ಪಡಿತರ ಚೀಟಿ ಗ್ರಾಮವಾರು ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿಕೊಳ್ಳಿ
ಕರ್ನಾಟಕ ಸರ್ಕಾರದಿಂದ 2025ರ ಪಡಿತರ ಚೀಟಿ ಗ್ರಾಮವಾರು ಪಟ್ಟಿ ಬಿಡುಗಡೆ ಮಾಡಲಾಗಿದೆ. ನಿಮ್ಮ ಹೆಸರು ಪಟ್ಟಿಯಲ್ಲಿ ಇದೆಯೆ? DBT ಸ್ಥಿತಿ ಹಾಗೂ ಅರ್ಜಿ ತಿದ್ದುಪಡಿ ಸ್ಥಿತಿಯನ್ನೂ ಚೆಕ್ ಮಾಡಬಹುದು!
Publisher: Kannada News Today (Digital Media)
- ಪಡಿತರ ಚೀಟಿ ಗ್ರಾಮವಾರು ಪಟ್ಟಿ 2025 ಅಪ್‌ಡೇಟ್
- DBT ಹಣ ನಿಮ್ಮ ಖಾತೆಗೆ ಬಂದಿದೆಯೆ ತಿಳಿಯೋದು ಈಗ ಸುಲಭ
- ತಿದ್ದುಪಡಿ ಅರ್ಜಿ ಸ್ಥಿತಿಯನ್ನೂ ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು
ಬೆಂಗಳೂರು (Bengaluru): ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಪಡಿತರ ಚೀಟಿ (Karnataka Ration Card) ನೀಡಲಾಗಿದೆ.
ಇದೀಗ ಗ್ರಾಮವಾರು ಪಟ್ಟಿ 2025 (village-wise ration card list) ಪ್ರಕಟವಾಗಿದೆ. ಈ ಮೂಲಕ ನಿಮ್ಮ ಹೆಸರು ಪಟ್ಟಿ ಸೇರಿದೆಯೆ ಎಂಬುದನ್ನು ಸುಲಭವಾಗಿ ಪರಿಶೀಲಿಸಬಹುದು.
ನೀವು ಹತ್ತಿರದ ಗ್ರಾಮ ಪಂಚಾಯತ್ ಅಥವಾ ನ್ಯಾಯಬೆಲೆ ಅಂಗಡಿಗೆ ಹೋಗದೇ ಅಧಿಕೃತ ವೆಬ್‌ಸೈಟ್ ಮೂಲಕ ಪಟ್ಟಿ ನೋಡಲು ಸಾಧ್ಯವಿದೆ. ಅಂತೆಯೇ, DBT (Direct Benefit Transfer) ಸ್ಥಿತಿ ಹಾಗೂ ತಿದ್ದುಪಡಿ ಅರ್ಜಿಯ ಸ್ಥಿತಿಯನ್ನೂ ಹಂತ ಹಂತವಾಗಿ ಪರಿಶೀಲಿಸಬಹುದು.
ಇದನ್ನೂ ಓದಿ: ಕೆಲಸ ಸಿಕ್ಕಿಲ್ವಾ? ಹಾಗಾದ್ರೆ ತಿಂಗಳಿಗೆ ₹3,000 ಕರ್ನಾಟಕ ಸರ್ಕಾರವೇ ಕೊಡುತ್ತೆ
ಪಡಿತರ ಚೀಟಿ ಪಟ್ಟಿ ಹೇಗೆ ನೋಡಬಹುದು?
- ಅಧಿಕೃತ ಆಹಾರ ಇಲಾಖೆಯ ವೆಬ್‌ಸೈಟ್‌ಗೆ (Ahara Karnataka) ಭೇಟಿ ನೀಡಿ
- E-Services ವಿಭಾಗದಲ್ಲಿ “E-Ration Card” ಆಯ್ಕೆಮಾಡಿ
- ನಂತರ “Village-wise Ration Card List” ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತ್, ಗ್ರಾಮವನ್ನು ಆಯ್ಕೆಮಾಡಿ
- Submit ಒತ್ತಿದ ಬಳಿಕ ನಿಮ್ಮ ಗ್ರಾಮದಲ್ಲಿ ಹೆಸರು ಇರುವ ಪಟ್ಟಿ ಕಾಣಿಸುತ್ತದೆ
- ನಿಮ್ಮ ಹೆಸರು ಅಥವಾ ಪಡಿತರ ಚೀಟಿ ಸಂಖ್ಯೆ ಬಳಸಿ ಪರಿಶೀಲಿಸಿ
ವೆಬ್‌ಸೈಟ್ ಕಾರ್ಯನಿರ್ವಹಿಸದಿದ್ದರೆ ಹತ್ತಿರದ ಪಂಚಾಯತ್ ಕಚೇರಿ ಸಂಪರ್ಕಿಸಿ.
ಇದನ್ನೂ ಓದಿ: ಇಂತವರಿಗೆ ಸಿಗಲ್ಲ ಗೃಹಲಕ್ಷ್ಮಿ ಹಣ! ಪಟ್ಟಿಯಿಂದ ಶೀಘ್ರವೇ ರದ್ದುಪಡಿಸಲು ಕ್ರಮ
ರೇಷನ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?
- Ahara Karnataka ಪೋರ್ಟಲ್‌ಗೆ ಹೋಗಿ
- E-Services → E-Ration Card → “Download Ration Card” ಆಯ್ಕೆಮಾಡಿ
- ನಿಮ್ಮ Ration Card ಸಂಖ್ಯೆ ನಮೂದಿಸಿ
- OTP (ಆಧಾರ್ ಜೋಡನೆ ಮಾಡಿದ ಮೊಬೈಲ್‌ಗೆ) ಪಡೆಯಿರಿ
- PDF ರೂಪದಲ್ಲಿ ಡೌನ್‌ಲೋಡ್ ಮಾಡಿ
ಆಧಾರ್ (Aadhaar) ಜೋಡನೆ ಅಗತ್ಯವಿದೆ
ಇದನ್ನೂ ಓದಿ: ಇಂತಹವರಿಗೆ ಪಿಂಚಣಿ ಹಣ ಬರಲ್ಲ! ಪಟ್ಟಿಯಲ್ಲಿ 23 ಲಕ್ಷ ಜನರ ಪಿಂಚಣಿ ರದ್ದು
DBT (Direct Benefit Transfer) ಸ್ಥಿತಿ ಹೇಗೆ ಚೆಕ್ ಮಾಡುವುದು?
- Ahara Karnataka ವೆಬ್‌ಸೈಟ್‌ಗೆ ಹೋಗಿ
- E-Status → DBT Status ಆಯ್ಕೆ ಮಾಡಿ
- ನಿಮ್ಮ ವಿಭಾಗ ಆಯ್ಕೆ ಮಾಡಿ (Bengaluru, Mysore, Kalaburagi…)
- ಪಡಿತರ ಚೀಟಿ ಸಂಖ್ಯೆ ನಮೂದಿಸಿ, ವಿವರಗಳು ಕಾಣಿಸುತ್ತವೆ
DBT ಮೂಲಕ BPL ಕುಟುಂಬಗಳಿಗೆ ನೀಡುವ ಯಾವುದೇ ಯೋಜನೆಯ ಹಣ ಈ ಮೂಲಕ ತಲುಪುತ್ತದೆ
ಇದನ್ನೂ ಓದಿ: ಇನ್ಮುಂದೆ ರೇಷನ್ ಕಾರ್ಡ್ ತಿದ್ದುಪಡಿಗೆ ಈ ದಾಖಲೆಗಳು ಬೇಕೇ ಬೇಕು! ಹೊಸ ರೂಲ್ಸ್
ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿ ಸ್ಥಿತಿ ನೋಡುವುದು ಹೇಗೆ?
- ಅಧಿಕೃತ ಪೋರ್ಟಲ್ ಓಪನ್ ಮಾಡಿ
- “New/Existing RC Request Status” ಆಯ್ಕೆ ಮಾಡಿ
- ಜಿಲ್ಲೆ ಆಯ್ಕೆ ಮಾಡಿ
- OTP ಅಥವಾ No-OTP ಆಯ್ಕೆ ಮಾಡಿ
- RC ಸಂಖ್ಯೆ ನಮೂದಿಸಿ, ನಿಮ್ಮ ತಿದ್ದುಪಡಿ ಸ್ಥಿತಿ ಇತ್ಯಾದಿ ಕಾಣಬಹುದು
Karnataka Ration Card Village List Released