ಬೆಸ್ಕಾಂನಲ್ಲಿ 510 ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭ
ಬೆಸ್ಕಾಂ 510 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಫೆಬ್ರವರಿ 1ರಿಂದ 20ರವರೆಗೆ ಅರ್ಜಿ ಸಲ್ಲಿಸಬಹುದು. ಶಾರ್ಟ್‌ಲಿಸ್ಟ್, ದಾಖಲೆ ಪರಿಶೀಲನೆ ದಿನಾಂಕ ಹಾಗೂ ಇತರ ವಿವರಗಳು ಇಲ್ಲಿವೆ.
- ಬೆಸ್ಕಾಂನಲ್ಲಿ ಒಟ್ಟು 510 ಅಪ್ರೆಂಟಿಸ್ ಹುದ್ದೆಗಳ ಭರ್ತಿ
- ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಫೆಬ್ರವರಿ 20, 2025
- ಶಾರ್ಟ್‌ಲಿಸ್ಟ್ ಪಟ್ಟಿ ಪ್ರಕಟಣೆ ಮಾರ್ಚ್ 1, 2025
ಬೆಂಗಳೂರು (Bengaluru): ಬೆಸ್ಕಾಂ (BESCOM) ನಲ್ಲಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ (BESCOM Recruitment 2025) ಪ್ರಕ್ರಿಯೆ ಪ್ರಾರಂಭವಾಗಿದೆ. ಒಟ್ಟು 510 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
ಖಾಲಿ ಹುದ್ದೆಗಳ ವಿವರ:
ಪದವಿ (ಇ & ಇ ಎಂಜಿನಿಯರಿಂಗ್): 130 ಹುದ್ದೆಗಳು
ಪದವಿ (ಇತರ ಶಾಖೆಗಳು): 305 ಹುದ್ದೆಗಳು
ಡಿಪ್ಲೊಮಾ: 75 ಹುದ್ದೆಗಳು
ಅರ್ಹತಾ ಮಾನದಂಡ:
ಪದವಿ (ಇ & ಇ ಎಂಜಿನಿಯರಿಂಗ್): ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್‌ನಲ್ಲಿ BE/B.Tech ಪದವಿ.
ಪದವಿ (ಇತರ ಶಾಖೆಗಳು): ಯಾವುದೇ ಸಂಬಂಧಿತ ಇಂಜಿನಿಯರಿಂಗ್ ಶಾಖೆಯಲ್ಲಿ BE/B.Tech ಪದವಿ.
ಡಿಪ್ಲೊಮಾ: ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಮಾನ್ಯತೆ ಪಡೆದ ಡಿಪ್ಲೊಮಾ ಕೋರ್ಸ್.
ವಯೋಮಿತಿ:
ಪದವಿ ಮತ್ತು ಡಿಪ್ಲೊಮಾ ಅಭ್ಯರ್ಥಿಗಳು: 18 ರಿಂದ 25 ವರ್ಷ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ಅಭ್ಯರ್ಥಿಗಳು BESCOM ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ NATS ಪೋರ್ಟಲ್ ನಲ್ಲಿ ನೋಂದಾಯಿಸಿ. ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಮುಖ್ಯ ದಿನಾಂಕಗಳು:
- ಅರ್ಜಿ ಆರಂಭ ದಿನಾಂಕ: ಫೆಬ್ರವರಿ 1, 2025
- ಅರ್ಜಿ ಕೊನೆ ದಿನಾಂಕ: ಫೆಬ್ರವರಿ 20, 2025
- ಶಾರ್ಟ್‌ಲಿಸ್ಟ್ ಪಟ್ಟಿ ಪ್ರಕಟಣೆ: ಮಾರ್ಚ್ 1, 2025
- ದಾಖಲೆ ಪರಿಶೀಲನೆ: ಮಾರ್ಚ್ 10 ರಿಂದ 12, 2025
BESCOM Recruitment 2025, Apply for 510 Apprentice Posts
Our Whatsapp Channel is Live Now 👇