ಮಂಡ್ಯ to ಬೆಂಗಳೂರು: 500ಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿ ಚಾಲಕರ ಶಾಂತಿಯುತ ರ‍್ಯಾಲಿ
ಬೈಕ್ ಟ್ಯಾಕ್ಸಿ ರೈಡರ್‌ಗಳು ಮತ್ತೆ ಕೆಲಸಕ್ಕೆ ಅವಕಾಶ ಕೊಡಬೇಕು ಎಂಬ ಒತ್ತಾಯದೊಂದಿಗೆ ರಸ್ತೆಗಿಳಿದಿದ್ದಾರೆ.

- 500ಕ್ಕೂ ಹೆಚ್ಚು ರೈಡರ್‌ಗಳು ಬೆಂಗಳೂರಿಗೆ ಶಾಂತಿಯುತ ರ್ಯಾಲಿ
- ನಿಷೇಧದಿಂದ 6 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಸಂಕಟಕ್ಕೆ ತುತ್ತಾಗಿವೆ
- ಬೈಕ್ ಟ್ಯಾಕ್ಸಿಗಳ ಕೊರತೆ ಸಾರ್ವಜನಿಕರಿಗೂ ತೊಂದರೆ
ಮಂಡ್ಯ/ ಬೆಂಗಳೂರು (Bengaluru) ಜೂನ್ 21, 2025: ಕರ್ನಾಟಕದ ವಿವಿಧ ಭಾಗಗಳಿಂದ ಬಂದ ಸಾವಿರಾರು ಬೈಕ್ ಟ್ಯಾಕ್ಸಿ ರೈಡರ್‌ಗಳು ಇಂದು ಬೆಳಿಗ್ಗೆ ಮಂಡ್ಯದಿಂದ ಬೆಂಗಳೂರಿನ ವಿಧಾನಸೌಧವರೆಗೆ ಬೃಹತ್ ಶಾಂತಿಯುತ ರ‍್ಯಾಲಿಯಲ್ಲಿ ಭಾಗವಹಿಸಿದರು.
ತಮ್ಮ ನೌಕರಿ ಕಳೆದುಕೊಂಡ ರೈಡರ್‌ಗಳು ಸರ್ಕಾರದ ಬೈಕ್ ಟ್ಯಾಕ್ಸಿ ನಿಷೇಧದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇವರ ಒತ್ತಾಯ ಸರಳವಾಗಿದೆ – “ನಾವು ಬದುಕು ಕಟ್ಟಿಕೊಳ್ಳಲು ನಮ್ಮ ಕೆಲಸವನ್ನು ಮರಳಿ ನೀಡಲಿ!” ಎಂಬುದು.
ಇದನ್ನೂ ಓದಿ: ಬಿಪಿಎಲ್ ರೈತರಿಗೆ ಉಚಿತ ಹಸು ಹಾಗೂ ಮೇವು ಯಂತ್ರ ಯೋಜನೆಗೆ ಅರ್ಜಿ ಆಹ್ವಾನ
ಈ ಪ್ರತಿಭಟನೆಯಲ್ಲಿ ಮೈಸೂರು, ರಾಮನಗರ, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ತುಮಕೂರು ಸೇರಿದಂತೆ ಎಂಟು ಪ್ರಮುಖ ನಗರಗಳಿಂದ ಬಂದು 5,00ಕ್ಕೂ ಹೆಚ್ಚು ರೈಡರ್‌ಗಳು ಪಾಲ್ಗೊಂಡಿದ್ದರು. ಅವರಿಗೆ ಇದು ಬರೀ ಉದ್ಯೋಗದ ಪ್ರಶ್ನೆಯಲ್ಲ, ಬದುಕಿನ ಪ್ರಶ್ನೆ. ನಿಷೇಧದಿಂದ ಸುಮಾರು 6 ಲಕ್ಷಕ್ಕೂ ಹೆಚ್ಚು ರೈಡರ್‌ಗಳು ತಮ್ಮ ಆದಾಯವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ.
ವೈಯಕ್ತಿಕ ಆಘಾತಗಳ ನಡುವೆಯೂ ರೈಡರ್‌ಗಳು ಸರ್ಕಾರಕ್ಕೆ ಶಾಂತಿಯುತವಾಗಿ ಮನವಿ ಮಾಡಿದ್ದಾರೆ – ನಿಯಂತ್ರಣ ಮತ್ತು ಸುರಕ್ಷತಾ ಮಾನದಂಡಗಳೊಂದಿಗೆ ನಿಯಮಾತ್ಮಕ ಚಟುವಟಿಕೆಗೆ ಅವಕಾಶ ನೀಡಬೇಕು. ಜೊತೆಗೆ ಅವರ ಆಶಯ – “ನಾವು ಎಲ್ಲ ಕಾನೂನುಗಳಿಗೆ ಬದ್ಧವಾಗಿರುತ್ತೇವೆ” ಎಂಬುದಾಗಿದೆ.
ಪ್ರತಿದಿನದ ಪ್ರಯಾಣಕ್ಕಾಗಿ ಬೈಕ್ ಟ್ಯಾಕ್ಸಿಗಳನ್ನೇ ನಂಬಿದ ಸಾರ್ವಜನಿಕರು ಈಗ ಹೆಚ್ಚು ಬಾಡಿಗೆ, ಟ್ರಾಫಿಕ್ (traffic) ಸಮಸ್ಯೆ ಹಾಗೂ ಲಭ್ಯವಿರುವ ಕೆಲವೇ ಆಯ್ಕೆಗಳಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಇದು ಒಂದು ಕೈಗೆಟುಕುವ ಪರಿಹಾರವನ್ನು ಕಳೆದುಕೊಳ್ಳುವಂತಾಗಿದೆ.
ಇದನ್ನೂ ಓದಿ: ಬಿಪಿಎಲ್ ಕಾರ್ಡ್‌ಗೆ ರಾಗಿ, ಅಕ್ಕಿ, ಜೋಳ ಉಚಿತ! ಕರ್ನಾಟಕ ಸರ್ಕಾರ ಹೊಸ ನಿರ್ಧಾರ
ಇನ್ನೊಂದು ಮಹತ್ವದ ವಿಚಾರವೆಂದರೆ – ಭಾರತದಲ್ಲಿ ಈಗಾಗಲೇ 19 ರಾಜ್ಯಗಳು ಬೈಕ್ ಟ್ಯಾಕ್ಸಿಗಳಿಗೆ ಅನುಮೋದಿತ (approved) ನೀತಿಗಳನ್ನು ರೂಪಿಸಿವೆ. “ಕರ್ನಾಟಕ ಏಕೆ ನಿರ್ಧಾರ ಹೊರಡಿಸಿದೆ?” ಎಂಬುದೇ ರೈಡರ್‌ಗಳ ಪ್ರಶ್ನೆ. “ನಮ್ಮ ಸೇವೆಗೆ ಕಟ್ಟುನಿಟ್ಟಾದ ಮಾರ್ಗಸೂಚಿ ರೂಪಿಸಿದರೆ, ನಾವು ಪೂರ್ತಿಯಾಗಿ ಪಾಲನೆ ಮಾಡುತ್ತೇವೆ,” ಎಂದು ರೈಡರ್‌ಗಳು ಹೇಳುತ್ತಿದ್ದಾರೆ.
ಮೈಸೂರಿನ ರೈಡರ್ ಶಿವಕುಮಾರ್ ತಮ್ಮ ದುಃಖ ಹಂಚಿಕೊಂಡು: “ಇದೊಂದು ನಿಷೇಧ ಮಾತ್ರವಲ್ಲ – ಇದು ನಮ್ಮ ಬದುಕು, ನಮ್ಮ ಘನತೆ, ನಮ್ಮ ಭರವಸೆಯ ನಾಶ. ಈಗ ಬಾಡಿಗೆ, ವಿದ್ಯುತ್ ಬಿಲ್, ದಿನಸಿ ಎಲ್ಲವೂ ಬಾಕಿಯಾಗಿದೆ. ಸಾಲ ಮಾಡುವ ಪರಿಸ್ಥಿತಿ ಇದೆ.” ಎಂಬುದಾಗಿದೆ
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಬದಲಾವಣೆ, ಸಚಿವರು ಕೊಟ್ರು ಅಪ್ಡೇಟ್! ಭಾರೀ ಸುದ್ದಿ
ಸಾರ್ವಜನಿಕರ ಬೆಂಬಲವಿಲ್ಲದೇ, ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುವ ದಾರಿ ಇಲ್ಲ ಎನ್ನುವ ರೈಡರ್‌ಗಳು ಈ ರ್ಯಾಲಿ ಮೂಲಕ ತಮ್ಮ ಬದುಕು ಉಳಿಸಿಕೊಳ್ಳಲು ಕೊನೆಯ ಆಲೋಚನೆಯಾಗಿ ಬೀದಿಗಿಳಿದಿದ್ದಾರೆ.
ಬೈಕ್ ಟ್ಯಾಕ್ಸಿಗಳಿಲ್ಲದೆ ನಾವು ಆದಾಯ ಕಳೆದುಕೊಂಡಿದ್ದೇ ಅಲ್ಲದೆ ನಮ್ಮ ಘನತೆ ಮತ್ತು ಭರವಸೆಯನ್ನೂ ಕಳೆದುಕೊಂಡಿದ್ದೇವೆ. ನಮಗೆ ಮತ್ತೆ ಕೆಲಸ ಮಾಡಲು ಅವಕಾಶ ಕಲ್ಪಿಸಿದರೆ ಯಾವುದೇ ನಿಯಮಗಳು ಅಥವಾ ಮಾರ್ಗಸೂಚಿಗಳನ್ನು ಅನುಸರಿಸಲು ಸಿದ್ಧ ಎನ್ನುತ್ತಾರೆ ರೈಡರ್ ಗಳು.
Bike Taxi Ban in Karnataka, bike Riders Rally from Mandya to Bengaluru
ನಾಳೆಯ ದಿನ ಭವಿಷ್ಯ 05-11-2026, ಗುರುವಾರ
Read the story
ಕೆಎಸ್ಆರ್ಟಿಸಿ ಉಚಿತ ಚಾಲನಾ ತರಬೇತಿ! ಡ್ರೈವಿಂಗ್ ಕಲಿಯಲು, ಲೈಸೆನ್ಸ್ ಪಡೆಯಲು ಅವಕಾಶ
Read the story
ಬಸ್ ಟಿಕೆಟ್ ದರ ಏರಿಕೆ ಕುರಿತು ಸಾರಿಗೆ ಸಚಿವ ಬೈರತಿ ಸುರೇಶ್ ಸ್ಪಷ್ಟನೆ; ಹೇಳಿದ್ದೇನು ಗೊತ್ತಾ?
Read the story
ಜಿಯೋ ಗ್ರಾಹಕರಿಗೆ ಸಿಹಿಸುದ್ದಿ: ₹200ಕ್ಕಿಂತ ಕಡಿಮೆ ಬೆಲೆಗೆ 4 ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ
Read the story



