ಗೃಹಲಕ್ಷ್ಮಿ ಯೋಜನೆ ಬದಲಾವಣೆ, ಸಚಿವರು ಕೊಟ್ರು ಅಪ್ಡೇಟ್! ಭಾರೀ ಸುದ್ದಿ

ಏಪ್ರಿಲ್ ಹಣ ಬಿಡುಗಡೆ ಆಗಿದ್ದು, ಮೇ ತಿಂಗಳ ಹಣ ಮಾತ್ರ ತಡವಾಗಿದೆ. ಯಾವುದೇ ತಾಂತ್ರಿಕ ತೊಂದರೆ ಇಲ್ಲ. ಫಲಾನುಭವಿಗಳ ಪರಿಷ್ಕರಣೆ ಇಲ್ಲದೆ ಯೋಜನೆ ನಿಯಮದಂತೆ ಮುಂದುವರಿಯಲಿದೆ ಎಂದು ಸಚಿವರು ತಿಳಿಸಿದ್ದಾರೆ.

  • ಗೃಹಲಕ್ಷ್ಮಿ ಯೋಜನೆ ಮುಂದುವರಿಯಲಿದೆ, ಯಾವುದೇ ಬದಲಾವಣೆ ಇಲ್ಲ
  • ಮೇ ತಿಂಗಳ ಹಣ ಮಾತ್ರ ಬಾಕಿ, ಉಳಿದದ್ದು ಬಿಡುಗಡೆ ಆಗಿದೆ
  • ಫಲಾನುಭವಿಗಳ ಪರಿಷ್ಕರಣೆ ಮಾಡುವ ಉದ್ದೇಶವೇ ಇಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷ್ಮಿ (Graha lakshmi Scheme) ಯೋಜನೆ ಕುರಿತಾಗಿ ಹಲವಾರು ಪ್ರಶ್ನೆಗಳು, ಗೊಂದಲಗಳು ಮುನ್ನೆಲೆಗೆ ಬರುತ್ತಿರುವ ನಡುವೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಸ್ಪಷ್ಟನೆ ನೀಡಿದ್ದಾರೆ.

ಯೋಜನೆ ಮುಂದುವರಿಯುತ್ತೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಿರುವ ವ್ಯವಸ್ಥೆಯಲ್ಲಿಯೇ ಯೋಜನೆ ಕಾರ್ಯರೂಪದಲ್ಲಿ ಇರುತ್ತದೆ ಎಂದರು.

ಇದನ್ನೂ ಓದಿ: ಮನೆ, ಅಸ್ತಿ ಖರೀದಿ ಮುನ್ನ ಅದರ ನಿಜವಾದ ಮಾಲೀಕ ಯಾರೆಂದು ಈ ರೀತಿ ಚೆಕ್ ಮಾಡಿ

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಅವರು, ಈವರೆಗೆ ಏಪ್ರಿಲ್ ತನಕದ ಹಣವನ್ನು ಬಿಡುಗಡೆಯಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗಿದ್ದು, ಮೇ (May) ತಿಂಗಳ ಹಣ ಮಾತ್ರ ಬಾಕಿಯಿದೆ ಎಂದರು.

ತಾಂತ್ರಿಕ (technical) ತೊಂದರೆ ಏನೂ ಇಲ್ಲ, ಆದರೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಪ್ರಕ್ರಿಯೆಯ ಕಾರಣದಿಂದ ಹಣ ಜಾರಿಗೆ ಒಂದು ಅಥವಾ ಎರಡು ವಾರ ತಡವಾಗಬಹುದು ಎಂಬುದನ್ನು ಸ್ಪಷ್ಟಪಡಿಸಿದರು.

Lakshmi Hebbalkar

ಇದನ್ನೂ ಓದಿ: ಪಡಿತರ ಚೀಟಿ ಗ್ರಾಮವಾರು ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿಕೊಳ್ಳಿ

ಪ್ರತಿ ತಿಂಗಳು ಹೊಸ ಅರ್ಜಿದಾರರು ಸೇರುತ್ತಿದ್ದಾರೆ

ಹಣಕಾಸು ‌ಇಲಾಖೆ (Finance Department) ಪ್ರತಿ ತಿಂಗಳು ನಿಗದಿತ ಹಣ ಬಿಡುಗಡೆ ಮಾಡುತ್ತಿದ್ದು, ಅದರಂತೆ ಕ್ರಮ ನಡೆಯುತ್ತಿದೆ. ಪ್ರತಿ ತಿಂಗಳು ಲಕ್ಷಾಂತರ ಹೊಸ ಮಹಿಳೆಯರು ಯೋಜನೆಗೆ ಸೇರುತ್ತಿದ್ದಾರೆ. ಈ ವೇಳೆಗೆ ಒಟ್ಟು 1.25 ಕೋಟಿ ಯಜಮಾನಿಯರು ಯೋಜನೆಯ ವ್ಯಾಪ್ತಿಗೆ ಬಂದಿದ್ದಾರೆ ಎಂಬುದಾಗಿ ಸಚಿವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸ್ವಂತ ವ್ಯಾಪಾರಕ್ಕೆ ಈ ಯೋಜನೆಯಲ್ಲಿ ಸಿಗುತ್ತೆ 2 ಲಕ್ಷ ಸಾಲ, 30,000 ಸಬ್ಸಿಡಿ

Gruha Lakshmi Scheme

ಪರಿಷ್ಕರಣೆ ಬಗ್ಗೆ ಎಲ್ಲಿಗೆ ವದಂತಿ?

ಯೋಜನೆಗೆ ಸಂಬಂಧಿಸಿದ ಯಾವುದೇ ಫಲಾನುಭವಿಗಳ ಪರಿಷ್ಕರಣೆ ನಡೆಯಲ್ಲ. ಈಗಿರುವ ಫಲಾನುಭವಿಗಳ ಪಟ್ಟಿಯೇ ಮುಂದುವರಿಯಲಿದೆ. “ಈ ಯೋಜನೆಯ ಉದ್ದೇಶ ಬದಲಿಸುವ ಪ್ರಶ್ನೆಯೇ ಇಲ್ಲ,” ಎಂದು ಸಚಿವರು ಸ್ಪಷ್ಟನೆ ನೀಡಿದರು. ಮಹಿಳೆಯರಿಗಾಗಿ ರೂಪಿಸಲಾದ ಈ ಯೋಜನೆ ರಾಜ್ಯದ ಲಕ್ಷಾಂತರ ಮಹಿಳೆಯರ ಭರವಸೆ ಕೂಡ ಹೌದು.

Only May Payment Pending for Gruha lakshmi Scheme

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories