Bengaluru NewsKarnataka News

ಕೆಲಸ ಸಿಕ್ಕಿಲ್ವಾ? ಹಾಗಾದ್ರೆ ತಿಂಗಳಿಗೆ ₹3,000 ಕರ್ನಾಟಕ ಸರ್ಕಾರವೇ ಕೊಡುತ್ತೆ

ನಿರುದ್ಯೋಗಿ ಪದವೀಧರರು, ಡಿಪ್ಲೋಮಾ ಪಡೆದವರು ರಾಜ್ಯ ಸರ್ಕಾರದ ಯುವನಿಧಿ ಯೋಜನೆಯಡಿ ಪ್ರತಿ ತಿಂಗಳು ರೂ.3,000/-ವರೆಗೆ ಭತ್ಯೆ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Publisher: Kannada News Today (Digital Media)

  • ಸೇವಾ ಸಿಂಧು (Seva Sindhu) ಮೂಲಕ ಅರ್ಜಿ ಸಲ್ಲಿಸಲು ಅವಕಾಶ
  • ಪ್ರತಿ ತಿಂಗಳು ರೂ.3,000/-ವರೆಗೆ ನಗದು ಪಾವತಿ
  • ಅರ್ಜಿ ಸಲ್ಲಿಸಲು ಅಗತ್ಯ ದಾಖಲೆ ಪಟ್ಟಿ ಬಿಡುಗಡೆ

ಬೆಂಗಳೂರು (Bengaluru): ಕರ್ನಾಟಕ ಸರ್ಕಾರದ (Yuvanidhi scheme) ಈ ಯೋಜನೆಯು 2025ರ ವಿದ್ಯಾರ್ಥಿಗಳಿಗೆ ಬಹುಮುಖ್ಯ ಘೋಷಣೆಯಾಗಿದೆ. ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ಪಡೆಯಲು ಅರ್ಹ ಅಭ್ಯರ್ಥಿಗಳು ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಈಗ ಅವಕಾಶವಿದೆ.

ವಿದ್ಯಾರ್ಥಿಗಳು Seva Sindhu (ಸೇವಾ ಸಿಂಧು ಪೋರ್ಟಲ್) ಅಥವಾ ಹತ್ತಿರದ ಗ್ರಾಮ ಒನ್ / ಕರ್ನಾಟಕ ಒನ್ ಕೇಂದ್ರಗಳ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: ಇಂತವರಿಗೆ ಸಿಗಲ್ಲ ಗೃಹಲಕ್ಷ್ಮಿ ಹಣ! ಪಟ್ಟಿಯಿಂದ ಶೀಘ್ರವೇ ರದ್ದುಪಡಿಸಲು ಕ್ರಮ

ಈ ಭತ್ಯೆ ಯೋಜನೆಯು 2024-25ನೇ ಸಾಲಿನಲ್ಲಿ ವ್ಯಾಸಂಗ ಮಾಡಿರುವ ಮತ್ತು 2025ರಲ್ಲಿ ಪದವಿ/ಪೋಸ್ಟ್‌ಗ್ರಾಜುಯೇಟ್ ಅಥವಾ ಡಿಪ್ಲೋಮಾ ಪೂರೈಸಿದ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ.

ಈ ಯೋಜನೆಯಡಿ ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರರಿಗೆ ಪ್ರತಿ ತಿಂಗಳು ರೂ.3,000/- ಮತ್ತು ಡಿಪ್ಲೋಮಾ ಪೂರೈಸಿದವರಿಗೆ ರೂ.1,500/- ನಗದು ಪಾವತಿಸಲಾಗುತ್ತದೆ. ಈ ಮೊತ್ತವನ್ನು ನೇರವಾಗಿ ಅಭ್ಯರ್ಥಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ (direct bank transfer).

ಇದನ್ನೂ ಓದಿ: ಇಂತಹವರಿಗೆ ಪಿಂಚಣಿ ಹಣ ಬರಲ್ಲ! ಪಟ್ಟಿಯಲ್ಲಿ 23 ಲಕ್ಷ ಜನರ ಪಿಂಚಣಿ ರದ್ದು

Yuva Nidhi Yojana - Yuva Nidhi Scheme

ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಕನಿಷ್ಟ 6 ವರ್ಷ ಕರ್ನಾಟಕದಲ್ಲಿ ನೆಲೆಸಿರಬೇಕು. ಅರ್ಜಿ ಸಲ್ಲಿಸಲು ಅಗತ್ಯವಿರುವ ಪ್ರಮುಖ ದಾಖಲೆಗಳಲ್ಲಿ ಆಧಾರ್ ಕಾರ್ಡ್, ಫೋಟೋ, ಅಂಕಪಟ್ಟಿ, ನಿರುದ್ಯೋಗ ಪ್ರಮಾಣ ಪತ್ರ, ಬ್ಯಾಂಕ್ ಪಾಸ್‌ಬುಕ್ ಹಾಗೂ ಮೊಬೈಲ್ ಸಂಖ್ಯೆ ಒಳಗೊಂಡಿದೆ. (Aadhaar, marks card, unemployment certificate) ಇವುಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು.

ಈ ಯೋಜನೆಯಲ್ಲಿನ ಮತ್ತೊಂದು ಮಹತ್ವದ ಅಂಶವೆಂದರೆ – ಈಗಾಗಲೇ ಭತ್ಯೆ ಪಡೆಯುತ್ತಿರುವ ಅಭ್ಯರ್ಥಿಗಳು ಪ್ರತೀ ಮೂರು ತಿಂಗಳಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಸ್ವಯಂ ಘೋಷಣೆ ನೀಡಬೇಕು. 1ರಿಂದ 25ನೇ ತಾರೀಖಿನೊಳಗೆ ಈ ಪ್ರಕ್ರಿಯೆ ಸಂಪೂರ್ಣಗೊಳಿಸಬೇಕಾಗುತ್ತದೆ.

ಇದನ್ನೂ ಓದಿ: ಇನ್ಮುಂದೆ ರೇಷನ್ ಕಾರ್ಡ್ ತಿದ್ದುಪಡಿಗೆ ಈ ದಾಖಲೆಗಳು ಬೇಕೇ ಬೇಕು! ಹೊಸ ರೂಲ್ಸ್

ಈ ಯೋಜನೆಯು ಯುವಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನೀಡಲು ಮತ್ತು ಜೀವನ ನಿರ್ವಹಣೆಯಲ್ಲಿ ಸಹಾಯ ಮಾಡುವ ನಿಟ್ಟಿನಲ್ಲಿ ರೂಪಿಸಲಾಗಿದೆ. ಇದು ರಾಜ್ಯ ಸರ್ಕಾರದ ಐದು ಖಾತರಿ ಯೋಜನೆಗಳಲ್ಲಿ ಒಂದು ಎನ್ನಬಹುದು.

ಅರ್ಜಿ ಸಲ್ಲಿಸಲು ವಿಳಂಬವಾಗದಂತೆ, ಹೆಚ್ಚಿನ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂಬುದು ಸರ್ಕಾರದ ಉದ್ದೇಶ.

Karnataka Yuvanidhi Scheme, Monthly Allowance for Unemployed Graduates

English Summary

Related Stories