಲಿ ಯಾವುದೇ ರೀತಿಯ ವ್ಯಾಪಾರ ವಹಿವಾಟುಗಳು ಮತ್ತು ಹಾಲು ಕೂಡ ದೊರಕುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದೆ ರೀತಿಯ ವಿಶ್ವಾಸಾರ್ಹ ಸುದ್ದಿಗಳಿಗಾಗಿ ತಪ್ಪದೆ Kannada News Today ಭೇಟಿ ನೀಡಿ.
Bengaluru Nandini Booth Owner Served Tax Notice of 1.03 Crore







