Bangalore NewsKarnataka News

6 ತಿಂಗಳಿನಿಂದ ಕರೆಂಟ್ ಬಿಲ್ ಕಟ್ಟಿಲ್ಲದವರಿಗೆ ಬಿಗ್ ಅಪ್ಡೇಟ್! ವಿದ್ಯುತ್ ಬಿಲ್ ಕುರಿತಂತೆ ಹೊಸ ಸುದ್ದಿ

ರಾಜ್ಯ ಸರ್ಕಾರದ ನಿಯಮಗಳನ್ನು ನಾವೆಲ್ಲರು ಪಾಲಿಸಲೇಬೇಕು. ಸರ್ಕಾರ ನಮಗಾಗಿ ಕೊಡುವ ಪ್ರಮುಖ ಸೌಲಭ್ಯಗಳಲ್ಲಿ ಒಂದು ವಿದ್ಯುತ್ ಸಂಪರ್ಕ ಆಗಿದೆ. ಹೌದು, ಸರ್ಕಾರ ವಿದ್ಯುತ್ ಸೌಲಭ್ಯ ನೀಡುತ್ತದೆ, ನಾವು ಬಳಸಿದ ವಿದ್ಯುತ್ ಗೆ ಪ್ರತಿ ತಿಂಗಳು ನಾವು ಹಣ ಪಾವತಿ ಮಾಡಬೇಕು. ಆದರೆ ಕಾಂಗ್ರೆಸ್ ಸರ್ಕಾರವು ನಮ್ಮ ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆಯನ್ನು (Gruha Jyothi Scheme) ಜಾರಿ ಮಾಡಿದ್ದು, ಇದರಿಂದ 200 ಯೂನಿಟ್ ವರೆಗು ಉಚಿತ ವಿದ್ಯುತ್ (Free Electricity) ಪ್ರತಿ ತಿಂಗಳು ಸಿಗುತ್ತದೆ..

ಆದರೆ ಸರ್ಕಾರವೇ ತಿಳಿಸಿರುವ ಹಾಗೆ 200 ಯೂನಿಟ್ ಗಿಂತ ಜಾಸ್ತಿ ವಿದ್ಯುತ್ ಬಳಕೆ ಮಾಡಿದರೆ, ಅಂಥವರು ಪೂರ್ತಿ ವಿದ್ಯುತ್ ಬಳಸಿದ ಮೊತ್ತವನ್ನು ಪಾವತಿ ಮಾಡಬೇಕು ಎನ್ನುತ್ತದೆ ಸರ್ಕಾರ. ಹಾಗಾಗಿ ನಾವು ವಿದ್ಯುತ್ ಬಿಲ್ ಗಳನ್ನು ಹಾಗೆಯೇ ಬಿಡುವ ಹಾಗಿಲ್ಲ.

sudden rise in electricity prices even Gruha Jyothi Yojana

ಈ ಕಾರಣಕ್ಕೆ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ನಿಮಗೆ ಬರಲ್ಲ! ಇಲ್ಲಿದೆ ಡೀಟೇಲ್ಸ್ ತಿಳಿಯಿರಿ

ಕರೆಂಟ್ ಬಿಲ್ ವಿಚಾರಕ್ಕೆ ಸರ್ಕಾರದ ನಿಯಮಗಳು ಏನೇನು? ಒಂದು ವೇಳೆ ನೀವು ಕರೆಂಟ್ ಬಿಲ್ (Electricity Bill) ಕಟ್ಟಿಲ್ಲ ಅಂದ್ರೆ ಏನಾಗುತ್ತದೆ? ಕರೆಂಟ್ ಬಿಲ್ ಕಟ್ಟೋಕೆ ಎಷ್ಟು ದಿನಗಳ ಸಮಯ ಸಿಗುತ್ತದೆ? ಎಲ್ಲವನ್ನು ತಿಳಿಸುತ್ತೇವೆ ನೋಡಿ..

Electricity billಸರ್ಕಾರದಿಂದ ಬರುತ್ತದೆ ನೋಟಿಸ್

ನೀವು ವಿದ್ಯುತ್ ಬಿಲ್ ಕಟ್ಟಿಲ್ಲ ಎಂದು ಒಂದು ತಿಂಗಳಿಗೆ ವಿದ್ಯುತ್ ಸಂಪರ್ಕ ಕಡಿತ ಗೊಳಿಸುವ ಹಾಗೆ ಇರುವುದಿಲ್ಲ. 6 ತಿಂಗಳವರೆಗು ನಿಮಗೆ ವಿದ್ಯುತ್ ಬಿಲ್ ಕಟ್ಟಲು ಸಮಯ ಇರುತ್ತದೆ. ಅಷ್ಟು ಸಮಯವನ್ನು ಸರ್ಕಾರ ನಿಮಗೆ ಕೊಡುತ್ತದೆ.

6 ತಿಂಗಳಾದರೂ ಬಿಲ್ ಕಟ್ಟಿಲ್ಲ ಎಂದರೆ ಮೊದಲು ನಿಮ್ಮ ಮನೆಗೆ ಬಿಲ್ ಪಾವತಿ ಮಾಡುವಂತೆ ಸರ್ಕಾರದಿಂದ ನೋಟಿಸ್ ಬರುತ್ತದೆ. ನೋಟಿಸ್ ಬಂದಮೇಲು ಸಹ ನೀವು ಬಿಲ್ ಪಾವತಿ ಮಾಡದೇ ಹೋದರೆ ಮಾತ್ರ ನಿಮ್ಮ ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತ ಗೊಳಿಸಲಾಗುತ್ತದೆ.

ರದ್ದಾಗಲಿದೆ ಇಂತಹ ಜನರ ಬಿಪಿಎಲ್ ರೇಷನ್ ಕಾರ್ಡ್! ಮುಲಾಜಿಲ್ಲ ಸರ್ಕಾರದಿಂದ ಖಡಕ್ ವಾರ್ನಿಂಗ್

ಈಗಿನ ಕಾಲದಲ್ಲಿ ಜನರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳಲ್ಲಿ ಒಂದು ವಿದ್ಯುತ್ ಸಂಪರ್ಕ ಆಗಿದೆ. ವಿದ್ಯುತ್ ಇಲ್ಲದೇ ದಿನನಿತ್ಯದ ಕೆಲಸಗಳು ನಡೆಯುವುದು ಕಷ್ಟ ಆಗುತ್ತದೆ. ರಾತ್ರಿಯಲ್ಲಿ ಬೆಳಕು, ಲೈಟ್ ಗಳು, ಇಂಡಕ್ಷನ್ ಸ್ಟವ್ ಅಡುಗೆ, ಎಸಿ, ಫ್ರಿಜ್, ಫ್ಯಾನ್ ಇದೆಲ್ಲವೂ ಕೆಲಸ ಮಾಡುವುದು ವಿದ್ಯುತ್ ಇಂದ. ದಿನನಿತ್ಯದ ಜೀವನಕ್ಕೆ ವಿದ್ಯುತ್ ಬೇಕೇ ಬೇಕು. ಹಾಗಾಗಿ ನೀವು ಒಂದು ತಿಂಗಳು ವಿದ್ಯುತ್ ಬಿಲ್ ಕಟ್ಟಿಲ್ಲ ಎಂದು ಅಮಾನುಷವಾಗಿ ವಿದ್ಯುತ್ ಕಡಿತಗೊಳಿಸಲು ಸಾಧ್ಯ ಆಗುವುದಿಲ್ಲ.

Free Electricityಅಕಸ್ಮಾತ್ ಸರ್ಕಾರದ ಈ ನಿಯಮವನ್ನು ಇಲಾಖೆಯೇ ಪಾಲಿಸದೇ ಒಂದೆರಡು ತಿಂಗಳಿಗೆ ವಿದ್ಯುತ್ ಕಡಿತಗೊಳಿಸಿದರೆ, ನೋಟಿಸ್ ನೀಡದೆಯೇ ನಿಮ್ಮ ಮನೆಯ ವಿದ್ಯುತ್ ಕಡಿತಗೊಳಿಸಿದರೆ, ಆಗ ನೀವು ಅಧಿಕಾರಿಗಳ ವಿರುದ್ಧ ಡಿಪಾರ್ಟ್ಮೆಂಟ್ ವಿರುದ್ಧ ಕೇಸ್ ಹಾಕಬಹುದು. ಕಾನೂನಿನ ಮೂಲಕ ಹೋರಾಟ ಮಾಡಬಹುದು. ಆ ರೀತಿ ಆದಾಗ ಇಲಾಖೆಗೆ ಸರ್ಕಾರದಿಂದ ದಂಡ ಬೀಳುತ್ತದೆ ಜೊತೆಗೆ ನಿಮಗೆ ಬಿಲ್ ನಲ್ಲಿ ವಿನಾಯಿತಿ ಸಹ ಸಿಗುತ್ತದೆ. ಹಾಗಾಗಿ ಈ ನಿಯಮಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.

Big update for those who have not paid their Electricity bill from 6 months

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories