ಬೆಂಗಳೂರು ಬಾಡಿಗೆದಾರರಿಗೆ ಹೆಚ್ಚಾದ ಆರ್ಥಿಕ ಭಾರ! ಬಾಡಿಗೆ ದರ, ಅಡ್ವಾನ್ಸ್ ಮೊತ್ತ ಗಗನಕ್ಕೆ
ಬೆಂಗಳೂರು ನಗರದಲ್ಲಿ ಬಾಡಿಗೆ ಮನೆಗಳ ದರ, ಅಡ್ವಾನ್ಸ್ ಮೊತ್ತ ಹಾಗೂ ಹೆಚ್ಚುವರಿ ಶುಲ್ಕಗಳು ಗಗನಕ್ಕೇರಿದ್ದು, ಮನೆಮಾಲೀಕರ ಹೊಸ ನಿಯಮಗಳಿಂದ ಬಾಡಿಗೆದಾರರು ಆರ್ಥಿಕ ಒತ್ತಡಕ್ಕೆ ಒಳಗಾಗುತ್ತಿರುವ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ.

- ಬೆಂಗಳೂರು ಬಾಡಿಗೆ ದರ ಗಗನಕ್ಕೇರಿದೆ
- ಮನೆಮಾಲೀಕರ ಹೊಸ ತಲೆನೋವು
- ಪಾರ್ಕಿಂಗ್, ನೀರು, ಸ್ವಚ್ಛತೆಗೆ ಹೆಚ್ಚುವರಿ ಶುಲ್ಕ
ಬೆಂಗಳೂರು (Bengaluru): ಬೆಂಗಳೂರು ರಿಯಲ್ ಎಸ್ಟೇಟ್ ಕ್ಷೇತ್ರ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ನಗರದ ಗರಿಷ್ಠ ಬೇಡಿಕೆಯ ಪ್ರದೇಶಗಳಲ್ಲಿ ಮನೆಗಳ ಅಡ್ವಾನ್ಸ್ ಮೊತ್ತ ಹಾಗೂ ತಿಂಗಳ ಬಾಡಿಗೆಗಳು (House Rent) ತೀವ್ರ ಏರಿಕೆಯಾಗಿದೆ. ಇದರಿಂದ ಬಾಡಿಗೆ ಮನೆಗಳಲ್ಲಿ ವಾಸಿಸುವವರು ಹೆಚ್ಚುವರಿ ವೆಚ್ಚಗಳಿಂದಾಗಿ ತತ್ತರಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲೂ ಈ ವಿಷಯಕ್ಕೆ ಸಂಬಂಧಿಸಿದ ಅಸಮಾಧಾನ ಹೆಚ್ಚಾಗಿದೆ. ರೆಡ್ಡಿಟ್ ಸೇರಿದಂತೆ ಹಲವು ವೇದಿಕೆಗಳಲ್ಲಿ ಮನೆಮಾಲೀಕರ ಏಕಾಏಕಿ ಬಾಡಿಗೆ ಹೆಚ್ಚಳ, ಅಡ್ವಾನ್ಸ್ ಮೊತ್ತದ ದಿಢೀರ್ ಏರಿಕೆ ಹಾಗೂ ಏಕಪಕ್ಷೀಯ ನಿಯಮಗಳ ಕುರಿತು ಬಳಕೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 4,056 ಸರ್ಕಾರಿ ಶಾಲೆಗಳಲ್ಲೂ ಎಲ್ಕೆಜಿ–ಯುಕೆಜಿ ಆರಂಭ! ಸರ್ಕಾರ ಆದೇಶ ಜಾರಿ
ಹೆಚ್ಚುತ್ತಿರುವ ಬಾಡಿಗೆ: 400–600 ಚದರ ಅಡಿಗೆ ₹30,000–₹40,000!
ಕೇವಲ 400 ರಿಂದ 600 ಚದರ ಅಡಿ ವಿಸ್ತೀರ್ಣದ ಮನೆಗಳಿಗೂ ಬೆಂಗಳೂರಿನಲ್ಲಿ ಈಗ ₹30 ಸಾವಿರದಿಂದ ₹40 ಸಾವಿರವರೆಗೆ ಬಾಡಿಗೆ ಕೇಳಲಾಗುತ್ತಿದೆ. ಇದಕ್ಕೊಂದು ಕಡೆ ₹1.2 ಲಕ್ಷದಿಂದ ₹2 ಲಕ್ಷದವರೆಗೆ ಅಡ್ವಾನ್ಸ್ ತೆಗೆದುಕೊಳ್ಳಲಾಗುತ್ತಿದ್ದು, ಕೆಲ ಸ್ಥಳಗಳಲ್ಲಿ ಈ ಮೊತ್ತವೂ ಮೀರಿದೆ.
ಪಾರ್ಕಿಂಗ್–ನೀರು–ಸ್ವಚ್ಛತೆಗೆ ತಿಂಗಳಿಗೆ ₹2,500?
ಹಿಂದಿನಂತೆ ಕೇವಲ ಬಾಡಿಗೆ ಮತ್ತು ಅಡ್ವಾನ್ಸ್ ನೀಡುವುದರಿಂದ ಮಾತ್ರ ಸಾಲದೇ, ಈಗ ಹಲವಾರು ಮನೆಮಾಲೀಕರು ನೀರು, ಪಾರ್ಕಿಂಗ್ ಜಾಗ ಮತ್ತು ಸ್ವಚ್ಛತೆ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ಗಳನ್ನು ವಿಧಿಸುವುದು ಹೆಚ್ಚು ಕಂಡು ಬರುತ್ತಿದೆ. ಕೆಲವು ಮನೆಗಳಲ್ಲಿ ಮಾಸಿಕವಾಗಿ ₹2,500 ರಷ್ಟು ಹೆಚ್ಚುವರಿ ಪಾವತಿ ಕೇಳಲಾಗುತ್ತಿದೆ.
ಇದನ್ನೂ ಓದಿ: ಪಡಿತರ ಚೀಟಿದಾರರಿಗೆ ಜ್ಯಾಕ್ಪಾಟ್ ಸುದ್ದಿ! ರೇಷನ್ ಕಾರ್ಡ್ ಕುರಿತು ದೊಡ್ಡ ಗುಡ್ ನ್ಯೂಸ್
ಅಡ್ವಾನ್ಸ್ ಮರಳಿ ಕೊಡುವಲ್ಲಿ ಸಮಸ್ಯೆ ಹೆಚ್ಚಳ
ಮನೆ ಬಿಡುವಾಗ ಅಡ್ವಾನ್ಸ್ ಮೊತ್ತವನ್ನು ಪೂರ್ಣ ಪ್ರಮಾಣದಲ್ಲಿ ಹಿಂತಿರುಗಿಸುವಲ್ಲಿ ಹಲವು ಮನೆಮಾಲೀಕರು ತಪ್ಪಿಸಿಕೊಳ್ಳುತ್ತಿರುವ ಬಗ್ಗೆ ಬಾಡಿಗೆದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮನೆ ಫೈಂಟಿಂಗ್ ಅಥವಾ ಸಣ್ಣ ದುರಸ್ತಿ ಹೆಸರಿನಲ್ಲಿ ಅನಾವಶ್ಯಕ ಕಡಿತ ಮಾಡಲಾಗುತ್ತಿದೆ ಎಂದು ಬಾಡಿಗೆದಾರರು ಆರೋಪಿಸಿದ್ದಾರೆ.
ನಗರದ ಆಸ್ತಿ ಬೆಲೆ ಏರಿಕೆಯಾಗುತ್ತಿರುವಂತೆ ಬಾಡಿಗೆ ಕ್ಷೇತ್ರವೂ ನಿಯಂತ್ರಣಕ್ಕೆ ಸಿಗದೆ ಓಡುತ್ತಿದೆ. ಬಾಡಿಗೆದಾರರು ಈಗಾಗಲೇ ಆರ್ಥಿಕ ಹೊರೆ ಹೊತ್ತಿರುವ ಸಂದರ್ಭದಲ್ಲಿ ಮನೆಮಾಲೀಕರ ಹೊಸ ನಿಯಮಗಳು ತಲೆನೋವಿನ ಕಾರಣವಾಗಿವೆ.
Bengaluru Rent Shock for Tenants
ಗೃಹಲಕ್ಷ್ಮಿ ಯೋಜನೆಯ ಹೊಸ ಲಿಸ್ಟ್ ಸಿದ್ದ; ಈ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಸಿಗುತ್ತೆ ಹಣ!
Read the story
ಕರ್ನಾಟಕ ಮಹಿಳೆಯರಿಗೆ ₹2 ಲಕ್ಷದವರೆಗೆ ಸಾಲ ಸೌಲಭ್ಯ; ಸ್ವಂತ ಉದ್ಯಮ ಆರಂಭಿಸಲು ಆರ್ಥಿಕ ನೆರವು
Read the story
10 ಲಕ್ಷ ಮಂದಿ ರೈತರಿಗೆ ಪಿಎಂ ಕಿಸಾನ್ ಯೋಜನೆ ಹಣ ಸ್ಥಗಿತ! ಕೇಂದ್ರದ ಶಾಕಿಂಗ್ ನಿರ್ಧಾರ
Read the story
ಕರ್ನಾಟಕ SSLC ವಿದ್ಯಾರ್ಥಿಗಳು ಹಾಗೂ ಶಾಲೆಗಳಿಗೆ KSEAB ಮಹತ್ವದ ಸೂಚನೆ! ತಪ್ಪದೇ ಗಮನಿಸಿ
Read the story
ಕರ್ನಾಟಕ ರಾಜ್ಯದಲ್ಲಿ ಅಕ್ಕಿ ಬೆಲೆ ಗಗನಕ್ಕೆ; ಕೆಜಿಗೆ ₹20 ರೂಪಾಯಿ ಏರಿಕೆ! 4 ತಿಂಗಳಲ್ಲಿ ಶೇ 30ರಷ್ಟು ಹೆಚ್ಚಳ
Read the story



