ಬೆಂಗಳೂರು ಜ್ಯುವೆಲ್ಲರಿ ಶೋರೂಮ್ ವ್ಯಾಪಾರಿಗೆ ಟೋಪಿ.. ಮಹಿಳೆ ಬಂಧನ
ಚಿನ್ನಾಭರಣ ಮಳಿಗೆಯೊಂದರಲ್ಲಿ (Jewellery Shop) ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದ ಮಹಿಳೆಯನ್ನು ಬೆಂಗಳೂರು ಪುಲಕೇಶಿನನಗರ ಪೊಲೀಸರು ಬಂಧಿಸಿದ್ದಾರೆ.
- ಜ್ಯುವೆಲ್ಲರಿ ಶೋರೂಮ್ ವ್ಯಾಪಾರಿಗೆ ವಂಚಿಸಿದ ಮಹಿಳೆ.
- ₹2.42 ಕೋಟಿ ಮೌಲ್ಯದ ಚಿನ್ನಾಭರಣ ಪಡೆದು ಹಣ ಕೊಡದೆ ಬೆದರಿಕೆ.
- ಆರೋಪಿಯನ್ನು ಬಂಧಿಸಿ ಚಿನ್ನಾಭರಣ ಮತ್ತು ಕಾರು ವಶ.
ಬೆಂಗಳೂರು (Bengaluru): ಮಾಜಿ ಸಚಿವರೊಬ್ಬರ ಆಪ್ತಳು ಎಂದು ಬಿಂಬಿಸಿ ಚಿನ್ನಾಭರಣ ಮಳಿಗೆಯೊಂದರಲ್ಲಿ (Jewellery Shop) ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದ ಮಹಿಳೆಯನ್ನು ಬೆಂಗಳೂರು ಪುಲಕೇಶಿನನಗರ ಪೊಲೀಸರು ಬಂಧಿಸಿದ್ದಾರೆ.
ಬಾಗಲಗುಂಟೆ ನಿವಾಸಿ ಶ್ವೇತಗೌಡ ಆರೋಪಿ. ಕಮರ್ಷಿಯಲ್ ಸ್ಟ್ರೀಟ್‌ನಲ್ಲಿರುವ ಜ್ಯುವೆಲ್ಲರಿ ಶೋರೂಮ್‌ಗೆ (Jewellery) ತೆರಳಿದ ಆಕೆ ಜ್ಯುವೆಲ್ಲರಿ ವ್ಯಾಪಾರ ಆರಂಭಿಸಲಿದ್ದೇನೆ ಮತ್ತು ನಿಮ್ಮಿಂದ ದೊಡ್ಡ ಪ್ರಮಾಣದಲ್ಲಿ ಆಭರಣಗಳನ್ನು ಖರೀದಿಸುವುದಾಗಿ ಮತ್ತು ಮಾಜಿ ಸಚಿವ ವರ್ತೂರು ಪ್ರಕಾಶ್ ಅವರಿಗೆ ತಾನು ಆಪ್ತಳು ಎಂದು ಪರಿಚಯಿಸಿಕೊಂಡಳು.
ಆಕೆಯ ಮಾತನ್ನು ನಂಬಿದ ಜ್ಯುವೆಲ್ಲರ್ಸ್ ಮಾಲೀಕರು ಆಗಸ್ಟ್ 26ರಿಂದ ಡಿಸೆಂಬರ್ 8ರವರೆಗೆ 2.42 ಕೋಟಿ ರೂ. ಚಿನ್ನಾಭರಣ ಕೊಟ್ಟಿದ್ದಾರೆ, ಬಳಿಕ ಹಣ ನೀಡದೆ ಕೇಳಿದಾಗ ಬೆದರಿಸಿದ್ದಾರೆ.
ಈ ಕುರಿತು ಪೊಲೀಸರಿಗೆ ದೂರು ನೀಡಿದಾಗ ಮೈಸೂರಿನಲ್ಲಿ ಶ್ವೇತಗೌಡನನ್ನು ಬಂಧಿಸಿ ಚಿನ್ನಾಭರಣ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆಗೆ ಹಾಜರಾಗುವಂತೆ ಮಾಜಿ ಸಚಿವ ವರ್ತೂರು ಪ್ರಕಾಶ್‌ಗೆ ನೋಟಿಸ್ ನೀಡಲಾಗಿದೆ.
ದಿನನಿತ್ಯ ಅನೇಕರು ಭೇಟಿಯಾಗುತ್ತಾರೆ ಎಂದ ಪ್ರಕಾಶ್, ಶ್ವೇತಗೌಡ ಕೂಡ ಒಟ್ಟಾಗಿ ಸಮಾಜಸೇವೆ ಮಾಡುತ್ತೇವೆ ಎಂದರು. ವಿಚಾರಣೆಗೆ ಹೋಗುತ್ತೇನೆ ಎಂದರು.
Bengaluru Woman Arrested for 2.42 Crore Jewellery Fraud