Bengaluru Power Cut: ಬೆಂಗಳೂರು ಜನರೇ ಗಮನಿಸಿ; ನಾಳೆ ಬೆಳಗ್ಗೆಯಿಂದ ಸಂಜೆವರೆಗೆ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲ
Bengaluru Power Cut: ಬೆಸ್ಕಾಂ ನಿರ್ವಹಣಾ ಕಾಮಗಾರಿಯಿಂದ ನವೆಂಬರ್ 21ರ ಶನಿವಾರ ಬೆಂಗಳೂರಿನ ಹಲವು ಬಡಾವಣೆಗಳು, ಅಪಾರ್ಟ್ಮೆಂಟ್ಗಳು ಹಾಗೂ ಐಟಿ ಕಂಪನಿಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ. ಬೆಳಗ್ಗೆಯಿಂದ ಸಂಜೆವರೆಗೆ ವಿವಿಧ ಸಮಯಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.

- 90ಕ್ಕೂ ಹೆಚ್ಚು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
- ಬೆಳಗ್ಗೆ 9.30ರಿಂದ ಕಾಮಗಾರಿ ಆರಂಭ
- ಸಂಜೆ 6 ಗಂಟೆಯವರೆಗೆ ಹಂತ ಹಂತವಾಗಿ ಕಡಿತ
ಬೆಂಗಳೂರು (Bengaluru): ವಾರಾಂತ್ಯದಲ್ಲಿ ಮನೆಯಿಂದಲೇ ಕೆಲಸ ಮಾಡುವವರು, ವ್ಯಾಪಾರಿಗಳು ಹಾಗೂ ಸಾರ್ವಜನಿಕರು ನಾಳೆಯ ವಿದ್ಯುತ್ ಕಡಿತದ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದರಿಂದ ನಗರದ ವಿವಿಧ ಭಾಗಗಳಲ್ಲಿ ಶನಿವಾರ (ನ.21) ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಒಂದೇ ಸಮಯದಲ್ಲಿ ಎಲ್ಲ ಪ್ರದೇಶಗಳಲ್ಲೂ ಕರೆಂಟ್ ಇರುವುದಿಲ್ಲ (Power Cut) ಎಂದಲ್ಲ. ಉಪಕೇಂದ್ರಗಳು ಮತ್ತು ಕಾಮಗಾರಿ ನಡೆಯುವ ಸ್ಥಳಗಳ ಆಧಾರದ ಮೇಲೆ ಬೇರೆ ಬೇರೆ ಸಮಯದಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ. ಕೆಲವು ಪ್ರದೇಶಗಳಲ್ಲಿ ಬೆಳಗ್ಗೆ 9.30ರಿಂದಲೇ ಪೂರೈಕೆ ಸ್ಥಗಿತಗೊಂಡರೆ, ಇನ್ನು ಕೆಲವು ಕಡೆ ಬೆಳಗ್ಗೆ 10 ಗಂಟೆಯಿಂದ ಸಂಜೆವರೆಗೆ ವ್ಯತ್ಯಯ ಉಂಟಾಗಲಿದೆ.
ಯಲಹಂಕ ಭಾಗದ ನಿವಾಸಿಗಳು ಗಮನಿಸಿ
ಯಲಹಂಕ ಹೊಸ ಪಟ್ಟಣದ 5ನೇ ಹಂತ, ಅನಂತಪುರ, ಪುಟ್ಟೇನಹಳ್ಳಿ, ಶ್ರೀನಿಧಿ ಲೇಔಟ್, ಶಿವನಹಳ್ಳಿ, ರಾಮಗೊಂಡನಹಳ್ಳಿ, ಸುರದೇನಪುರ, ಸದನಹಳ್ಳಿ, ಇಸ್ರೋ ಲೇಔಟ್, ಎಲ್ಬಿಎಸ್ ನಗರ, ರಾಜನಕುಂಟೆ, ಹೊನ್ನೇನಹಳ್ಳಿ, ನಾಗೇನಹಳ್ಳಿ, ಮಾರಸಂದ್ರ, ನೆಲಕುಂಟೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇದರೊಂದಿಗೆ ಸಿಆರ್ಪಿಎಫ್ (CRPF), ಐವಿಆರ್ಐ (IVRI), ಬಿಎಂಎಸ್ ಹಾಸ್ಟೆಲ್, ಆವಲಹಳ್ಳಿಯ ಎ ಮತ್ತು ಬಿ ಸೆಕ್ಟರ್ ಹಾಗೂ ಸುತ್ತಮುತ್ತಲಿನ ಬಡಾವಣೆಗಳಿಗೂ ವಿದ್ಯುತ್ ಕಡಿತದ ಬಿಸಿ ತಟ್ಟಲಿದೆ. ಈ ಭಾಗಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.
ಮಲ್ಲೇಶಪಾಳ್ಯ, ವಿಜ್ಞಾನ ನಗರದಲ್ಲೂ ವಿದ್ಯುತ್ ಇರುವುದಿಲ್ಲ
ಪೂರ್ವ ಬೆಂಗಳೂರಿನ ಜಿಎಂ ಪಾಳ್ಯ, ಮಲ್ಲೇಶಪಾಳ್ಯ, ಮಾರುತಿ ನಗರ, ಬೈರಸಂದ್ರ, ವಿಜ್ಞಾನ ನಗರ, ರಾಮೇಶ್ ನಗರ, ಅಯ್ಯಪ್ಪ ನಗರ, ಕಳಪ್ಪ ಲೇಔಟ್, ಟಾಟಾ ಶೆರ್ವುಡ್ ಮತ್ತು ವಿಭೂತಿಪುರ ಸುತ್ತಮುತ್ತಲಿನ ನಿವಾಸಿಗಳು ಕೂಡ ಸಿದ್ಧರಾಗಿರಬೇಕು. ಈ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಇದೇ ಭಾಗದ ವಾಸ್ವಾನಿ ಅಪಾರ್ಟ್ಮೆಂಟ್, ಪ್ರೆಸ್ಟೀಜ್ ವಾಟರ್ಫೋರ್ಡ್, ವೆಬ್ ವರ್ಕ್ಸ್, ಶಾಂತಿನಿಕೇತನ ವಾಣಿಜ್ಯ ಸಂಕೀರ್ಣ, ಹೋಟೆಲ್ ಡೆನ್, ಹಾರ್ಮನ್ ಕಂಪನಿ ಹಾಗೂ ಪಟ್ಟಂದೂರು ಅಗ್ರಹಾರದ ಕೆಲವು ಭಾಗಗಳಿಗೂ ವಿದ್ಯುತ್ ಕಡಿತದ ಪರಿಣಾಮ ಬೀರಲಿದೆ.
ಇದಲ್ಲದೆ ಇಸಿಸಿ ರಸ್ತೆ, ಶ್ರೀ ಸತ್ಯಸಾಯಿ ಬಾಬಾ ಆಸ್ಪತ್ರೆ, ಫ್ಲೋಸರ್ವ್, ಎನ್ವಿಷನ್, ಹೋಮ್ಟೆಕ್, ಕೀರ್ತಿ ಸಿಗ್ನೇಚರ್ ಅಪಾರ್ಟ್ಮೆಂಟ್, ಬಿಎಂಡಬ್ಲ್ಯು ಶೋರೂಂ, ಹೂಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲೂ ವಿದ್ಯುತ್ ವ್ಯತ್ಯಯವಾಗಲಿದೆ.
ಬಾಗ್ಮಾನೆ ಟೆಕ್ ಪಾರ್ಕ್, ಕುಂದಲಹಳ್ಳಿ ಭಾಗಕ್ಕೂ ತಟ್ಟಲಿದೆ ಬಿಸಿ
ಐಟಿ ಉದ್ಯೋಗಿಗಳು ಹೆಚ್ಚಿರುವ ಕುಂದಲಹಳ್ಳಿ, ಗ್ರಾಫೈಟ್ ವೃತ್ತ, ಐಗೇಟ್ ವೃತ್ತ, ಕುಂದಲಹಳ್ಳಿ ಮುಖ್ಯ ರಸ್ತೆ, ಬಾಗ್ಮಾನೆ ನೀಯಾನ್ ಕಟ್ಟಡ ಹಾಗೂ ಇಪಿಐಪಿ ಕೈಗಾರಿಕಾ ಪ್ರದೇಶಗಳಲ್ಲಿ ಬೆಳಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಕ್ವಾಲ್ಕಾಂ (Qualcomm), ಕ್ಯಾಪ್ಜೆಮಿನಿ (Capgemini), ಎಲ್ಅಂಡ್ಟಿ (L&T), ಮೈಂಡ್ಕಾಂಪ್, ಟಿಸಿಎಸ್ (TCS), ಎಸ್ಜೆಆರ್ ಟೆಕ್ ಪಾರ್ಕ್, ಎಸ್ಎಪಿ ಲ್ಯಾಬ್ಸ್ (SAP Labs), ಗೋಪಾಲನ್ ಗ್ಲೋಬಲ್ ಆಕ್ಸೆಸ್ ಹಾಗೂ ಆರ್ಎಂಜೆಡ್ ವ್ಯಾಪ್ತಿಯಲ್ಲೂ ಕಾಮಗಾರಿಯ ಪರಿಣಾಮ ಇರಲಿದೆ.
ಇದರ ಜೊತೆಗೆ ಫಾರ್ಚ್ಯೂನ್ ಹೋಟೆಲ್, ರಾಧಾ ಹೋಟೆಲ್, ನಂದಿ ಟೊಯೋಟಾ, ಉಡುಪಿ ಹೋಟೆಲ್, ಬಿಎಂಟಿಸಿ, ಏರ್ಟೆಲ್, ಬುಶ್ರಾ ಟೆಕ್ ಪಾರ್ಕ್, ಸಾಧಾ ಟೆಕ್ ಪಾರ್ಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ವಿದ್ಯುತ್ ಕಡಿತವಾಗಲಿದೆ.
ಇತರೆ ಕೈಗಾರಿಕಾ ಪ್ರದೇಶಗಳಿಗೂ ವಿದ್ಯುತ್ ವ್ಯತ್ಯಯ
ರಿಲಯನ್ಸ್ ಇಂಡಸ್ಟ್ರೀಸ್, ಕುರ್ಲೋನ್, ಸಿಕೆಎ, ಅಲಿಸ್ಡಾ, ಜೈಭರತ್ ಇಂಡಸ್ಟ್ರೀಸ್ ಏರಿಯಾ, ಟಾಟಾ ಅಕೆವಲ್, ಕಾರ್ಲೆ, ಪ್ರೊಫೆಷನಲ್ ಕ್ಲೋಥಿಂಗ್, ರಾಘವೇಂದ್ರ ಲೇಔಟ್, ಮುನೇಶ್ವರ ನಗರ, ವೈಷ್ಣವಿ ನಕ್ಷತ್ರ ಅಪಾರ್ಟ್ಮೆಂಟ್, ಪ್ಲಾಟಿನಂ ಸಿಟಿ ಅಪಾರ್ಟ್ಮೆಂಟ್, ಬಿಎಫ್ಡಬ್ಲ್ಯೂ, ಎನ್ಟಿಆರ್ಒ ಮತ್ತು ಜಲಸೌಧ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ.
ಹೀಗಾಗಿ ವಿದ್ಯುತ್ ಅವಲಂಬಿತ ಕೆಲಸಗಳನ್ನು ಮುಂಚಿತವಾಗಿ ಮುಗಿಸಿಕೊಳ್ಳುವುದು ಉತ್ತಮ. ಲ್ಯಾಪ್ಟಾಪ್, ಮೊಬೈಲ್ ಸೇರಿದಂತೆ ಅಗತ್ಯ ಸಾಧನಗಳನ್ನು ಚಾರ್ಜ್ ಮಾಡಿಟ್ಟುಕೊಳ್ಳುವುದರ ಜೊತೆಗೆ ನೀರಿನ ಮೋಟಾರ್ ಬಳಕೆಯನ್ನೂ ಯೋಜಿಸಿಕೊಳ್ಳುವುದು ಅನುಕೂಲಕರ.




